ನವದೆಹಲಿ: ತೈವಾನ್ನ ಉತ್ಪಾದಕ ಗುತ್ತಿಗೆದಾರ ಸಂಸ್ಥೆಯಾಗಿರುವ ಫಾಕ್ಸ್ಕಾನ್ ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ಉತ್ಪಾದನೆಗೆ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಅನುಮೋದನೆ ಪಡೆದುಕೊಂಡಿದೆ. ಚೀನಾದಿಂದ ಹೊರಗೆ ತನ್ನ ಉದ್ಯಮವನ್ನು ಸ್ಥಾಪಿಸುವಲ್ಲಿ ಇದೊಂದು ದೊಡ್ಡ ಮತ್ತು ಗಮನಾರ್ಹ ಹೆಜ್ಜೆಯಾಗಿದೆ. ಅಲ್ಲದೇ ಭಾರತದ ಅತಿ ದೊಡ್ಡ ಬಂಡಾವಳ ಹೂಡಿಕೆ ಸಂಸ್ಥೆ ಈ ಫಾಕ್ಸ್ಕಾನ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ 300 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಘಟಕದಲ್ಲಿ ಫಾಕ್ಸ್ಕಾನ್ 1.6 ಬಿಲಿಯನ್ ಡಾಲರ್ ಮೌಲ್ಯದ ಬಂಡಾವಳ ಹೂಡಲು ಅನುಮೋದನೆ ಪಡೆದಿದೆ ಎಂದು ಬ್ಲೂಬರ್ಗ್ ವರದಿ ಮಾಡಿದೆ. ಈ ಘಟಕದಲ್ಲಿ ಆ್ಯಪಲ್ ಬಿಡಿಭಾಗಗಳನ್ನು ತಯಾರಿಸುವುದು ಹಾಗೂ ಆ್ಯಪಲ್ ಫೋನ್ಗಳನ್ನು ಅಸೆಂಬಲ್ ಕೂಡ ಮಾಡಲಾಗುವುದು. ಅಲ್ಲದೆ ಆ್ಯಪಲ್ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಗಳ ಕೆಲ ಭಾಗಗಳನ್ನು ಇಲ್ಲಿ ತಯಾರಿಸುವ ಸಾಧ್ಯತೆ ಇದೆ.
ಇತ್ತೀಚೆಗೆ ಈ ಘಟಕದಲ್ಲಿ 2.7 ಬಿಲಿಯನ್ ಡಾಲರ್ ಅನ್ನು ತೈವಾನ್ ಸಂಸ್ಥೆ ನೀಡಿದೆ. ಆ್ಯಪಲ್ನ ಪ್ರಮುಖ ಉತ್ಪಾದಕ ಭಾಗಿದಾರವಾಗಿರುವ ಫಾಕ್ಸ್ಕಾನ್ ಕನಿಷ್ಠ ವರ್ಷದಲ್ಲಿ ಒಂದು ಬಾರಿ ತನ್ನ ಫ್ಯಾಕ್ಟರಿಗಾಗಿ ಬಡ್ಜೆಟ್ ಅನ್ನು ಹೆಚ್ಚಿಸುತ್ತದೆ. ಇದು 2023ರ ಆರಂಭದಲ್ಲಿ ಕರ್ನಾಟಕದಲ್ಲಿನ ತನ್ನ ಸಂಸ್ಥೆ ನಿರ್ಮಾಣಕ್ಕೆ 700 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಹೊಂದಿತು.
ಈ ನಡುವೆ, ಟಾಟಾ ಗ್ರೂಪ್ ಕೂಡ ಭಾರತದಲ್ಲಿನ ಅತಿ ದೊಡ್ಡ ಐಫೋನ್ ಜೋಡಣಾ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡುವ ಯೋಜನೆ ಹೊಂದಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಸೌಲಭ್ಯಗಳಿಂದಾಗಿ ಎರಡು ವರ್ಷದೊಳಗೆ 50 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯಲಿದ್ದಾರೆ. ಈ ಘಟಕಗಳು 12 ರಿಂದ 18 ತಿಂಗಳೊಳಗೆ ಕಾರ್ಯ ನಿರ್ವಹಿಸುವ ಗುರಿಯನ್ನು ಹೊಂದಿವೆ.
ಫಾಕ್ಸ್ಕಾನ್ನ ಈ ನಡೆಯು ಆಗ್ನೇಯ ಏಷ್ಯಾ ದೇಶದಲ್ಲಿ ಆ್ಯಪಲ್ ತಮ್ಮ ಉತ್ಪಾದನೆ ಕಾರ್ಯಾಚರಣೆಯನ್ನು ವಿಸ್ತರಿಸುವ ಗುರಿಯ ಭಾಗವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಐಫೋನ್ ಉತ್ಪಾದನಾ ಘಟಕಕ್ಕೆ ಟಾಟಾ ಕಾರ್ಯಾಚಾರಣೆ ನಡೆಸುತ್ತಿದ್ದು, ಇದನ್ನು ವಿಸ್ಟ್ರನ್ ಕ್ರಾಪ್ನಿಂದ ಖರೀದಿಸಲಾಗಿದೆ.
ಐಫೋನ್ನ ಪಾಲುದಾರಿಕಾ ಕಂಪನಿಯಾಗಿರುವ ಫಾಕ್ಸ್ಕಾನ್ ಕೋವಿಡ್ 19 ಬಳಿಕ ತಮ್ಮ ಉತ್ಪಾದನೆ ಘಟಕವನ್ನು ಚೀನಾದ ಬದಲು ಇತರೆ ದೇಶದಲ್ಲಿ ಸ್ಥಾಪಿಸಲು ಮುಂದಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಸ್ಟಾರ್ಟಪ್ ಫಂಡಿಂಗ್: ಜಾಗತಿಕವಾಗಿ 4ನೇ ಸ್ಥಾನಕ್ಕೆ ಕುಸಿದ ಭಾರತ