ETV Bharat / science-and-technology

ಉಕ್ರೇನ್ ರಷ್ಯಾ ಯುದ್ಧ: ಸದ್ದು ಮಾಡ್ತಿರುವ 'ಡರ್ಟಿ ಬಾಂಬ್' ಬಗ್ಗೆ ಒಂದಷ್ಟು ಮಾಹಿತಿ - ಉಕ್ರೇನ್​ ಮೇಲೆ ರಷ್ಯಾ ಯುದ್ಧ

ಇತಿಹಾಸ ನೋಡಲು ಹೋದರೆ ಇಲ್ಲಿಯವರೆಗೆ ಡರ್ಟಿ ಬಾಂಬ್ ಬಳಸಿದ ದಾಖಲೆಗಳಿಲ್ಲ. 20 ವರ್ಷಗಳ ಹಿಂದೆ ರಷ್ಯಾದ ದಕ್ಷಿಣ ಪ್ರದೇಶವಾದ ಚೆಚೆನ್ಯಾದಲ್ಲಿ ಅವುಗಳನ್ನು ಸ್ಫೋಟಿಸುವ ಪ್ರಯತ್ನ ನಡೆದಿತ್ತು. ಆದರೆ ಆ ಎರಡು ಪ್ರಯತ್ನಗಳೂ ವಿಫಲವಾಗಿತ್ತು ಎಂದು ಹೇಳಲಾಗುತ್ತದೆ.

Ukraine-Russia War: What is the dirty bomb?
ಉಕ್ರೇನ್-ರಷ್ಯಾ ಯುದ್ಧ: ಡರ್ಟಿ ಬಾಂಬ್ ಎಂದರೇನು?
author img

By

Published : Oct 27, 2022, 12:33 PM IST

ರಷ್ಯಾ-ಉಕ್ರೇನ್ ಯುದ್ಧದ ಇತ್ತೀಚಿನ ಪದವೆಂದರೆ ಡರ್ಟಿ ಬಾಂಬ್! ಈ ಡರ್ಟಿ ಬಾಂಬ್ ಬಗ್ಗೆ ಉಕ್ರೇನ್ ಮತ್ತು ರಷ್ಯಾ ಎರಡೂ ಪರಸ್ಪರ ಆರೋಪಗಳನ್ನು ಮಾಡುತ್ತಿವೆ. ರಷ್ಯಾ ಉಕ್ರೇನ್​ ಯುದ್ಧವು ಕ್ರಮೇಣ ಪರಮಾಣು ಗಡಿಗಳನ್ನು ಸಮೀಪಿಸುತ್ತಿದೆ ಎಂದು ವಿಶ್ವವೇ ಆತಂಕ ವ್ಯಕ್ತಪಡಿಸುತ್ತಿರುವ ಈ ಡರ್ಟಿ ಬಾಂಬ್ ಯಾವುದು? ಈ ಹಿಂದೆ ಡರ್ಟಿ ಬಾಂಬ್​ ಅನ್ನು ಯಾವಾಗ ಬಳಸಲಾಗಿತ್ತು? ಡರ್ಟಿ ಬಾಂಬ್​ ಏನು ಮಾಡುತ್ತದೆ? ಎಂಬುದರ ಬಗ್ಗೆ ತಿಳಿಯೋಣ..

ಇತಿಹಾಸ ನೋಡಲು ಹೋದರೆ ಇಲ್ಲಿಯವರೆಗೆ ಡರ್ಟಿ ಬಾಂಬ್ ಬಳಸಿದ ದಾಖಲೆಗಳಿಲ್ಲ. 20 ವರ್ಷಗಳ ಹಿಂದೆ ರಷ್ಯಾದ ದಕ್ಷಿಣ ಪ್ರದೇಶವಾದ ಚೆಚೆನ್ಯಾದಲ್ಲಿ ಅವುಗಳನ್ನು ಸ್ಫೋಟಿಸುವ ಪ್ರಯತ್ನ ನಡೆದಿತ್ತು. ಆದರೆ ಆ ಎರಡು ಪ್ರಯತ್ನಗಳೂ ವಿಫಲವಾಗಿದ್ದವು ಎಂದು ಹೇಳಲಾಗುತ್ತದೆ. ಇಸ್ರೇಲ್ 2015 ರಲ್ಲಿ ಡಿಮೋನಾ ಪರಮಾಣು ರಿಯಾಕ್ಟರ್‌ನಲ್ಲಿ ಡರ್ಟಿ ಬಾಂಬ್​ ಅನ್ನು ಪರೀಕ್ಷಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಹಿಂದೆ ಅಮೆರಿಕ ಮತ್ತು ಬ್ರಿಟನ್ ಈ ಡರ್ಟಿ ಬಾಂಬ್ ತಯಾರಿಸಲು ಸಂಬಂಧಿಸಿದ ವಸ್ತುಗಳನ್ನು ಅಲ್-ಖೈದಾ ಭಯೋತ್ಪಾದಕರಿಂದ ವಶಪಡಿಸಿಕೊಂಡಿದ್ದವು.

ಡರ್ಟಿ ಬಾಂಬ್ ಪರಮಾಣು ವಸ್ತುಗಳನ್ನು ಒಳಗೊಂಡಿರುತ್ತದೆ. ಆದರೆ ಇದು ಸಂಪೂರ್ಣ ಪರಮಾಣು ಬಾಂಬ್ ಅಲ್ಲ. ಪರಮಾಣು ಬಾಂಬ್‌ನಂತಹ ಸರಣಿ ಕ್ರಿಯೆ ಇದರಲ್ಲಿ ಇಲ್ಲ. ಡರ್ಟಿ ಬಾಂಬ್​ ಮೂಲಕ ವಾತಾವರಣಕ್ಕೆ ಪರಮಾಣು ಧೂಳು ಮತ್ತು ಹೊಗೆಯನ್ನು ಬಿಡುಗಡೆ ಮಾಡಲಾಗುತ್ತದೆ. ಮತ್ತು ಇದನ್ನು ಭಯ ಪಡಿಸಲು ಬಳಸಲಾಗುತ್ತದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿ ಡರ್ಟಿ ಬಾಂಬ್​ಗಳನ್ನು ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಲಾಗುತ್ತದೆ.

ಇವುಗಳಲ್ಲಿ ಪರಮಾಣು ವಸ್ತುಗಳ ಜೊತೆಗೆ ಡೈನಮೈಟ್‌ನಂತಹ ಸ್ಫೋಟಕಗಳನ್ನು ಬಳಸಲಾಗುತ್ತದೆ. ಸ್ಫೋಟದ ತೀವ್ರತೆಗೆ ಅನುಗುಣವಾಗಿ, ಪರಮಾಣು ವಸ್ತುವು ವಾತಾವರಣದಲ್ಲಿ ವಿಸ್ತರಿಸುತ್ತದೆ. ಈ ವಸ್ತುವು ಅಪಾಯಕಾರಿ, ಆದರೆ ಜೀವಕ್ಕೆ ಮಾರಕವಲ್ಲ. ಡರ್ಟಿ ಬಾಂಬ್​ಗಳಲ್ಲಿ ಬಳಸುವ ಪರಮಾಣು ವಸ್ತುಗಳನ್ನು ಔಷಧ, ಉದ್ಯಮ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಬಳಸುವ ವಸ್ತುಗಳಿಂದ ಸಂಗ್ರಹಿಸಲಾಗುತ್ತದೆ.

ಈ ಬಾಂಬ್‌ನಿಂದ ಉಂಟಾಗುವ ಹಾನಿಯ ಪ್ರಮಾಣವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಸ್ಫೋಟದ ತೀವ್ರತೆಯನ್ನು ಸ್ಫೋಟದಲ್ಲಿ ಬಳಸಿದ ವಸ್ತುಗಳ ಪ್ರಕಾರದಿಂದ ನಿರ್ಧರಿಸಲಾಗುತ್ತದೆ. ಯಾವ ರೀತಿಯ ಮತ್ತು ಎಷ್ಟು ಪರಮಾಣು ವಸ್ತುಗಳನ್ನು ಬಳಸಲಾಗಿದೆ? ಸ್ಫೋಟದ ಸಮಯದಲ್ಲಿ ವಾತಾವರಣ ಹೇಗಿತ್ತು? ಎಲ್ಲವೂ ನಿರ್ಣಾಯಕಗಳಾವುತ್ತವೆ.

ಅನಿಲವು ಯಾವ ದಿಕ್ಕಿನಲ್ಲಿ ಬೀಸುತ್ತದೆಯೋ ಅಲ್ಲಿ ಪರಮಾಣು ಧೂಳು ವಿಸ್ತರಿಸುತ್ತದೆ. ಈ ಧೂಳಿಗೆ ತೆರೆದುಕೊಂಡವರಲ್ಲಿ ಹೆಚ್ಚಿನ ಲಕ್ಷಣಗಳು ಕಂಡುಬರುವುದಿಲ್ಲ. ಏಕೆಂದರೆ ವಾತಾವರಣದಲ್ಲಿರುವ ನ್ಯೂಕ್ಲಿಯರ್ ಮ್ಯಾಟರ್ ಹಿಗ್ಗುತ್ತದೆ ಮತ್ತು ದೂರ ಹೋದಂತೆ ಅದರ ಪ್ರಬಲತೆಯನ್ನು ಕಳೆದುಕೊಳ್ಳುತ್ತದೆ. ಆಗ ಇದು ಕಡಿಮೆ ಅಪಾಯಕಾರಿ ಆಗುತ್ತದೆ.

ಆದರೆ ಡರ್ಟಿ ಬಾಂಬ್​ ಸ್ಫೋಟಗೊಂಡ ಸ್ಥಳದ ಹತ್ತಿರ ಇರುವವರಿಗೆ ಇದು ಅಪಾಯಕಾರಿ. ಈ ವಿಕಿರಣದ ಪರಿಣಾಮವನ್ನು ನಿರ್ಣಯಿಸಲು ವಿಶೇಷ ಉಪಕರಣದ ಅಗತ್ಯವಿದೆ. ವಿಕಿರಣಕ್ಕೆ ತೆರೆದುಕೊಳ್ಳುವ ಮನೆಗಳು, ಕಚೇರಿಗಳು ಇತ್ಯಾದಿಗಳನ್ನು ಶುಚಿಗೊಳಿಸುವುದು ತುಂಬಾ ವೆಚ್ಚದಾಯಕ ಕೆಲಸವಾಗಿದೆ.

ಈ ಡರ್ಟಿ ಬಾಂಬ್ಅನ್ನು ವಿನಾಶಗೊಳಿಸುವುದಕ್ಕಿಂತ ಭಯಪಡಿಸಲು ಬಳಸುವುದು ಹೆಚ್ಚು. ಇದೊಂದು ಮಾನಸಿಕ ಅಸ್ತ್ರ. ರಣರಂಗಕ್ಕಿಂತ, ನಗರ ಪ್ರದೇಶಗಳಲ್ಲಿ ಇದನ್ನು ಬಳಸುತ್ತಾರೆ. ಈ ಡರ್ಟಿ ಬಾಂಬ್​ ಸ್ಫೋಟಗೊಳಿಸಿದರೆ ಕೆಲ ವರ್ಷಗಳ ಕಾಲ ಆಯಾ ಊರುಗಳನ್ನು ಖಾಲಿ ಮಾಡಬೇಕಾಗುತ್ತದೆ. ಇದು ಆರ್ಥಿಕವಾಗಿ ಬಹಳ ಬರಿದಾಗಿಸುವ ಪ್ರಕ್ರಿಯೆಯಾಗಿದೆ.

ಈಗ ರಷ್ಯಾ, ಉಕ್ರೇನ್​ ಈ ಡರ್ಟಿ ಬಾಂಬ್‌ಗಳನ್ನು ತಯಾರಿಸಿದೆ ಎಂದು ಆರೋಪಿಸುತ್ತಿದೆ ಮತ್ತು ಅದನ್ನು ನಮ್ಮನ್ನು ದೂಷಿಸಲು ಬಳಸಲು ಪ್ರಯತ್ನಿಸುತ್ತಿದೆ ಎನ್ನುತ್ತಿದೆ. ಉಕ್ರೇನ್ ಕೂಡ ರಷ್ಯಾದ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​​​​​​ನಿಂದ ಮತ್ತೊಂದು ಹೊಸ ಫೀಚರ್ಸ್: ಕ್ರಿಯೇಟ್​ ಕಾಲ್​ ಲಿಂಕ್​ ಮೂಲಕ ಗ್ರೂಪ್​ ಕಾಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.