ETV Bharat / science-and-technology

ಮ್ಯಾಕ್ರನ್​ ತಯಾರಿಸಲು ಸಹಾಯ ಮಾಡಿದ ಐಫೋನ್​, ಮ್ಯಾಕ್​​; ಮುಂಬೈ ಹುಡುಗಿಯ ಕೈಚಳಕಕ್ಕೆ ಟಿಮ್​​ ಕುಕ್​​ ಬೆರಗು

ಐಫೋನ್​ ಮತ್ತು ಮ್ಯಾಕ್​ ಅನೇಕ ಉದ್ದೇಮೆದಾರರ ಸೃಜನಾತ್ಮಕ ಕಲೆಗೆ ಸಹಾಯ ಮಾಡಿದೆ. ಅಂತಹವರ ಸಾಲಿನಲ್ಲಿ ಒಬ್ಬರಾಗಿರುವ ಮುಂಬೈ ಹುಡುಗಿಯನ್ನು ಟಿಮ್​ ಕುಕ್​ ಭೇಟಿಯಾಗಿ ಪ್ರಶಂಸಿದ್ದಾರೆ.

Tim Cook left amazed at how iPhone, Mac helps Mumbai girl prepare macarons

author img

By

Published : Apr 21, 2023, 1:29 PM IST

Updated : Apr 21, 2023, 1:45 PM IST

ನವದೆಹಲಿ: ಭಾರತದಲ್ಲಿ ಅಧಿಕೃತ ಆ್ಯಪಲ್​ ಮಳಿಗೆಗಳ ಉದ್ಘಾಟನೆಗೆ ಬಂದ ಆ್ಯಪ್​ಲ್​ ಸಂಸ್ಥೆ ಟಿಮ್​ ಕುಕ್​ ಮುಂಬೈ ಹುಡುಗಿಯ ಕನಸಿಗೆ ಐಫೋನ್​ ಮತ್ತು ಮ್ಯಾಕ್​ ಹೇಗೆ ಸಹಾಯ ಮಾಡಿದೆ ಎಂಬುದನ್ನು ತಿಳಿದು ರೋಮಂಚನಗೊಂಡಿದ್ದಾರೆ.

ಮುಂಬೈ ಮತ್ತು ನವದೆಹಲಿಯಲ್ಲಿ ಮಳಿಗೆ ಉದ್ಘಾನೆಗೂ ಮುನ್ನ ಬಾಲಿವುಡ್​ ನಟಿ ಮಧುರಿ ದೀಕ್ಷಿತ್​ರೊಂದಿಗೆ ವಡಾಪಾವ್​ ಸೇವಿಸಿದ ಟಿಮ್​ ಕುಕ್​, ತಮ್ಮ ಭಾರತದ ಪ್ರವಾಸವನ್ನು ಡೆಸರ್ಟ್​​ (ಸಿಹಿ ತಿನಿಸು)ನೊಂದಿಗೆ ಮುಕ್ತಾಯ ಮಾಡಿದ್ದಾರೆ. ವಡಾಪಾವ್​ ಸೇವಿಸಿದ ಆ್ಯಪಲ್​ ಸಿಇಒ ಅವರನ್ನು ಡೆಸರ್ಡ್​ ಸೇವನೆಗೆ ಮ್ಯಾಕ್ರೋನ್​ ಕ್ವೀನ್​ ಮತ್ತು ಪೆಸ್ಟ್ರಿ ಶೆಫ್​ ಆಗಿರುವ ಪೂಜಾ ಧಿಂಘ್ರಾ ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ಪೂಜಾ ಅವರ ಅಡುಗೆ ಕೋಣೆ ಹೊಕ್ಕ ಕುಕ್​, ಧಿಂಘ್ವಾ ಅವರು ಎಲ್​ಇ15 ಪೆಸ್ಟ್ರಿ ಹೊಕ್ಕು ಉತ್ತಮ ಮ್ಯಾಕ್ರೋನ್​ ರುಚಿ ಸವಿದಿದ್ದಾರೆ.

ಮ್ಯಾಕ್ರನ್​ ರುಚಿಗೆ ಸೋತ ಕುಕ್​: ಈ ಕುರಿತು ತಿಳಿಸಿರುವ ಆ್ಯಪಲ್​ ಸಿಇಒ, ಪೂಜಾ ಅವರ ಅಡುಗೆ ಮನೆಯಲ್ಲಿ ಅತ್ಯುತ್ತಮ ಸಮಯ ಕಳೆದೆ. ಬೇಕಿಂಗ್​ ಬಗ್ಗೆ ಇರುವ ಆಕೆಯ ಆಸಕ್ತಿ, ಅದರಿಂದ ಅವರು ಉದ್ಯಮ ಕಟ್ಟಿಕೊಂಡ ರೀತಿ ನೋಡಿದರೆ, ನಿಮ್ಮ ಕನಸು ಬೆನ್ನಟ್ಟಿದಾಗ ಎಲ್ಲವೂ ಸಾಧ್ಯವಾಗುತ್ತದೆ ಎಂಬುದನ್ನು ಉದಾಹರಣೆಯಾಗಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಅಲ್ಲದೇ, ಅವರ ಕ್ರಿಯಾತ್ಮಕ ಪ್ರಕ್ರಿಯೆಯಲ್ಲಿ ಆಕೆ ಐಫೋನ್​ ಮತ್ತು ಮ್ಯಾಕ್​ ಬಳಕೆ ನೋಡಿ ಸಂತಸವಾಗಿಯಿತು. ಇದುವರೆಗೂ ನಾನು ಸೇವಿಸಿದ ಬೆಸ್ಟ್​ ಮ್ಯಾಕ್ರನ್​ ಇದಾಗಿದೆ ಎಂದು ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದಾರೆ.

  • It was a treat to spend time in Pooja’s kitchen. Her passion for baking and the business she’s created is a reminder of what’s possible when you follow your dreams. Great to see how she uses iPhone and Mac in her creative process. Best macaron I’ve ever had! https://t.co/pMcBxXJK4x pic.twitter.com/IZSpcihZow

    — Tim Cook (@tim_cook) April 21, 2023 " class="align-text-top noRightClick twitterSection" data=" ">

ದೀಘ್ರಾ 2010ರಲ್ಲಿ ಎಲ್​ಇ ಪೆಸ್ಟ್ರಿಯನ್ನು ಹುಟ್ಟುಹಾಕಿದರು. ಇವರ ಅದ್ಬುತ ಕೈ ರುಚಿಗೆ ಬಾಲಿವುಡ್​ ತಾರೆಯರು ಮನಸೋತಿದ್ದಾರೆ. ಸೋನಂ ಕಪೂರ್​, ಸಲ್ಮಾನ್​ ಖಾನ್​, ಮಸಾಬಾ ಗುಪ್ತಾ, ರತನ್​ ಟಾಟಾ ಸೇರಿದಂತೆ ಅನೇಕರು ಇವರ ಕೈರುಚಿಗೆ ಶಹಬ್ಬಾಸ್​ ಹೇಳುವ ಮೂಲಕ ಗ್ರಾಹಕರಾಗಿದ್ದಾರೆ.

ತಮ್ಮ ಪೆಸ್ಟ್ರಿಯಲ್ಲಿ ದೀರ್ಘಾ ಮ್ಯಾಕ್ರೋನ್​ ಸೇವನೆಗೆ ಆ್ಯಪಲ್​ ಸಿಇಒರನ್ನು ಟ್ವಿಟರ್​ ಮೂಲಕ ಆಹ್ವಾನಿಸಿದ್ದರು. ಮುಂಬೈಗೆ ಸ್ವಾಗತ, ನೀವು ವಾಡಾಪಾವ್​ ಸ್ವಾದ ಆಹ್ಲಾದಿಸಿದ್ದೀರಾ. ನೀವು ಡೆಸಾರ್ಟ್​ಗಾಗೂ ಜಾಗ ಉಳಿಸಿಕೊಂಡಿದ್ದೀರಾ. ಈ ಹಿನ್ನೆಲೆ ನಿಮಗೆ ಎಲ್​ಇ15 ಪೆಸ್ಟ್ರಿ ತಾಣ ಉತ್ತಮವಾಗಿದೆ ಎಂದು ಬರೆದಿದ್ದರು. ಈ ಆಹ್ವಾನದ ಮೇರೆಗೆ ಕುಕ್​ ಆಗಮಿಸಿದ್ದರು.

ಭಾರತದಲ್ಲಿ ತಲೆ ಎತ್ತಿದ ಮಳಿಗೆ: ಮಂಗಳವಾರ ಮುಂಬೈನಲ್ಲಿ ಮೊದಲ ಬಾರಿಗೆ ಆ್ಯಪಲ್​ ಅಧಿಕೃತ ಮಳಿಗೆ ತರೆದಿದ್ದು, ಇದಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಹಿಂದೆಯೇ ಗುರುವಾರ ದೆಹಲಿಯ ಸಾಕೇತ್​ನ ಸಿಟಿ ವಾಕ್​ ಮಾಲ್​ನಲ್ಲಿ ಎರಡನೇ ಬೃಹತ್​ ಮಳಿಗೆ ಅನಾವರಣಗೊಳಿಸಿದರು. ಇದಾದ ಬಳಿಕ ಕುಕ್​ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಎಲೆಕ್ಟ್ರಾನಿಕ್ಸ್​​ ಮತ್ತು ಐಟಿ ಸಚಿವ ರಾಜೀವ್​ ಚಂದ್ರಶೇಖರ್​ ಮತ್ತು ಕೇಂದ್ರ ಐಟಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರನ್ನು ಭೇಟಿಯಾದರು. ದೆಹಲಿಯಲ್ಲಿ ಇದೇ ಸಂದರ್ಭದಲ್ಲಿ ಅವರು ಲೋಧಿ ಆರ್ಟ್​​ ಡಿಸ್ಟ್ರಿಕ್​ ಮತ್ತು ರಾಷ್ಟ್ರೀಯ ಕರಕುಶಲ ಸಂಗ್ರಹಾಲಯ ಮತ್ತು ಹಸ್ತಕಲಾ ಅಕಾಡಮಿಗೆ ಭೇಟಿ ನೀಡಿದರು.

ಇದನ್ನೂ ಓದಿ: ಪ್ರಥಮ ಆ್ಯಪಲ್ ರಿಟೇಲ್ ಮಳಿಗೆ ಆರಂಭ: ಸ್ವತಃ ಗ್ರಾಹಕರನ್ನು ಸ್ವಾಗತಿಸಿದ ಸಿಇಒ ಟಿಮ್ ಕುಕ್

Last Updated : Apr 21, 2023, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.