ಗೂಗಲ್ ಡಾಕ್ಸ್ನಲ್ಲಿ ಹೊಸ ಸ್ಮಾರ್ಟ್ ಕ್ಯಾನ್ವಸ್ ವೈಶಿಷ್ಟ್ಯ ಟೆಕ್ ದೈತ್ಯ ಆರಂಭ ಮಾಡಿದೆ. ಈ ಮೂಲಕ ಬಳಕೆದಾರರಯ ಗೂಗಲ್ ಡಾಕ್ಸ್ನಲ್ಲಿ ಸುಲಭವಾಗಿ ಕೋಡ್ ಬ್ಲಾಕ್ ಜೊತೆಗೆ ಅದನ್ನು ಫಾರ್ಮ್ಯಾಟ್ ಕೂಡ ಮಾಡಬಹುದಾಗಿದೆ. ವರ್ಕ್ಸ್ಪೇಸ್ ಅನ್ನು ಈ ಹಿಂದೆ ಅಪ್ಡೇಟ್ ಮಾಡಲಾಗಿತ್ತು. ಗೂಗಲ್ ಡಾಕ್ಸ್ನಲ್ಲಿ ಕೆಲಸ ಮಾಡುವಾಗ ಸಹಯೋಗಿಗಳು ಡಾಕ್ಯುಮೆಂಟ್‌ಗಳಲ್ಲಿ ಪ್ರಸ್ತುತಪಡಿಸಲು ಬಯಸುವ ಕೋಡ್ ಅನ್ನು ಅಂಟಿಸಿ ನಂತರ ಸಿಂಟ್ಯಾಕ್ಸ್ ಅನ್ನು ಹೈಲೈಟ್ ಮಾಡಿ ಮತ್ತು ಶೈಲಿಗಳನ್ನು ಅನ್ವಯಿಸಬೇಕಾಗಿತ್ತು ಎಂದು ಟೆಕ್ ದೈತ್ಯ ತಿಳಿಸಿದೆ.
ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಕೋಡ್ ಅನ್ನು ದೃಶ್ಯೀಕರಿಸುವ ಸಾಮರ್ಥ್ಯವನ್ನು ನೀಡುತ್ತದೆ, ಕೋಡ್ ಅನ್ನು ಓದಲು ಸುಲಭವಾಗುವುದರ ಜೊತೆಗೆ ಸಹಯೋಗವನ್ನೂ ಹೆಚ್ಚಿಸುತ್ತದೆ.
ಗೂಗಲ್ ಕ್ರೋಮ್ ಅಪ್ಡೇಟ್: ಕೆಲವು ದಿನಗಳ ಹಿಂದೆ ಗೂಗಲ್ ಕ್ರೋಮ್ ರಕ್ಷಣೆಗೆ ಪಾಸ್ಕೀ ಬೆಂಬಲವನ್ನು ನೀಡಿತ್ತು. ಈ ಪಾಸ್ಕೀಗಳು ನಿಮ್ಮ ಪಾಸ್ವರ್ಡ್ ಅಥವಾ ಇತರೆ ದೃಢೀಕರಣ ಮಾನದಂಡಗಳಾಗಿ ಕಾರ್ಯ ನಿರ್ವಹಿಸಲಿದೆ. ಇದು ಹೆಚ್ಚು ಸುರಕ್ಷಿತವಾಗಿದ್ದು, ಪುನಃ ಬಳಸಲು ಸಾಧ್ಯವಿಲ್ಲ. ಇದರಿಂದ ಸರ್ವರ್ ಉಲ್ಲಂಘನೆ ಸೋರಿಕೆ ಅಥವಾ ಫಿಶಿಂಗ್ ದಾಳಿಯಾಗದಂತೆ ತಡೆಯುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.
ಪಾಸ್ಕೀಯನ್ನು ಉದ್ಯಮದ ಗುಣಮಟ್ಟಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗಿದ್ದು, ವಿವಿಧ ಆಪರೇಟಿಂಗ್ ಸಿಸ್ಟಮ್ ಗಳನ್ನು ಎಲ್ಲಿಯಾದರೂ ಕೆಲಸ ಮಾಡಬಹುದಾಗಿದೆ. ವೆಬ್ಸೈಟ್ ಮತ್ತು ಅಪ್ಲಿಕೇಷನ್ ಎರಡೂಕ್ಕೂ ಸೈನ್ ಇನ್ ಆಗಲು ಈ ಪಾಸ್ ಕೀ ಸಹಾಯ ಮಾಡುತ್ತದೆ. ಈ ಮೊದಲು ಡಿವೈಸ್ ಅನ್ಲಾಕ್ ಮಾಡುವ ರೀತಿಯಲ್ಲಿ ಇದನ್ನು ದೃಢೀಕರಿಸಬಹುದಾಗಿದೆ.
ಈ ಪಾಸ್ ಕೀ ಹೊಸ ವರ್ಷನ್ ಹೊಂದಿರುವ ಕ್ರೋಮ್, ವಿಂಡೋಸ್ 11, ಮ್ಯಾಕ್ಒಎಸ್ ಮತ್ತು ಆ್ಯಂಡ್ರಾಯ್ಡ್ನಲ್ಲಿ ಕಾಣಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ವಿಂಡೋಸ್ 7, 8/8.1 ರಲ್ಲಿ ಎಡ್ಜ್ ಬ್ರೌಸರ್ಗೆ ಸಪೋರ್ಟ್ ಕೊನೆಗೊಳಿಸಿದ ಮೈಕ್ರೊಸಾಫ್ಟ್