ETV Bharat / science-and-technology

ಮೂವರು ಯುವತಿಯರ ಅಪ್ರತಿಮ ಸಾಧನೆ; ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ - ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ

ಶರಣ್ಯ, ಅರ್ಪಿತಾರೆಡ್ಡಿ ಮತ್ತು ಸಂಜನಾ ಅವರು ಟೈಪ್ 2 ಡಯಾಬಿಟಿಸ್ ಔಷಧ ಪ್ರಯೋಗಗಳಿಗಾಗಿ 3ಡಿ ಬಯೋಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಮಾನವ ಅಂಗಾಂಶವನ್ನು ಸಿದ್ಧಪಡಿಸಿದ್ದಾರೆ.

ಮೂವರ ಯುವತಿಯರ ಅಪ್ರತಿಮಾ ಸಾಧನೆ; ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ
unparalleled-achievement-of-three-young-women-national-level-accolade-for-young-scientists
author img

By

Published : Dec 17, 2022, 1:55 PM IST

ಯಾವುದಾದರೂ ಕಾಯಿಲೆ ಬಂದಾಗ ಸಣ್ಣ ಮಾತ್ರೆ ತಿಂದರೆ ಗುಣಮುಖವಾಗುತ್ತದೆ. ಆದರೆ ಈ ರೀತಿ ಔಷಧಿ ಮಾರುಕಟ್ಟೆಗೆ ಬರುವುದಕ್ಕೂ ಮುನ್ನ ಇವುಗಳನ್ನು ಪ್ರಾಣಿಗಳು ಮತ್ತು ಮಾನವರನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗುವುದು. ಅಲ್ಲಿ ಪಾಸಾದ ಬಳಿಕವೆ ಅದನ್ನು ಅನುಮತಿ ನೀಡಲಾಗುವುದು. ಈ ಪ್ರಯೋಗದ ವೇಳೆ ಅನೇಕ ರೀತಿಯ ಹಾನಿಯಾಗುವ ಅಪಾಯವಿದೆ. ಈ ಅಪಾಯ ತಪ್ಪಿಸಲು ಮೂವರು ಯುವತಿಯರು ಹೊಸ ಮಾರ್ಗ ಕಂಡು ಹಿಡಿದಿದ್ದಾರೆ.

ಹೌದು, ಶರಣ್ಯ, ಅರ್ಪಿತಾರೆಡ್ಡಿ ಮತ್ತು ಸಂಜನಾ ಅವರು ಟೈಪ್ 2 ಡಯಾಬಿಟಿಸ್ ಔಷಧ ಪ್ರಯೋಗಗಳಿಗಾಗಿ 3ಡಿ ಬಯೋಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಮಾನವ ಅಂಗಾಂಶವನ್ನು ಸಿದ್ಧಪಡಿಸಿದ್ದಾರೆ. ಈ ಯುವ ವಿಜ್ಞಾನಿಗಳ ಆವಿಷ್ಕಾರಕ್ಕೆ ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಕೂಡ ಬಂದಿದೆ. ಈ ಯುವತಿಯರನ್ನು 'ಈಟಿವಿ ಭಾರತ'​ ಭೇಟಿಯಾಗಿ ಮಾತುಕತೆ ನಡೆಸಿದೆ.

ಕೇರಳದ ಕಣ್ಣೂರಿನ ಶರಣ್ಯ, ಮಂಗಳೂರಿನಲ್ಲಿ ಎಂಎಸ್ಸಿ ಬಯೋಕೆಮಿಸ್ಟ್ರಿ ಮುಗಿಸಿದ್ದಾರೆ. ಬಳಿಕ ಪ್ರೊಟೆಮಿಕ್ಸ್​ ಮತ್ತು ಜೆನೊಮಿಕ್ಸ್​​ನಲ್ಲಿ ಡಿಪ್ಲೊಮ ಪಡೆದಿದ್ದಾರೆ. ಬಾಲ್ಯದಿಂದಲೇ ಇವರು ಪ್ರಯೋಗದ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಕೋಲಾರದ ಅರ್ಪಿತಾ ರೆಡ್ಡಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಅಧ್ಯಯನ ನಡೆಸಿದ್ದು, ಮೈಸೂರಿನಲ್ಲಿ ಬರೋಕೆಮಿಸ್ಟ್ರಿ ಪಿಜಿ ಹಾಗೂ ಬೆಂಗಳೂರಿನಲ್ಲಿ ಸೆಲ್ಯೂಲರ್​ ಮತ್ತು ಮೊಲೆಕ್ಯೂಲರ್​ ಡೈಗೊಸ್ಟಿಕ್ಸ್ ಡಿಪ್ಲೊಮಾ ಪಡೆದಿದ್ದಾರೆ.

ಹೈದರಾಬಾದ್​ನ ಬಟ್ಟುಲ ಸಂಜನಾ ಅವರು, ಬೆಂಗಳೂರು ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದಾರೆ. ಬಳಿಕ ರೈಜೆನೆ ಇನ್ನೊವೇಷನ್​ ಎಂಬ ಬಯೋಟೆಕ್​ ಸಂಶೋಧನಾ ಸಂಸ್ಥೆ ಸೇರಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸ್ಟಾರ್ಟ್​ ಅಪ್​ ಸಂಸ್ಥೆಯನ್ನು ಉದಯ್​ ಸಕ್ಸೆನಾ ಮತ್ತು ವನ್ಗಲ ಸುಬ್ರಹ್ಮಣಂ ಸ್ಥಾಪಿಸಿದ್ದಾರೆ. ಇದು 3ಡಿ ಬಯೊಪ್ರಿಂಟೆಡ್​ ಮೊಡೆಲ್​ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಹಾನಿ ತಡೆಗಟ್ಟುವಿಕೆ ಕ್ರಮ: ಯಾವುದೇ ಹೊಸ ಔಷಧವನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುವುದು. ಇದರಲ್ಲಿ ಯಶಸ್ವಿಯಾದರೆ, ಮಾನವರ ಮೇಲೆ ಪರೀಕ್ಷೆ ಮಾಡಲಾಗುವುದು. ಅದೂ ಕೂಡ ಯಶಸ್ವಿಯಾದರೆ ಆ ಔಷಧ ಮಾರುಕಟ್ಟೆಗೆ ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಾಣಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಲ್ಯಾಬರೋಟರಿಗಳಲ್ಲಿ ಕೃತಕ ಮಾನವ ಟಿಶ್ಯೂ ಅಭಿವೃದ್ಧಿಗೆ ಪ್ರಯೋಗ ನಡೆಸಾಗಿದೆ.

ಇದನ್ನು ಗುರಿಯಾಗಿಸಿಕೊಂಡು ಟೈಪ್-2 ಡಯಾಬೀಟಿಸ್​​ಗೆ ರಿಯಾಜೆನ್ 3ಡಿ ಬಯೋಪ್ರಿಂಟಿಂಗ್ ಮೂಲಕ ಮಾನವ ಸ್ನಾಯು ಅಂಗಾಂಶವನ್ನು ಮರುಸೃಷ್ಟಿಸಿದ್ದಾರೆ. ಇದಕ್ಕಾಗಿ, ಜೀವಕೋಶಗಳು ಮೂರು ವಿಧದ ಪದರಗಳೊಂದಿಗೆ ಸಂಪರ್ಕ ಹೊಂದಿವೆ. ಶರಣ್ಯ, ಅರ್ಪಿತಾ ರೆಡ್ಡಿ ಮತ್ತು ಸಂಜನಾ ನಿರಂತರ ಪ್ರಯೋಗಗಳು ಮತ್ತು ಸೈದ್ಧಾಂತಿಕ ಪ್ರಬಂಧಗಳ ಸಲ್ಲಿಕೆಗೆ ಅದರ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಂಗಾಂಶದ ಮೇಲೆ ವಿವಿಧ ಔಷಧಿಗಳನ್ನು ಪರೀಕ್ಷಿಸಿದಾಗ, ಇದು ಮಾನವ ಸ್ನಾಯುಗಳಂತೆಯೇ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಬಂದಿದೆ. ಈ ಆವಿಷ್ಕಾರಕ್ಕಾಗಿ 'ಸೊಸೈಟಿ ಫಾರ್ ಆಲ್ಟರ್ನೇಟಿವ್ಸ್ ಟು ಅನಿಮಲ್ ಎಕ್ಸ್‌ಪೆರಿಮೆಂಟ್ಸ್' ವಾರ್ಷಿಕ ಪ್ರಥಮ ಬಹುಮಾನವನ್ನು ನೀಡಿತು.

ಇದನ್ನೂ ಓದಿ: ವ್ಯಾಯಾಮದಿಂದ ಜೀನ್​ಗಳ ವರ್ತನೆಯಲ್ಲಿ ಬದಲಾವಣೆ ಸಾಧ್ಯ: ಸಂಶೋಧನೆಯಲ್ಲಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.