ETV Bharat / science-and-technology

ಎಲೆಕ್ಟ್ರಿಕ್ ವಾಹನ ಉದ್ಯಮದ ಸಬ್ಸಿಡಿ ಪ್ರೇರಿತ ಬೆಳವಣಿಗೆ; ಭಾರತದ ಮುಂದಿನ ದಾರಿಯೇನು? - subsidy induced growth

ಭಾರತದ ಎಲೆಕ್ಟ್ರಿಕ್ ಉದ್ಯಮದ ಬೆಳವಣಿಗೆಗೆ ಫೇಮ್-2 ಯೋಜನೆಯನ್ನು ವಿಸ್ತರಿಸಬೇಕೆಂದು ಉದ್ಯಮ ವಲಯ ಒತ್ತಾಯಿಸಿದೆ.

Driving Electric Vehicle Adoption with Subsidies in India

author img

By ETV Bharat Karnataka Team

Published : Dec 27, 2023, 6:36 PM IST

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದರೂ, ಈ ಪ್ರಕ್ರಿಯೆ ಇನ್ನೂ ಆರಂಭಿಕ ಆರಂಭಿಕ ಹಂತದಲ್ಲಿದೆ. ಸರ್ಕಾರದ 'ಫೇಮ್' (ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್) ಯೋಜನೆ ಮತ್ತು ರಾಜ್ಯ ಮಟ್ಟದ ಸಬ್ಸಿಡಿಗಳ ನೇರ ಖರೀದಿ ಪ್ರೋತ್ಸಾಹದಿಂದ ಈ ವಲಯದ ಬೆಳವಣಿಗೆ ಗಮನಾರ್ಹವಾಗಿ ಹೆಚ್ಚುತ್ತಿದೆ.

ನವೆಂಬರ್ 2023ರ ಹೊತ್ತಿಗೆ, ಒಎಂಐ ಫೌಂಡೇಶನ್​ನ ಇವಿ-ರೆಡಿ ಇಂಡಿಯಾ ವರದಿಯ ಮಾಹಿತಿಯ ಪ್ರಕಾರ- ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯ ಪ್ರಮಾಣ ಶೇ 5ರಷ್ಟಿದೆ ಎಂದು ತಿಳಿಸಿದೆ. ಅಂದರೆ ಭಾರತದಲ್ಲಿ ನೋಂದಾಯಿಸಲಾಗುವ ಪ್ರತಿ 100 ವಾಹನಗಳಲ್ಲಿ 5 ಎಲೆಕ್ಟ್ರಿಕ್ ವಾಹನಗಳಾಗಿವೆ. ಎಲೆಕ್ಟ್ರಿಕ್ ವಾಹನಗಳ ಒಟ್ಟು ಖರೀದಿಯ ಪೈಕಿ ತ್ರಿಚಕ್ರ ಪ್ರಯಾಣಿಕರ ವಾಹನಗಳ ಖರೀದಿ ಶೇ 50.91 ರಷ್ಟಿದ್ದರೆ, ಸರಕು ವಾಹಕಗಳು ಶೇ 32.84, ದ್ವಿಚಕ್ರ ವಾಹನಗಳು ಶೇ 3.99ರಷ್ಟು ಮತ್ತು ಕಾರುಗಳ ಪ್ರಮಾಣ ಶೇ 1.57ರಷ್ಟಿದೆ. ಈ ವರ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಯಲ್ಲಿನ ಗಮನಾರ್ಹ ಅಂಶವೆಂದರೆ ಮೇ 2023ರಲ್ಲಿ ಶೇ 7.14 ರಷ್ಟಿದ್ದ ಇದರ ಪ್ರಮಾಣ ನವೆಂಬರ್ 2023ರಲ್ಲಿ ಶೇ 3.99ಕ್ಕೆ ಇಳಿಕೆಯಾಗಿರುವುದು.

ಆದಾಗ್ಯೂ, ತ್ರಿಚಕ್ರ ವಾಹನ ವಿಭಾಗದಲ್ಲಿ ಕಡಿಮೆ-ವೆಚ್ಚದ ಇ-ರಿಕ್ಷಾಗಳ ಕಾರಣದಿಂದ ಇವುಗಳ ಬಳಕೆ ಹೆಚ್ಚಾಗಿದೆ. ಈಗಿರುವ ಇತರೆ ಮಾದರಿಗಳ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಎಲೆಕ್ಷ್ರಿಕ್ ವಾಹನಗಳು ಕೈಗೆಟುಕುವ ದರದಲ್ಲಿ ಸಿಗುತ್ತವೆ ಮತ್ತು ಇವುಗಳ ಅಳವಡಿಕೆಯು ಸಬ್ಸಿಡಿಗಳಿಂದ ಕಡಿಮೆ ಪ್ರಭಾವಿತವಾಗಿದೆ. ಮತ್ತೊಂದೆಡೆ, ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದರೂ ಇವುಗಳ ಖರೀದಿ ಮೌಲ್ಯವು ಈಗಿನ ಪೆಟ್ರೋಲ್ ಮತ್ತು ಡೀಸೆಲ್​ ವಾಹನಗಳಿಗಿಂತ ಹೆಚ್ಚಾಗಿರುವುದರಿಂದ ಇವುಗಳ ಖರೀದಿ ಪ್ರಮಾಣ ಕಡಿಮೆಯಾಗಿರಬಹುದು.

10,000 ಕೋಟಿ ರೂ.ಗಳ ಬಜೆಟ್​ನೊಂದಿಗೆ ಏಪ್ರಿಲ್ 1, 2019ರಂದು ಪ್ರಾರಂಭಿಸಲಾದ ಫೇಮ್ 2 ಯೋಜನೆಯು ಮಾರ್ಚ್ 31, 2024ರಂದು ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 5, 2023 ರ ಹೊತ್ತಿಗೆ, ಈ ಯೋಜನೆಯು 11,61,350 ಎಲೆಕ್ಟ್ರಿಕ್ ವಾಹನಗಳಿಗೆ 5248.00 ಕೋಟಿ ರೂ.ಗಳ ಸಬ್ಸಿಡಿಗಳನ್ನು ವಿತರಿಸಿದೆ. ಈ ಯೋಜನೆಯನ್ನು ವಿಸ್ತರಿಸಬೇಕೆಂದು ದೇಶೀಯ ಇವಿ ಉದ್ಯಮ ಒತ್ತಾಯಿಸುತ್ತಿದ್ದರೂ ಫೇಮ್ 3 ಹಂತದ ಯೋಜನೆ ಜಾರಿಗೊಳಿಸಲು ಸರ್ಕಾರ ಹಿಂಜರಿಯುತ್ತಿದೆ ಎನ್ನಲಾಗಿದೆ. ಇದು ಇವಿ ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ವಿಶೇಷವಾಗಿ ಈ ಬೆಳೆಯುತ್ತಿರುವ ಉದ್ಯಮದ ಅವಿಭಾಜ್ಯ ಅಂಗವಾದ ಸ್ಟಾರ್ಟ್ಅಪ್​ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಪಳೆಯುಳಿಕೆ-ಇಂಧನ ವಾಹನಗಳ ಹೆಚ್ಚಿನ ಕಾರ್ಯಾಚರಣೆಯ ವೆಚ್ಚದಿಂದಾಗಿ ಶುದ್ಧ ಇಂಧನ ವಾಹನಗಳಿಗೆ ಪರಿವರ್ತನೆ ತಾನಾಗಿಯೇ ನಡೆಯಲಿದೆ ಎಂಬುದು ಕೆಲ ಸರ್ಕಾರಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಕೈಗಾರಿಕೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ 324ನೇ ವರದಿಯಲ್ಲಿ ಸ್ಥಿರ ನೀತಿ ಚೌಕಟ್ಟುಗಳ ಅಗತ್ಯವನ್ನು ಎತ್ತಿ ತೋರಿಸಿದೆ. ಗ್ರಾಹಕರ ವಿಶ್ವಾಸವನ್ನು ಕುಗ್ಗಿಸುವ ಮತ್ತು ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುವ ಮಾರುಕಟ್ಟೆ ಅನಿಶ್ಚಿತತೆಗಳನ್ನು ತಡೆಗಟ್ಟಲು ಸ್ಥಿರ ನೀತಿಗಳು ಅತ್ಯಗತ್ಯ ಎಂದು ಅದು ವಾದಿಸಿದೆ. ಸಮಿತಿಯು ಫೇಮ್ -2 ಅನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಲಹೆ ನೀಡಿದೆ.

ಇದಲ್ಲದೆ, ಎಲೆಕ್ಟ್ರಿಕ್ ವಾಹನ ವಲಯದ ಪ್ರಗತಿಯ ಬಗ್ಗೆ ಸ್ಥಿರವಾದ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವುದು ಅಗತ್ಯ ಎಂದು ಸಮಿತಿಯು ಶಿಫಾರಸು ಮಾಡಿದೆ. ಇಂತಹ ನೀತಿಯು ಇವಿ ಉದ್ಯಮವನ್ನು ಬೆಂಬಲಿಸುವುದಲ್ಲದೆ, 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಮತ್ತು 2030ರ ವೇಳೆಗೆ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು ಒಂದು ಬಿಲಿಯನ್ ಟನ್​ಗಳಷ್ಟು ಕಡಿಮೆ ಮಾಡುವ ಭಾರತದ ಬದ್ಧತೆಗೆ ಕೊಡುಗೆ ನೀಡುತ್ತದೆ. ಈ ಬದ್ಧತೆಯ ಮಹತ್ವದ ಭಾಗವು ಸಾರಿಗೆ ವಲಯವನ್ನು ಡಿಕಾರ್ಬನೈಸ್ ಮಾಡುವುದನ್ನು ಒಳಗೊಂಡಿದೆ. ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್​ನಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೆಚ್ಚಿಸಲು ಫೇಮ್ -2 ಯೋಜನೆಯಲ್ಲಿ ಖಾಸಗಿ ಇವಿ ನಾಲ್ಕು ಚಕ್ರದ ವಾಹನಗಳನ್ನು ಸೇರಿಸಲು ಸಮಿತಿ ಪ್ರಸ್ತಾಪಿಸಿದೆ.

ಜಾಗತಿಕ ಪ್ರವೃತ್ತಿಗಳನ್ನು ಹೋಲಿಸಿ ನೋಡಿದರೆ ಅನೇಕ ದೇಶಗಳು ಇವಿ ಅಳವಡಿಕೆಯನ್ನು ಹೆಚ್ಚಿಸಲು ತಮ್ಮ ಸಬ್ಸಿಡಿ ತಂತ್ರಗಳನ್ನು ಮರುಹೊಂದಿಸಿವೆ. ಉದಾಹರಣೆಗೆ, ಯುಎಸ್ ಹಣದುಬ್ಬರ ಕಡಿತ ಕಾಯ್ದೆಯನ್ನು (ಐಆರ್ಎ) ಜಾರಿಗೆ ತಂದಿದೆ ಮತ್ತು ಚೀನಾ 2022 ರಲ್ಲಿ ಶೇ 30ರಷ್ಟು ಮಾರಾಟದ ಗುರಿಯನ್ನು ತಲುಪಿದ ನಂತರ ನೇರ ಖರೀದಿ ಸಬ್ಸಿಡಿಗಳನ್ನು ತೆಗೆದುಹಾಕಿದೆ. ಅಂತೆಯೇ, 2016 ರಿಂದ 2022 ರವರೆಗೆ ಲಭ್ಯವಿರುವ ಅನುದಾನವನ್ನು ಕ್ರಮೇಣ ಕಡಿತಗೊಳಿಸಿದ ನಂತರ, 20%ಕ್ಕಿಂತ ಹೆಚ್ಚು ಮಾರಾಟ ಪಾಲನ್ನು ಸಾಧಿಸಿದ ನಂತರ ಯುನೈಟೆಡ್ ಕಿಂಗ್ಡಮ್ 2022ರಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಸಬ್ಸಿಡಿಗಳನ್ನು ಹಂತ ಹಂತವಾಗಿ ನಿಲ್ಲಿಸಿತು. ಇವಿ ಅಳವಡಿಕೆಯನ್ನು ಹೆಚ್ಚಿಸುವ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಭಾರತ, ಈ ಅಂತರರಾಷ್ಟ್ರೀಯ ಉದಾಹರಣೆಗಳಿಂದ ಪಾಠ ಕಲಿಯುವ ಮೂಲಕ ಸುಮಾರು ಶೇಕಡಾ 30ರ ಗುರಿಯನ್ನು ಸಾಧಿಸುವವರೆಗೆ ಸಬ್ಸಿಡಿಗಳನ್ನು ಮುಂದುವರಿಸಲು ಪರಿಗಣಿಸಬಹುದು.

ಎಲೆಕ್ಟ್ರಿಕ್ ವಾಹನಗಳಿಂದ ಚಾಲಿತ ಭಾರತದ ಭವಿಷ್ಯದ ಪ್ರಯಾಣವು ಸವಾಲುಗಳಿಂದ ಕೂಡಿದೆ. ಆದರೂ ಇದು ನಿರಂತರ ಸಬ್ಸಿಡಿಗಳ ಪೂರೈಕೆ ಮತ್ತು ಸ್ಥಿರವಾದ ನೀತಿ ಚೌಕಟ್ಟನ್ನು ಸ್ಥಾಪಿಸುವುದರ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿದೆ. ಈ ಕ್ರಮಗಳು ಇವಿ ವಲಯದ ಪ್ರಗತಿಗೆ ಅತ್ಯಗತ್ಯ ಮತ್ತು ಭಾರತದ ಸಾರಿಗೆ ವ್ಯವಸ್ಥೆಯನ್ನು ಅದರ ಪರಿಸರ ಗುರಿಗಳೊಂದಿಗೆ ಸಮನ್ವಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ದೇಶವನ್ನು ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ ಭವಿಷ್ಯದ ಹಾದಿಯಲ್ಲಿ ಕೊಂಡೊಯ್ಯುತ್ತವೆ.

ಈ ಹಿನ್ನೆಲೆಯಲ್ಲಿ, ಭಾರತವು ಫೇಮ್ ಯೋಜನೆಯನ್ನು ವಿಸ್ತರಿಸುವುದು ಮಾತ್ರವಲ್ಲದೆ ಟ್ರಕ್ ಗಳಂತಹ ಮಧ್ಯಮ ಮತ್ತು ಹೆವಿ-ಡ್ಯೂಟಿ ವಾಹನಗಳಂತಹ ಹೊಸ ವಾಹನ ವಿಭಾಗಗಳನ್ನು ಈ ಯೋಜನೆಗೆ ಸೇರಿಸುವುದು ಅತ್ಯಗತ್ಯ. ಈ ವಾಹನಗಳು ಇಂಗಾಲದ ಹೊರಸೂಸುವಿಕೆಯ ಮಹತ್ವದ ಮೂಲವಾಗಿವೆ ಮತ್ತು ಪರಿಣಾಮಕಾರಿ ಮತ್ತು ಸಮಗ್ರ ಡಿಕಾರ್ಬನೈಸೇಶನ್ ಕಾರ್ಯತಂತ್ರಕ್ಕಾಗಿ ಫೇಮ್ ಯೋಜನೆಯಲ್ಲಿ ಅವುಗಳನ್ನು ಸೇರಿಸುವುದು ಇಂದಿನ ಅಗತ್ಯ.

(ಲೇಖನ: ಪ್ರದೀಪ್ ಕರುತುರಿ, ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಎಕ್ಸ್​ಪರ್ಟ್, ಒಎಂಐ ಫೌಂಡೇಶನ್)

ಇದನ್ನೂ ಓದಿ: ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.