ವಾಶಿಂಗ್ಟನ್ : ಬಹುತೇಕ ವಿಜ್ಞಾನಿಗಳು ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ನಾವೀನ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ. ಹ್ಯೂಮನ್ ರಿಸೋರ್ಸ್ ಎಂಬ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜೀವ ವಿಜ್ಞಾನಿಗಳ ಸಂಶೋಧನಾ ವರದಿಗಳು ಅವರಿಗೆ ವಯಸ್ಸಾದಂತೆ ಅರ್ಧಕ್ಕೆ ಅಥವಾ ಎರಡು ಮೂರಾಂಶದಷ್ಟು ಕುಸಿತ ಕಾಣುತ್ತವೆ ಎಂಬುದನ್ನು ಇಲ್ಲಿ ಅಳತೆಗೋಲಾಗಿ ಪರಿಗಣಿಸಲಾಗಿದೆ.
ಇದು ಅತ್ಯಧಿಕ ಕುಸಿತವಾಗಿದೆ. ಜೀವ ವಿಜ್ಞಾನಿಗಳಿಗೆ ವಯಸ್ಸಾದಂತೆ ಅವರ ಕಾರ್ಯವು ಮೊದಲಿನಷ್ಟು ನವೀನ ಹಾಗೂ ಕ್ರಿಯಾಶೀಲವಾಗಿರುವುದಿಲ್ಲ. ಆದರೆ ನವೀನತೆಯ ಕುಸಿತದ ಈ ಪ್ರವೃತ್ತಿಯ ಹಿಂದಿನ ಕಾರಣಗಳು ಸಂಶೋಧನೆಗಳನ್ನು ಹೆಚ್ಚು ಸೂಕ್ಷ್ಮವಾಗಿಸುತ್ತವೆ ಮತ್ತು ವಿಜ್ಞಾನಿಗಳನ್ನು ನಂತರ ಅವರ ವೃತ್ತಿಜೀವನದಲ್ಲಿ ಬೆಂಬಲಿಸುವುದು ಏಕೆ ಮುಖ್ಯ ಎಂಬುದನ್ನು ತೋರಿಸುತ್ತದೆ ಎನ್ನುತ್ತಾರೆ ಬ್ರೂಸ್ ವೀನ್ಬರ್ಗ್. ವೀನ್ಬರ್ಗ್ ಈ ಸಂಶೋಧನೆಯ ಸಹ ಬರಹಗಾರರು ಮತ್ತು ಓಹಿಯೊ ಸ್ಟೇಟ್ ವಿವಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
ವಯಸ್ಸು ಅಥವಾ ಅನುಭವ ಮತ್ತು ಆವಿಷ್ಕಾರ ಗುಣದ ಮಧ್ಯದ ಸಂಬಂಧವನ್ನು 150 ವರ್ಷಗಳ ಹಿಂದಿನಿಂದಲೂ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಆದರೆ ಈವರೆಗೂ ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಈಗಿನ ಸಂಶೋಧನೆಯಲ್ಲಿ ಒಂದು ಉಪಯುಕ್ತವಾದ ಅಂಶವಿದೆ. ಅದೇನೆಂದರೆ 1980 ರಿಂದ 2009 ರ ಮಧ್ಯದಲ್ಲಿ 30 ವರ್ಷಗಳ ಅವಧಿಯಲ್ಲಿ ಪ್ರಕಟವಾದ 5.6 ಮಿಲಿಯನ್ ಬಯೊಮೆಡಿಕಲ್ ಸೈನ್ಸ್ ಆರ್ಟಿಕಲ್ಗಳ ಡೇಟಾಸೆಟ್ ಲಭ್ಯವಿರುವುದು ಮತ್ತು ಮೆಡ್ಲೈನ್ ಇವನ್ನು ಕಂಪೈಲ್ ಮಾಡಿದೆ. ಈ ಡೇಟಾ ಲೇಖಕರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಒಳಗೊಂಡಿದೆ.
ಈ ಹೊಸ ಅಧ್ಯಯನವು ಜೀವವಿಜ್ಞಾನಿಗಳ ಸಂಶೋಧನಾ ಬರಹಗಳಲ್ಲಿರುವ ಆವಿಷ್ಕಾರಗಳನ್ನು ನಿರ್ದಿಷ್ಟ ಮಾನದಂಡವೊಂದನ್ನು ಬಳಸಿ ಅಳೆದಿದೆ. ಅದೇನೆಂದರೆ ವಿಜ್ಞಾನಿಯೊಬ್ಬ ತನ್ನ ಅಧ್ಯಯನ ವರದಿಯಲ್ಲಿ ಎಷ್ಟು ಬಾರಿ ಸಂಶೋಧನೆಯೊಂದನ್ನು ಉಲ್ಲೇಖಿಸುತ್ತಾನೆ ಎಂಬುದು. ಅಂದರೆ ಎಷ್ಟು ಹೆಚ್ಚು ಬಾರಿ ಸಂಶೋಧನೆಯೊಂದನ್ನು ಉಲ್ಲೇಖಿಸಲಾಗುತ್ತದೋ ಅಷ್ಟೇ ಹೆಚ್ಚು ಅದು ಪ್ರಮುಖ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ ಶೇಕಡ 90ರಷ್ಟು ಭಾಗ ಸುಳ್ಳು ಎಂದ ಇಸ್ರೋ ಮಾಜಿ ವಿಜ್ಞಾನಿಗಳು