ETV Bharat / science-and-technology

ವೈರಸ್​ ವಾಹಕಗಳಾಗಬಹುದು ಸ್ಮಾರ್ಟ್​ಫೋನ್​ಗಳು.. ದಿನವೂ ಸ್ವಚ್ಛಗೊಳಿಸಿ - ಫೋನ್‌ಗಳನ್ನು ಟಾಯ್ಲೆಟ್‌ನಲ್ಲಿ ಬಳಸುತ್ತಾರೆ

ಇತ್ತೀಚೆಗೆ ಸ್ಮಾರ್ಟ್​ಫೋನ್ ಇಲ್ಲದೆ ಜಗತ್ತೇ ಇಲ್ಲ ಎಂಬಂತಾಗಿದೆ. ಎಲ್ಲರೂ ಎಲ್ಲಿ ಹೋದರೂ ಫೋನ್ ಕೈಯಲ್ಲಿ ಹಿಡಿದುಕೊಂಡು ಹೋಗುವುದು ಅಭ್ಯಾಸವಾಗಿದೆ. ಆದರೆ, ಹೀಗೆ ಮಾಡುವುದರಿಂದ ಫೋನ್​ ಸಾಂಕ್ರಾಮಿಕ ರೋಗ ಹರಡುವ ವೈರಸ್​ಗಳನ್ನು ಹರಡುವ ಸಾಧನವಾಗುತ್ತಿದೆ.

The dirty truth about your phone and why you need to stop scrolling in the bathroom

author img

By

Published : Apr 25, 2023, 1:25 PM IST

ಲೀಸೆಸ್ಟರ್ (ಇಂಗ್ಲೆಂಡ್): ನಾವು ನಮ್ಮ ಸ್ಮಾರ್ಟ್​ಫೋನ್ ತೆಗೆದುಕೊಂಡು ಹೋಗದ ಜಾಗವೇ ಇಲ್ಲದಂತಾಗಿದೆ. ಮಲಗುವಾಗ, ಬೆಳಗ್ಗೆ ಎದ್ದ ತಕ್ಷಣ ಬಾತ್​ರೂಮಿಗೆ ಹೋಗುವಾಗ ಹೀಗೆ ಎಲ್ಲ ಕಡೆಗೂ ನಾವು ನಮ್ಮ ಫೋನ್ ಹಿಡಿದುಕೊಂಡಿರುತ್ತೇವೆ. ವಿಶ್ವದ ಶೇ 90 ರಷ್ಟು ಜನ ಬೆಳಗ್ಗೆ ಎದ್ದ ತಕ್ಷಣ ನೋಡುವುದೇ ಫೋನನ್ನು. ಆದರೆ, ಹೀಗೆ ಎಲ್ಲ ಕಡೆಗೂ ಫೋನ್ ಬಳಸುವುದರಿಂದ ಸೂಕ್ಷ್ಮಾಣುಗಳಿಂದ ನಮಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

2019 ರ ಸಮೀಕ್ಷೆಯ ಪ್ರಕಾರ ಬ್ರಿಟನ್​ನಲ್ಲಿ ಬಹುತೇಕ ಜನರು ತಮ್ಮ ಫೋನ್‌ಗಳನ್ನು ಟಾಯ್ಲೆಟ್‌ನಲ್ಲಿ ಬಳಸುತ್ತಾರೆ ಎಂದು ಕಂಡು ಬಂದಿದೆ. ಹಾಗಾಗಿ ನಮ್ಮ ಮೊಬೈಲ್ ಫೋನ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಕೊಳಕಾಗಿರುತ್ತವೆ ಎಂದು ಅಧ್ಯಯನಗಳು ಕಂಡು ಹಿಡಿದಿರುವುದು ಆಶ್ಚರ್ಯವೇನಲ್ಲ. ನಾವು ನಮ್ಮ ಫೋನ್‌ಗಳನ್ನು ಮಕ್ಕಳಿಗೆ ಆಟವಾಡಲು ನೀಡುತ್ತೇವೆ. ಫೋನ್‌ಗಳನ್ನು ಬಳಸುತ್ತ ಅದೇ ಸಮಯಕ್ಕೆ ತಿನ್ನುತ್ತಿರುತ್ತೇವೆ. ಅವುಗಳನ್ನು ಎಲ್ಲ ರೀತಿಯ ಕೊಳಕು ಮೇಲ್ಮೈಗಳಲ್ಲಿ ಇಡುತ್ತೇವೆ. ಇವುಗಳೆಲ್ಲವೂ ಸೂಕ್ಷ್ಮಜೀವಿಗಳನ್ನು ನಿಮ್ಮ ಫೋನ್‌ಗೆ ವರ್ಗಾಯಿಸಬಹುದು. ಜೊತೆಗೆ ಆ ಸೂಕ್ಷ್ಮಜೀವಿಗಳಿಗೆ ತಿನ್ನಲು ಆಹಾರವನ್ನು ಕೂಡ ನಿಮ್ಮ ಫೋನ್​ಗೆ ವರ್ಗಾಯಿಸಬಹುದು.

ಒಂದು ಅಂದಾಜಿನ ಪ್ರಕಾರ ಜನರು ದಿನಕ್ಕೆ ಸಾವಿರಾರು ಬಾರಿ ಅಲ್ಲದಿದ್ದರೂ ನೂರಾರು ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ. ನಮ್ಮಲ್ಲಿ ಅನೇಕರು ಬಾತ್‌ರೂಮ್‌ಗೆ ಹೋಗಿ ಬಂದ ನಂತರ, ಅಡುಗೆ ಮಾಡಿದ ನಂತರ, ಶುಚಿಗೊಳಿಸುವಿಕೆಯ ನಂತ ಅಥವಾ ತೋಟಗಾರಿಕೆಯ ಕೆಲಸದ ನಂತರ ಕೈಗಳನ್ನು ತೊಳೆಯುತ್ತೇವೆ. ಆದರೆ ನಮ್ಮ ಫೋನ್‌ಗಳನ್ನು ಸ್ಪರ್ಶಿಸಿದ ನಂತರ ಯಾರೇ ಆದರೂ ತಮ್ಮ ಕೈಗಳನ್ನು ತೊಳೆದುಕೊಳ್ಳುವುದು ಬಹಳ ಕಡಿಮೆ. ಆದರೆ ಫೋನ್‌ಗಳು ಎಷ್ಟು ಕೊಳಕು ಹಾಗೂ ಅಪಾಯಕಾರಿಯಾದ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ ಎಂಬುದನ್ನು ನೋಡಿದರೆ ಬಹುಶಃ ಇದು ಮೊಬೈಲ್ ಫೋನ್ ನೈರ್ಮಲ್ಯದ ಬಗ್ಗೆ ಹೆಚ್ಚು ಯೋಚಿಸುವ ಸಮಯವಾಗಿದೆ.

ಸೋಂಕು ಹರಡುವ ಮಾಧ್ಯಮವಾಗಬಹುದು ಎಚ್ಚರ: ನಮ್ಮ ಕೈಗಳಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಆಗಾಗ ಅಂಟಿಕೊಳ್ಳುತ್ತಿರುತ್ತವೆ ಮತ್ತು ಈ ಮೂಲಕ ಅವು ಸೋಂಕು ಹರಡುವ ಮಾರ್ಗಗಳಾಗಿವೆ. ನಾವು ಸ್ಪರ್ಶಿಸುವ ಫೋನ್‌ಗಳು ಕೂಡ ಹಾಗೆಯೇ. ಮೊಬೈಲ್ ಫೋನ್‌ಗಳ ಮೇಲೆ ಸೂಕ್ಷ್ಮಾಣುಜೀವಿಗಳು ಜಮೆಯಾಗುವ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ವಿವಿಧ ರೀತಿಯ ಸಂಭಾವ್ಯ ರೋಗಕಾರಕ ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್ ಮೇಲಿರುತ್ತವೆ ಎಂಬುದು ಈ ಅಧ್ಯಯನಗಳಲ್ಲಿ ಕಂಡು ಬಂದಿದೆ.

ಆ್ಯಂಟಿಬ್ಯಾಕ್ಟೀರಿಯಲ್ ವೈಪ್‌ಗಳು ಅಥವಾ ಆಲ್ಕೋಹಾಲ್‌ನಿಂದ ನಿಮ್ಮ ಫೋನ್ ಅನ್ನು ನೀವು ಸ್ವಚ್ಛಗೊಳಿಸಿದರೂ ಸಹ ಅದರ ಮೇಲೆ ಮತ್ತೆ ಸೂಕ್ಷ್ಮಜೀವಿಗಳು ಬೆಳೆಯಬಹುದು ಎಂದು ಸಂಶೋಧನೆಯು ಕಂಡುಹಿಡಿದಿದೆ. ಅಂದರೆ ಫೋನನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯು ನಿರಂತರ ಪ್ರಕ್ರಿಯೆಯಾಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ. ಫೋನ್‌ಗಳು ಪ್ಲಾಸ್ಟಿಕ್‌ ಅನ್ನು ಒಳಗೊಂಡಿರುವುದರಿಂದ ಅವು ವೈರಸ್​​ಗಳನ್ನು ಸುಲಭವಾಗಿ ಹರಡುತ್ತವೆ. ಫೋನ್​ನ ಗಟ್ಟಿಯಾದ ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ ಒಂದು ವಾರದವರೆಗೆ ವೈರಸ್​ಗಳು ಬದುಕಬಲ್ಲವು. ಇತರ ವೈರಸ್‌ಗಳಾದ ಕೋವಿಡ್​-19, ರೋಟವೈರಸ್ (ಸಾಮಾನ್ಯವಾಗಿ ಶಿಶುಗಳು ಮತ್ತು ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುವ ವೈರಸ್​) ಇನ್ಫ್ಲುಯೆಂಜಾ ಮತ್ತು ನೊರೊವೈರಸ್​ನಂಥ ವೈರಸ್​ಗಳು ಗಂಭೀರವಾದ ಉಸಿರಾಟ ಮತ್ತು ಕರುಳಿನ ಸೋಂಕನ್ನು ಉಂಟುಮಾಡಬಹುದು.

ನಿಯಮಿತವಾಗಿ ಫೋನ್​ಗಳನ್ನ ಸ್ವಚ್ಛಗೊಳಿಸಿ: ಆದ್ದರಿಂದ ನೀವು ನಿಯಮಿತವಾಗಿ ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸಬೇಕೆಂಬುದು ಸ್ಪಷ್ಟ. ನಿಮ್ಮ ಫೋನನ್ನು ಸ್ವಚ್ಛಗೊಳಿಸಲು ಆಲ್ಕೋಹಾಲ್ ಆಧಾರಿತ ವೈಪ್​ಗಳು ಅಥವಾ ಸ್ಪ್ರೇಗಳನ್ನು ಬಳಸಿ. ಫೋನ್ ಕೇಸಿಂಗ್‌ಗಳು ಮತ್ತು ಟಚ್‌ಸ್ಕ್ರೀನ್‌ಗಳನ್ನು ಸೋಂಕುರಹಿತಗೊಳಿಸಬೇಕಾದರೆ ವೈಪ್​ಗಳು ಮತ್ತು ಸ್ಪ್ರೇಗಳು ಕನಿಷ್ಠ 70 ಪ್ರತಿಶತದಷ್ಟು ಆಲ್ಕೋಹಾಲ್ ಅನ್ನು ಹೊಂದಿರಬೇಕು. ಸಾಧ್ಯವಾದರೆ ಇವನ್ನು ಬಳಸಿ ಪ್ರತಿದಿನ ನಿಮ್ಮ ಫೋನ್ ಕ್ಲೀನ್ ಮಾಡುವುದು ಒಳಿತು. ಸ್ಯಾನಿಟೈಸರ್‌ಗಳನ್ನು ನೇರವಾಗಿ ಫೋನ್‌ ಮೇಲೆ ಸ್ಪ್ರೇ ಮಾಡಬೇಡಿ ಮತ್ತು ಲಿಕ್ವಿಡ್​ಗಳನ್ನು ಕನೆಕ್ಷನ್ ಪಾಯಿಂಟ್‌ಗಳು ಅಥವಾ ಇತರ ಓಪನಿಂಗ್​​ಗಳಲ್ಲಿ ಹಾಕಬೇಡಿ. ಬ್ಲೀಚ್ ಅಥವಾ ಅಬ್ರೇಸಿವ್​​ ಕ್ಲೀನರ್​ಗಳನ್ನು ಬಳಸಬೇಡಿ. ಫೋನ್ ಸ್ವಚ್ಛ ಮಾಡಿದ ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

ನಿಮಗೆ ಯಾವುದೇ ಸೋಂಕು ತಗುಲಿದ್ದರೆ ಅಥವಾ ನಿಮ್ಮ ಫೋನ್ ಅನ್ನು ಸ್ಯಾನಿಟೈಸ್ ಮಾಡಿಲ್ಲದಿದ್ದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಮಕ್ಕಳಿಗೆ ಆಟವಾಡಲು ಫೋನ್ ನೀಡಿದ್ದರೆ ಅದನ್ನು ಸ್ವಚ್ಛಗೊಳಿಸಿ. ಬಳಕೆಯಲ್ಲಿಲ್ಲದಿದ್ದಾಗ ನಿಮ್ಮ ಫೋನ್ ಅನ್ನು ದೂರವಿಡುವ ಅಭ್ಯಾಸ ರೂಢಿಸಿಕೊಳ್ಳಿ. ಫೋನ್ ಮಾತ್ರವಲ್ಲದೆ ಯಾವಾಗಲಾದರೊಮ್ಮೆ ನಿಮ್ಮ ಚಾರ್ಜರ್ ಅನ್ನು ಸಹ ಸ್ಯಾನಿಟೈಸ್​ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ : ಚಾಟ್​ಜಿಪಿಟಿಗಿಂತ ಪ್ರಬಲ AI ತಯಾರಿಸಲಿದೆ ’ಗೂಗಲ್​ ಡೀಪ್​ ಮೈಂಡ್​’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.