ETV Bharat / science-and-technology

ಟ್ರೂಕಾಲರ್ ಲೈವ್ ಕಾಲರ್ ಐಡಿ ಈಗ ಐಫೋನ್​ಗೂ ಲಭ್ಯ: ಪೇಡ್​ ಗ್ರಾಹಕರಿಗೆ ಸೌಲಭ್ಯ - ಟ್ರೂಕಾಲರ್ ಐಓಎಸ್​ ಬಳಕೆದಾರ

ಕಾಲರ್ ಐಡಿ ಗುರುತಿಸುವ ಆ್ಯಪ್ ಆಗಿರುವ ಟ್ರೂಕಾಲರ್ ಐಒಎಸ್​ ಬಳಕೆದಾರರಿಗೂ ಇನ್ನು ಮುಂದೆ ಲೈವ್ ಕಾಲರ್ ಐಡಿ ಸೌಲಭ್ಯ ನೀಡಲಿದೆ. ಆದರೆ, ಈ ಸೌಲಭ್ಯ ಹಣ ಪಾವತಿಸುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

ಟ್ರೂಕಾಲರ್ ಲೈವ್ ಕಾಲರ್ ಐಡಿ ಈಗ ಐಫೋನ್​ಗೂ ಲಭ್ಯ: ಪೇಡ್​ ಗ್ರಾಹಕರಿಗೆ ಸೌಲಭ್ಯ
truecaller app update to protection against spam scams
author img

By

Published : Apr 13, 2023, 1:34 PM IST

ಬೆಂಗಳೂರು : ಕಾಲರ್ ಐಡಿ ಗುರುತಿಸುವ ಆ್ಯಪ್ ಆಗಿರುವ ಟ್ರೂಕಾಲರ್ iOS ಬಳಕೆದಾರರಿಗೆ ಲೈವ್ ಕಾಲರ್ ಐಡಿ ಬೆಂಬಲಿಸುವ ಹೊಸ ಅಪ್ಡೇಟ್ ಒಂದನ್ನು ಹೊರತಂದಿದೆ. ಇಷ್ಟು ದಿನ ಈ ವೈಶಿಷ್ಟ್ಯ ಐಫೋನ್ ಬಳಕೆದಾರರಿಗೆ ಲಭ್ಯವಾಗಿರಲಿಲ್ಲ. ಈ ಹೊಸ ವೈಶಿಷ್ಟ್ಯವು ಹಣ ಪಾವತಿಸಿ ಟ್ರೂಕಾಲರ್ ಸೇವೆಗಳನ್ನು ಬಳಸುವ ಗ್ರಾಹಕರಿಗೆ ಲಭ್ಯವಿರುತ್ತದೆ. ಈ ಯೋಜನೆ ತಿಂಗಳಿಗೆ 75 ರೂಪಾಯಿಯಿಂದ ಆರಂಭವಾಗಿ ವರ್ಷಕ್ಕೆ 4,999 ರೂಪಾಯಿ ಶ್ರೇಣಿಯಲ್ಲಿ ಲಭ್ಯವಾಗಲಿದೆ. ಹೊಸ ಕಾಲರ್ ಐಡಿ ವೈಶಿಷ್ಟ್ಯವು ಐಫೋನ್​​ ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿರುವಂತೆ ತಡೆರಹಿತವಾಗಿರುವುದಿಲ್ಲ. ಈ ವೈಶಿಷ್ಟ್ಯವನ್ನು ಬಳಸಲು ಐಫೋನ್ ಬಳಕೆದಾರರು ಸಿರಿಯೊಂದಿಗೆ ಸಂವಹನ ನಡೆಸಬೇಕಾಗುತ್ತದೆ.

ಲೈವ್ ಕಾಲರ್ ಐಡಿ ಸೇವೆಯನ್ನು ಬಳಸಬೇಕಾದರೆ ಐಫೋನ್ ಬಳಕೆದಾರರು iOS 16 ಅಥವಾ ಅದಕ್ಕೂ ಮೇಲಿನ ಐಒಎಸ್ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಇನ್ನು ಕರೆ ಬರುವಾಗ ಟ್ರೂಕಾಲರ್ ಬಳಸಬೇಕಾದರೆ ಐಫೋನ್ ಬಳಕೆದಾರರು Hey Siri, Search Truecaller ಎಂದು ಸಿರಿಗೆ ನಿರ್ದೇಶನ ನೀಡಬೇಕಾಗುತ್ತದೆ. ಹೀಗೆ ಮಾಡಿದಾಗ ಸಿರಿ ಸ್ಕ್ರೀನ್ ಮೇಲೆ ಗೋಚರಿಸುವ ಸಂಖ್ಯೆಯನ್ನು ಸೆರೆ ಹಿಡಿಯುತ್ತದೆ ಮತ್ತು ಅಪ್ಲಿಕೇಶನ್‌ನಲ್ಲಿ ಅದನ್ನು ಹುಡುಕಿ ಮತ್ತು ಫಲಿತಾಂಶವನ್ನು ಬಳಕೆದಾರರಿಗೆ ತೋರಿಸುತ್ತದೆ.

ಟ್ರೂಕಾಲರ್ ತನ್ನ CallKit ಡೈರೆಕ್ಟರಿ ಗಾತ್ರವನ್ನು ದ್ವಿಗುಣಗೊಳಿಸಿದೆ ಮತ್ತು ಸ್ಪ್ಯಾಮ್, ಹಗರಣ ಮತ್ತು ವಂಚನೆ ಕರೆಗಳನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಲುವಾಗಿ ತನ್ನ ಸ್ಪ್ಯಾಮ್ ಪತ್ತೆ ಅಲ್ಗಾರಿದಮ್ ಅನ್ನು ಸುಧಾರಿಸಿದೆ. ಟ್ರೂಕಾಲರ್ ಆ್ಯಪ್ ಭಾರತದಲ್ಲಿ 33 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ವಂಚನೆ ಹಾಗೂ ಸ್ಪ್ಯಾಮ್ ಕರೆಗಳ ಸಂಖ್ಯೆ ಈಗಲೂ ಭಾರತದಲ್ಲಿ ಅಧಿಕವಾಗಿರುವ ಕಾರಣದಿಂದ ಜನತೆ ಟ್ರೂಕಾಲರ್​ನಂಥ ಕಾಲರ್ ಐಡಿ ಆ್ಯಪ್​ಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಟ್ರೂಕಾಲರ್ ಎಂಬುದು ಕಾಲರ್ ID ಪತ್ತೆ ಮಾಡುವ ಮತ್ತು ಸ್ಪ್ಯಾಮ್ ನಿರ್ಬಂಧಿಸುವ ಅಪ್ಲಿಕೇಶನ್ ಆಗಿದ್ದು ಅದು ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇನಲ್ಲಿ ಲಭ್ಯವಿದೆ. ಯಾರು ಕರೆ ಮಾಡುತ್ತಿದ್ದಾರೆ ಮತ್ತು ಯಾವ ಕರೆ ಅನಗತ್ಯವಾಗಿದೆ ಎಂಬುದನ್ನು ಗುರುತಿಸುವುದರ ಜೊತೆಗೆ, ಫೋನ್​ಗೆ ಬರುವ ಟೆಕ್ಸ್​​ ಮೆಸೇಜ್ ಸ್ಪ್ಯಾಮ್ ಆಗಿದೆಯಾ ಇಲ್ಲವಾ ಎಂಬುದನ್ನು ಟ್ರೂಕಾಲರ್ ಗುರುತಿಸುತ್ತದೆ. ಟ್ರೂಕಾಲರ್ ಅಪ್ಲಿಕೇಶನ್ ಅನ್ನು 2009 ರಲ್ಲಿ ಸ್ಟಾಕ್​ಹೋಮ್​ನಲ್ಲಿ ಅಭಿವೃದ್ಧಿಪಡಿಸಲಾಯಿತು. ಕಂಪನಿಯ ವೆಬ್‌ಸೈಟ್ ಪ್ರಕಾರ, ಇದು ಈಗ 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ, 500 ಮಿಲಿಯನ್ ಫೋನ್​ಗಳಲ್ಲಿ ಇನ್​ಸ್ಟಾಲ್ ಆಗಿದೆ ಮತ್ತು ಇದು 10 ಬಿಲಿಯನ್ ಸ್ಪ್ಯಾಮ್ ಕರೆಗಳನ್ನು ಗುರುತಿಸಿ, ನಿರ್ಬಂಧಿಸಿದೆ.

ಟ್ರೂಕಾಲರ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು ಮತ್ತು ಕಾಲರ್ ID, ಸ್ಪ್ಯಾಮ್ ಕರೆ ನಿರ್ಬಂಧಿಸುವಿಕೆ ಮತ್ತು ಸ್ಪ್ಯಾಮ್ ಟೆಕ್ಸ್ಟ್​ ಮೆಸೇಜ್ ಫಿಲ್ಟರಿಂಗ್ ಸೇರಿದಂತೆ ಮೂಲ ವೈಶಿಷ್ಟ್ಯಗಳು ಉಚಿತವಾಗಿ ಲಭ್ಯವಿವೆ. ಆದಾಗ್ಯೂ, ಹೆಚ್ಚುವರಿ ವೈಶಿಷ್ಟ್ಯಗಳು ಬೇಕಾದರೆ ಪೇಡ್ ಸಬ್​ಸ್ಕ್ರಿಪ್ಷನ್ ಪಡೆಯಬಹುದು. ಇದು ಜಾಹೀರಾತು ಬೆಂಬಲಿತ ಉಚಿತ ಅಪ್ಲಿಕೇಶನ್ ಆಗಿದೆ. ಪೇಡ್​ ಸಬ್​ಸ್ಕ್ರಿಪ್ಷನ್ ಪಡೆಯುವ ಮೂಲಕ ಜಾಹೀರಾತುಗಳನ್ನು ನಿಲ್ಲಿಸಬಹುದು.

ಇದನ್ನೂ ಓದಿ : 'ಬಿಬಿಸಿ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ' ಕಿಚ್ಚು ಹಚ್ಚಿದ ಟ್ವಿಟರ್​ ಲೇಬಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.