ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಬಿಲಿಯೇನಿರ್ ಎಲೋನ್ ಮಸ್ಕ್ ಒಡೆತನದ ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಉತ್ತಮ ಸರೌಂಡ್ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಸಿಸ್ಟಮ್ ಸಂಯೋಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ.
ಡಾಲ್ಬಿ ಲ್ಯಾಬೋರೇಟರೀಸ್ ಸಂಸ್ಥೆಯ ಡಾಲ್ಬಿ ಅಟ್ಮಾಸ್ ಎಂಬ ಸರೌಂಡ್ ಸೌಂಡ್ ತಂತ್ರಜ್ಞಾನ ನಿರ್ಮಿಸಿದೆ. ಕಂಪನಿಯ ಮಾಹಿತಿ ಪ್ರಕಾರ, ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಮೊದಲು ಚಲನಚಿತ್ರ ಥಿಯೇಟರ್‌ಗಳಲ್ಲಿ ಸಂಯೋಜಿಸಲಾಗಿತ್ತು. ನಂತರ ಉನ್ನತ ಮಟ್ಟದ ಹೋಮ್ ಥಿಯೇಟರ್‌ಗಳಲ್ಲಿ ಸಂಯೋಜಿಸಲಾಗಿತ್ತು. ಈಗ ಕಾರುಗಳಲ್ಲಿ ಅವಳಡಿಸುವ ಕೆಲಸ ನಡೆಯುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೆಸ್ಲಾ ವಾರ್ಷಿಕ ಹಾಲಿಡೇ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿತ್ತು. ಇದು ವಾಹನಗಳಲ್ಲಿ ಸ್ಥಾಪಿಸಲಾದ ಬಾಹ್ಯ ಸ್ಪೀಕರ್‌ಗಳನ್ನು ಬಳಸಿಕೊಂಡು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಮೆಗಾಫೋನ್‌ಗಳಾಗಿ ಪರಿವರ್ತಿಸುತ್ತದೆ ಎಂದು ಕಂಪನಿ ಹೇಳಿದೆ. ಟೆಸ್ಲಾ ಕಾರುಗಳಲ್ಲಿನ ಬಾಹ್ಯ ಸ್ಪೀಕರ್‌ಗಳು ಚಾಲಕ ಹೇಳುವ ಪ್ರತಿಯೊಂದನ್ನು ಸ್ವಲ್ಪ ಸಮಯದ ನಂತರ ಪುನರಾವರ್ತಿಸುತ್ತವೆ.
ಇದನ್ನೂ ಓದಿ: ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 5G ನೆಟ್ವರ್ಕ್ ಪಡೆದ ಮೊದಲ ರಾಜ್ಯ ಗುಜರಾತ್