ETV Bharat / science-and-technology

ಭದ್ರತಾ ಕಾರಣ: ಅಮೆರಿಕದಲ್ಲೂ ಟಿಕ್‌ಟಾಕ್ ನಿಷೇಧ? - ಕಿರು ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌

ಜನಪ್ರಿಯ ಕಿರು ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌ ಅನ್ನು ಭಾರತದ ಹಾದಿಯಲ್ಲಿ ನಿಷೇಧಿಸಲು ಯುನೈಟೆಡ್ ಸ್ಟೇಟ್ಸ್ ಯೋಜಿಸುತ್ತಿದೆ ಎಂದು ತಿಳಿದು ಬಂದಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Jan 28, 2023, 6:58 PM IST

Updated : Jan 28, 2023, 7:16 PM IST

ವಾಷಿಂಗ್ಟನ್: ಚೀನಾದ ಕಿರು ವಿಡಿಯೋ ತಯಾರಿಕೆ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ರಾಷ್ಟ್ರವ್ಯಾಪಿ ನಿಷೇಧಿಸಲು ಯುಎಸ್ ಯೋಜಿಸಿದೆ ಎಂದು ತಿಳಿದು ಬಂದಿದೆ. ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್‌ಟಾಕ್ ಬಳಕೆಯನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿರುವ ಮಸೂದೆಯ ಮೇಲೆ ಮುಂದಿನ ತಿಂಗಳು ಮತದಾನ ನಡೆಸಲು ಯೋಜಿಸಿದೆ ಎಂದು ಸಮಿತಿಯು ದೃಢಪಡಿಸಿದೆ.

ಕಳೆದ ತಿಂಗಳು, ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನೀಡಿದ ಮೊಬೈಲ್ ಸಾಧನಗಳಲ್ಲಿ ಚೀನಿ ಕಿರು ವಿಡಿಯೋ ತಯಾರಿಕೆ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ. ಎಲ್ಲ ಮೊಬೈಲ್ ಫೋನ್‌ಗಳಿಂದ ಟಿಕ್‌ಟಾಕ್ ಅಳಿಸಲು ಸದನವು ಸಿಬ್ಬಂದಿಗೆ ಆದೇಶಿಸಿದೆ. ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕ್‌ಕಾಲ್ ಅವರು ಯೋಜಿಸಿರುವ ಈ ಕ್ರಮವು ಅಮೆರಿಕದ ರಾಷ್ಟ್ರೀಯ ಭದ್ರತೆಗಾಗಿ ಟಿಕ್‌ಟಾಕ್ ಅನ್ನು ನಿಷೇಧಿಸಲು ಶ್ವೇತಭವನಕ್ಕೆ ಕಾನೂನು ಸಾಧನಗಳನ್ನು ನೀಡುವ ಗುರಿಯನ್ನು ಹೊಂದಿದೆ.

ರಾಷ್ಟ್ರೀಯ ಭದ್ರತಾ ಅಪಾಯ: "ಒಂದೇ ಸೇವೆಯನ್ನು ನಿಷೇಧಿಸುವ ಮೂಲಕ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಆ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸುವ ಪ್ರಯತ್ನಗಳ ಮೇಲೆ ಜನರು ತಮ್ಮ ಶಕ್ತಿಯನ್ನು ಕೇಂದ್ರೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಅಪ್ಲಿಕೇಶನ್‌ನ ಚೈನೀಸ್ ಮಾಲೀಕರಾಗಿದೆ. ಈ ಅಪ್ಲಿಕೇಶನ್ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದೆ. ಏಕೆಂದರೆ, ಇದು ಚೀನಾದ ಸರ್ಕಾರಕ್ಕೆ ಅಮೆರಿಕದ ಡೇಟಾ ಬಗ್ಗೆ ಮಾಹಿತಿ ನೀಡುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದ್ದು, ಇದು ರಾಷ್ಟ್ರೀಯ ಭದ್ರತಾ ಅಪಾಯವಾಗಿದೆ.

ಇದನ್ನೂ ಓದಿ: ಭಾರತದಲ್ಲಿನ ನಿಷೇಧಿತ ಆ್ಯಪ್​​ಗಳನ್ನು ನಿರ್ಬಂಧಿಸಿದ ಗೂಗಲ್​​

ಅಮೆರಿಕದ 19 ರಾಜ್ಯಗಳಲ್ಲಿನ ಸ್ಥಳೀಯ ಆಡಳಿತಗಳು ಈಗಾಗಲೇ ಟಿಕ್‌ಟಾಕ್ ಅನ್ನು ನಿಷೇಧಿಸಿವೆ. ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಪರಿಹರಿಸಲು ಟಿಕ್‌ಟಾಕ್ ಪ್ರಸ್ತುತ ಅಮೆರಿಕದ ನ್ಯಾಯಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಟಿಕ್‌ಟಾಕ್‌ನ ಮೂಲ ಕಂಪನಿಯಾದ ಚೀನಾ ಮೂಲದ ಬೈಟ್‌ಡ್ಯಾನ್ಸ್ ಕನಿಷ್ಠ ಇಬ್ಬರು ಯುಎಸ್ ಪತ್ರಕರ್ತರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಇತರ ಜನರ ಡೇಟಾವನ್ನು ಪ್ರವೇಶಿಸಿದೆ ಎಂದು ಹಿಂದಿನ ವರದಿಗಳು ಹೇಳಿಕೊಂಡಿವೆ.

ಇದನ್ನೂ ಓದಿ: ಡೇಟಾ ಭದ್ರತೆಗಾಗಿ ಟಿಕ್‌ಟಾಕ್ ನಿಷೇಧಿಸಲು ಮುಂದಾದ ಆಸ್ಟ್ರೇಲಿಯಾ

ಭಾರತದಲ್ಲಿ ಟಿಕ್‌ಟಾಕ್ ನಿಷೇಧ : 2020ರಲ್ಲಿ, ಚೀನಾದೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಂಡ ಆರೋಪಕ್ಕಾಗಿ ಭಾರತವು ಟಿಕ್‌ಟಾಕ್ ಮತ್ತು ಹಲವಾರು ಇತರ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಭಾರತ ಸರ್ಕಾರ ಜೂನ್ 2020ರಲ್ಲಿ 100 ಪ್ಲಸ್ ಇತರ ಚೀನೀ ಅಪ್ಲಿಕೇಶನ್‌ಗಳೊಂದಿಗೆ ಟಿಕ್‌ಟಾಕ್ ಅನ್ನು ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeITY), ಐಟಿ ಆಕ್ಟ್, 2000 ರ ಸೆಕ್ಷನ್ 69a ಅನ್ನು ಉಲ್ಲೇಖಿಸಿ, ಅಪ್ಲಿಕೇಶನ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಟಿಕ್‌ಟಾಕ್ ಭಾರತದಲ್ಲಿ 200 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಅಲ್ಲದೇ ನಿಷೇಧದ ಮೊದಲು ಬಳಕೆದಾರರಿಂದ ದೇಶವನ್ನು ಅದರ ಅತಿದೊಡ್ಡ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ: ಟಿಕ್‌ ಟಾಕ್ ಹಾಗೂ ಚೀನಿ ಇತರೆ ಆ್ಯಪ್​ಗಳ ನಿಷೇಧದತ್ತ ಅಮೆರಿಕ ಗಮನಹರಿಸಿದೆ: ಪೊಂಪಿಯೊ

Last Updated : Jan 28, 2023, 7:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.