ETV Bharat / science-and-technology

ಸ್ಪೀಚ್ ರೆಕಗ್ನಿಷನ್ ಸಾಫ್ಟ್​ವೇರ್ ಅಳವಡಿಸಿಕೊಳ್ಳಲಿದೆ ಯುಪಿ ವಿಧಾನಸಭೆ: ಟೆಂಡರ್ ಜಾರಿ

UP Assembly to introduce speech recognition software: ಉತ್ತರ ಪ್ರದೇಶ ವಿಧಾನಸಭೆಯು ತನ್ನ ಕಾರ್ಯಕಲಾಪದಲ್ಲಿ ಸ್ಪೀಚ್ ರೆಕಗ್ನಿಷನ್ ಸಾಫ್ಟ್​ವೇರ್ ಅಳವಡಿಸಿಕೊಳ್ಳಲು ಮುಂದಾಗಿದೆ.

UP Assembly to introduce speech recognition software

author img

By ETV Bharat Karnataka Team

Published : Nov 28, 2023, 12:16 PM IST

ಲಕ್ನೋ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಇನ್ನು ಮುಂದೆ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್ ಅನ್ನು ತನ್ನ ಕಲಾಪದಲ್ಲಿ ಅಳವಡಿಸಿಕೊಳ್ಳಲಿದೆ. ಸಾಫ್ಟ್​ವೇರ್ ಅಭಿವೃದ್ಧಿ ಮತ್ತು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಇಡೀ ಪ್ರಕ್ರಿಯೆಯನ್ನು ಇ-ಟೆಂಡರ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ.

ಹೊಸ ಸಾಫ್ಟ್​ವೇರ್ ವಿಧಾನಸಭೆಯಲ್ಲಿ ನಡೆಯುವ ಅಧಿವೇಶನಗಳು ಮತ್ತಷ್ಟು ಸುಗಮವಾಗಿ ಮತ್ತು ರಚನಾತ್ಮಕವಾಗಿ ನಡೆಯಲು ಅನುಕೂಲ ಮಾಡಿಕೊಡುವ ನಿರೀಕ್ಷೆಯಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. "ಕಲಾಪಗಳ ನೇರ ಪ್ರಸಾರದ ಸಮಯದಲ್ಲಿ ಗದ್ದಲದ ಶಬ್ದಗಳು ಹೆಚ್ಚಾಗಿ ಕೇಳಿಸುವ ಸಮಸ್ಯೆಯನ್ನು ಇದು ನಿವಾರಿಸಲಿದೆ. ಇದು ಲೈವ್‌ ಫೀಡ್​ಗಳನ್ನು ಸುಧಾರಿಸುವುದಲ್ಲದೆ, ವಿಧಾನಸಭಾ ಕಲಾಪಗಳ ಸಮಯದಲ್ಲಿ ವೀಡಿಯೊ ಔಟ್​ಪುಟ್​ಗೆ ಸಹಾಯ ಮಾಡಲಿದೆ" ಎಂದು ಅವರು ಹೇಳಿದರು.

ಇಡೀ ಬಿಡ್ಡಿಂಗ್ ಪ್ರಕ್ರಿಯೆಯನ್ನು ಇ-ಟೆಂಡರ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ. ಪೋರ್ಟಲ್ ಮೂಲಕ ಇ-ಟೆಂಡರ್​ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕವಾಗಿದ್ದು, ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಕೆಲಸ ಹಂಚಿಕೆ ಮತ್ತು ಸಾಫ್ಟ್​ವೇರ್ ಖರೀದಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ ಅನುಷ್ಠಾನದ ಮೂಲಕ ದೇಶಾದ್ಯಂತ ವಿವಿಧ ರಾಜ್ಯಗಳು ಈಗಾಗಲೇ ತಮ್ಮ ವಿಧಾನಸಭೆಯ ಕಾರ್ಯಕಲಾಪಗಳನ್ನು ಡಿಜಿಟಲೀಕರಣಗೊಳಿಸಿವೆ.

ಮೇ 2022 ರಲ್ಲಿ ವಿಧಾನಸಭೆಯಲ್ಲಿ 'ಇ-ವಿಧಾನ್ ಅಪ್ಲಿಕೇಶನ್' ಅನ್ನು ಪರಿಚಯಿಸುವ ಮೂಲಕ ಈಗಾಗಲೇ ಸದನದಲ್ಲಿ ತಾಂತ್ರಿಕ ರೂಪಾಂತರ ತರಲಾಗಿದೆ. ಆಗಿನಿಂದಲೂ ಎಲ್ಲಾ ಅಧಿವೇಶನಗಳನ್ನು ಈ ಅಪ್ಲಿಕೇಶನ್ ಬಳಸಿ ನಡೆಸಲಾಗುತ್ತಿದೆ. ಇದು ಹೆಚ್ಚು ತಂತ್ರಜ್ಞಾನ ಅಳವಡಿಕೆ ಮತ್ತು ಪರಿಣಾಮಕಾರಿ ಶಾಸಕಾಂಗ ಪ್ರಕ್ರಿಯೆಯತ್ತ ಮಹತ್ವದ ಹೆಜ್ಜೆಯಾಗಿದೆ.

ಸ್ಪೀಚ್ ರೆಕಗ್ನಿಷನ್ ಅಥವಾ ಸ್ಪೀಚ್-ಟು-ಟೆಕ್ಸ್ಟ್ ಇದು ಗಟ್ಟಿಯಾಗಿ ಮಾತನಾಡುವ ಪದಗಳನ್ನು ಗುರುತಿಸುವ ಮತ್ತು ಅವುಗಳನ್ನು ಓದಬಹುದಾದ ಪಠ್ಯವಾಗಿ ಪರಿವರ್ತಿಸುವ ಯಂತ್ರ ಅಥವಾ ಪ್ರೋಗ್ರಾಂನ ಸಾಮರ್ಥ್ಯವಾಗಿದೆ. ಮೂಲಭೂತ ಭಾಷಣ ಗುರುತಿಸುವಿಕೆ ಸಾಫ್ಟ್​ವೇರ್ ಸೀಮಿತ ಶಬ್ದಕೋಶವನ್ನು ಹೊಂದಿದೆ ಮತ್ತು ಸ್ಪಷ್ಟವಾಗಿ ಮಾತನಾಡುವಾಗ ಮಾತ್ರ ಪದಗಳು ಮತ್ತು ನುಡಿಗಟ್ಟುಗಳನ್ನು ಗುರುತಿಸಬಹುದು.

ಹೆಚ್ಚು ಅತ್ಯಾಧುನಿಕ ಸಾಫ್ಟ್​ವೇರ್ ನೈಸರ್ಗಿಕ ಮಾತು, ವಿಭಿನ್ನ ಉಚ್ಚಾರಣೆಗಳು ಮತ್ತು ವಿವಿಧ ಭಾಷೆಗಳನ್ನು ಗುರುತಿಸಬಲ್ಲದು. ಸ್ಪೀಚ್ ರೆಕಗ್ನಿಷನ್ ಸಿಸ್ಟಮ್ ಗಳು ಮಾತನಾಡುವ ಪದಗಳನ್ನು ಸಂಸ್ಕರಿಸಲು ಮತ್ತು ವ್ಯಾಖ್ಯಾನಿಸಲು ಮತ್ತು ಅವುಗಳನ್ನು ಪಠ್ಯವಾಗಿ ಪರಿವರ್ತಿಸಲು ಕಂಪ್ಯೂಟರ್ ಅಲ್ಗಾರಿದಮ್​ಗಳನ್ನು ಬಳಸುತ್ತವೆ.

ಇದನ್ನೂ ಓದಿ: ಅಕೌಂಟಿಂಗ್ ಮಾದರಿಯ ಶೇ 46ರಷ್ಟು ಕೆಲಸ ಸ್ವಯಂಚಾಲಿತಗೊಳಿಸಲಿದೆ ಕೃತಕ ಬುದ್ಧಿಮತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.