ನವದೆಹಲಿ : ಇನ್ಸ್ಟಾಗ್ರಾಂ ಅಪ್ಲಿಕೇಶನ್ ಬಳಕೆದಾರರು ಇನ್ಸ್ಟಾಗ್ರಾಂ ವೀಕ್ಷಣೆ ಮಾಡುವ ಅವಧಿಯಲ್ಲಿ ಶೇ 24 ರಷ್ಟು ಹೆಚ್ಚಳವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ವೀಡಿಯೊ ಶಿಫಾರಸುಗಳ ಕಾರಣದಿಂದ ಬಳಕೆದಾರರು ಹೆಚ್ಚಿನ ಸಮಯ ಇನ್ಸ್ಟಾಗ್ರಾಂ ನೋಡುತ್ತಿದ್ದಾರೆ ಎಂದು ಕಂಪನಿಯ ಸಿಇಓ ಮಾರ್ಕ್ ಜಕರ್ಬರ್ಗ್ ಹೇಳಿದ್ದಾರೆ. ಏತನ್ಮಧ್ಯೆ ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಎರಡೂ ಅಪ್ಲಿಕೇಶನ್ಗಳಲ್ಲಿ ರೀಲ್ಸ್ ಮಾದರಿಯ ವೀಡಿಯೊಗಳ ವೀಕ್ಷಣೆಯ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ರೀಲ್ಸ್ಗಳು ಇತ್ತೀಚಿನ ದಿನಗಳಲ್ಲಿ ಜನರಿಗೆ ಹೆಚ್ಚಾಗಿ ಆಪ್ತವಾಗುತ್ತಿವೆ. ಪ್ರತಿದಿನ ಬಳಕೆದಾರರು 2 ಬಿಲಿಯನ್ ಸಂಖ್ಯೆಯಷ್ಟು ರೀಲ್ಗಳನ್ನು ರಿ-ಶೇರ್ ಮಾಡುತ್ತಿದ್ದಾರೆ. ಹೀಗೆ ರಿ-ಶೇರ್ ಮಾಡುವ ಪ್ರಮಾಣ ಕಳೆದ ಆರು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ. ರೀಲ್ಸ್ಗಳ ಕಾರಣದಿಂದ ಬಳಕೆದಾರರು ಅಪ್ಲಿಕೇಶನ್ಗಳನ್ನು ನೋಡುತ್ತ ಕಳೆಯುವ ಒಟ್ಟಾರೆ ಅವಧಿ ಹೆಚ್ಚಾಗಿದೆ. ಶಾರ್ಟ್ ರೀಲ್ಸ್ ವಿಭಾಗದಲ್ಲಿ ಕೂಡ ನಾವು ನಮ್ಮ ಪಾಲು ಪಡೆದುಕೊಳ್ಳುತ್ತಿದ್ದೇವೆ ಎಂದು ಜಕರ್ಬರ್ಗ್ ತಿಳಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾರಣದಿಂದ ಕಂಪನಿಯ ಆದಾಯ ಸುಧಾರಿಸುತ್ತಿದೆ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ರೀಲ್ಸ್ ಹಣಗಳಿಕೆಯ ದಕ್ಷತೆಯು ಇನ್ಸ್ಟಾಗ್ರಾಂ ನಲ್ಲಿ ಶೇಕಡಾ 30 ಕ್ಕಿಂತ ಹೆಚ್ಚಾಗಿದೆ ಮತ್ತು ಫೇಸ್ಬುಕ್ನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚಿದೆ ಎಂದು ಅವರು ಘೋಷಿಸಿದರು.
ಬಳಕೆದಾರರಿಗೆ ಅವರ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಸದಸ್ಯರ ಕಂಟೆಂಟ್ ಅನ್ನು ತೋರಿಸುವುದರ ಹೊರತಾಗಿ, ಪ್ರಸ್ತುತ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಬಳಕೆದಾರರು ಫಾಲೋ ಮಾಡದ ಪೀಪಲ್ಸ್, ಗ್ರೂಪ್ಸ್ ಮತ್ತು ಖಾತೆಗಳ ಶೇ 20 ಕ್ಕೂ ಹೆಚ್ಚು ಪ್ರಮಾಣದ ಕಂಟೆಂಟ್ ಫೀಡ್ ಅನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತೋರಿಸುತ್ತಿದೆ. ಒಟ್ಟಾರೆಯಾಗಿ ಸಂಪೂರ್ಣ ಇನ್ಸ್ಟಾಗ್ರಾಂ ನಲ್ಲಿ ಇದರ ಪ್ರಮಾಣ ಶೇ 40 ರಷ್ಟಾಗಿದೆ ಎಂದು ಜಕರ್ಬರ್ಗ ಮಾಹಿತಿ ನೀಡಿದರು.
ನಾವು ನಮ್ಮ ರೆಕಮೆಂಡೇಶನ್ ವ್ಯವಸ್ಥೆಯನ್ನು ಸುಧಾರಿಸುವುದನ್ನು ಮುಂದುವರಿಸುವುದರಿಂದ ನಮ್ಮ ಸೇವೆಗಳ ಒಟ್ಟಾರೆ ತೊಡಗಿಸಿಕೊಳ್ಳುವಿಕೆಗೆ ರೀಲ್ಸ್ ಸಮಯವು ಹೆಚ್ಚುತ್ತಿರುವುದನ್ನು ನಾವು ನೋಡಿದ್ದೇವೆ. ಈ ತಿಂಗಳ ಆರಂಭದಲ್ಲಿ, ಇನ್ಸ್ಟಾಗ್ರಾಂ ಟ್ರೆಂಡಿಂಗ್ ಆಡಿಯೊ ಮತ್ತು ಹ್ಯಾಶ್‌ಟ್ಯಾಗ್‌ಗಳಿಗಾಗಿ ಮೀಸಲಾದ ಡೆಸ್ಟಿನೇಶನ್ ಸೇರಿಸಿದೆ. ರೀಲ್ಸ್ ಒಳನೋಟಗಳಿಗೆ ಎರಡು ಹೊಸ ಮೆಟ್ರಿಕ್‌ಗಳು ಮತ್ತು ಹೆಚ್ಚಿನ ದೇಶಗಳಿಗೆ ರೀಲ್ಸ್‌ನಲ್ಲಿ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದರು.
ರೀಲ್‌ಗಳಲ್ಲಿ ಟಾಪ್ ಟ್ರೆಂಡಿಂಗ್ ವಿಷಯಗಳು ಮತ್ತು ಹ್ಯಾಶ್‌ಟ್ಯಾಗ್‌ಗಳು ಯಾವುವು ಎಂಬುದನ್ನು ಕಂಟೆಂಟ್ ಕ್ರಿಯೇಟರ್ಸ್ ಈಗ ನೋಡಲು ಸಾಧ್ಯವಾಗುತ್ತದೆ. ಒಟ್ಟು ವೀಕ್ಷಣೆ ಸಮಯವು ರೀಲ್ ಅನ್ನು ಮರುಪ್ಲೇ ಮಾಡುವ ಯಾವುದೇ ಸಮಯವನ್ನು ಒಳಗೊಂಡಂತೆ ನಿಮ್ಮ ರೀಲ್ ಅನ್ನು ಪ್ಲೇ ಮಾಡಿದ ಒಟ್ಟು ಸಮಯವನ್ನು ಸೆರೆಹಿಡಿಯುತ್ತದೆ. ಸರಾಸರಿ ವೀಕ್ಷಣೆ ಸಮಯವು ನಿಮ್ಮ ರೀಲ್ ಅನ್ನು ಪ್ಲೇ ಮಾಡುವ ಸರಾಸರಿ ಸಮಯವನ್ನು ಸೆರೆಹಿಡಿಯುತ್ತದೆ, ವೀಕ್ಷಣೆ ಸಮಯವನ್ನು ಒಟ್ಟು ಪ್ಲೇ ಮಾಡಿದ ಸಂಖ್ಯೆಯೊಂದಿಗೆ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ ಎಂದು ಮಾರ್ಕ್ ಜಕರ್ಬರ್ಗ್ ವಿವರಿಸಿದರು.
ಇದನ್ನೂ ಓದಿ : ಯೂಟ್ಯೂಬ್ ಆದಾಯ ಶೇ 2.6 ಕುಸಿತ: ಸತತ 3ನೇ ತ್ರೈಮಾಸಿಕದಲ್ಲಿ ಆದಾಯ ಇಳಿಕೆ