ETV Bharat / science-and-technology

ಭಾವನೆಗಳನ್ನು ಗುರುತಿಸುವ ತಂತ್ರಜ್ಞಾನ ಆವಿಷ್ಕಾರ: ಆಟಿಸಂ ಚಿಕಿತ್ಸೆಗೆ ಅನುಕೂಲ - ಧರಿಸಬಹುದಾದ ಎಲೆಕ್ಟ್ರೋ ಎನ್ಸೆಫಾಲೋಗ್ರಾಮ್

ಇತ್ತೀಚಿನ ಅಧ್ಯಯನವೊಂದರಲ್ಲಿ ವಿಜ್ಞಾನಿಗಳು ಭಾವನೆಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಆಟಿಸಂ ನಂಥ ನರ ವೈವಿಧ್ಯದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದು ಹೇಳಲಾಗಿದೆ.

Study reveals AI may transform the way we understand emotion

author img

By

Published : Jun 23, 2023, 2:19 PM IST

ಸ್ಕಾಟ್‌ಲ್ಯಾಂಡ್ (ಯುನೈಟೆಡ್ ಕಿಂಗ್‌ಡಮ್) : ಆಟಿಸಂ ನಂಥ ನರವೈವಿಧ್ಯದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಬಹುದಾದ, ಭಾವನೆಗಳನ್ನು ಗುರುತಿಸುವ ತಂತ್ರಜ್ಞಾನವೊಂದನ್ನು ಯೂನಿವರ್ಸಿಟಿ ಆಫ್ ದಿ ವೆಸ್ಟ್ ಆಫ್ ಸ್ಕಾಟ್‌ಲ್ಯಾಂಡ್‌ನಲ್ಲಿ (UWS) ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಇವತ್ತಿನವರೆಗೂ ಭಾವನಾತ್ಮಕ ವಿಚಾರಗಳನ್ನು ಗುರುತಿಸುವಿಕೆಯು ಒಂದು ಸವಾಲಿನ ಮತ್ತು ಸಂಕೀರ್ಣ ಅಧ್ಯಯನದ ಕ್ಷೇತ್ರವಾಗಿದೆ.

ಆದಾಗ್ಯೂ ದೃಷ್ಟಿ ಸಂಸ್ಕರಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಧರಿಸಬಹುದಾದ ಎಲೆಕ್ಟ್ರೋ ಎನ್ಸೆಫಾಲೋಗ್ರಾಮ್ (EEG) ಮತ್ತು ಎಲೆಕ್ಟ್ರೋ ಕಾರ್ಡಿಯೋಗ್ರಾಮ್ (ECG) ಸಂವೇದಕಗಳಂತಹ ಕಡಿಮೆ ವೆಚ್ಚದ ಸಾಧನಗಳೊಂದಿಗೆ, ಯುಡಬ್ಲ್ಯೂಎಸ್​ನ ಶಿಕ್ಷಣ ತಜ್ಞರು ಈ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಂಡು ನಿಖರವಾಗಿ ಕೃತಕ ಬುದ್ಧಿಮತ್ತೆಯನ್ನು (AI) ರಚಿಸಲು ಪ್ರಯತ್ನಿಸಿದ್ದಾರೆ. ಈ ತಂತ್ರಜ್ಞಾನವು ಮೆದುಳು ಮತ್ತು ಮುಖದ ವಿಶ್ಲೇಷಣೆಯಿಂದ ಭಾವನೆ ಸಂಬಂಧಿತ ಸಂಕೇತಗಳನ್ನು ಓದಬಲ್ಲದು ಎಂದು ಹೇಳಲಾಗಿದೆ.

ಭಾವನೆಗಳು ಮಾನವ ಅನುಭವದ ಮೂಲಭೂತ ಅಂಶವಾಗಿವೆ ಮತ್ತು ವಿಭಿನ್ನ ಭಾವನೆಗಳನ್ನು ಪ್ರಚೋದಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜೀವನದ ವಿವಿಧ ಅಂಶಗಳ ಮೇಲೆ ಆಳವಾದ ಪ್ರಭಾವ ಬೀರಬಹುದು ಎನ್ನುತ್ತಾರೆ ಪ್ರೊಫೆಸರ್ ನಯೀಮ್ ರಂಜಾನ್. ಇವರು ಯುಡಬ್ಲ್ಯೂಎಸ್​ ನಲ್ಲಿ ಸ್ಮಾರ್ಟ್ ಪರಿಸರ ಸಂಶೋಧನಾ ಕೇಂದ್ರದ ಪರಿಣಾಮಕಾರಿ ಮತ್ತು ಮಾನವ ಕಂಪ್ಯೂಟಿಂಗ್ ವಿಭಾಗದ ನಿರ್ದೇಶಕರಾಗಿದ್ದಾರೆ.

ಭಾವನೆಗಳನ್ನು ಗುರುತಿಸುವಿಕೆಗೆ ಪ್ರಮುಖ ಸಾಧನವೊಂದನ್ನು ತಯಾರಿಸುವ ದೃಷ್ಟಿಯಿಂದ ನಮ್ಮ ಇತ್ತೀಚಿನ ಅಧ್ಯಯನವು, ಬಹು ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಧರಿಸಬಹುದಾದ ತಂತ್ರಜ್ಞಾನದೊಂದಿಗೆ ನಿಯೋಜಿಸಬಹುದಾದ ಸಮಗ್ರ ದತ್ತಾಂಶವೊಂದನ್ನು ರಚಿಸಿದೆ. ಈ ಡೇಟಾ ಸಂಶೋಧಕರು ಮತ್ತು ಉದ್ಯಮದ ವೃತ್ತಿಪರರಿಗೆ ಅಮೂಲ್ಯವಾದ ಮಾಹಿತಿಯಾಗಲಿದೆ. ಭಾವನಾತ್ಮಕ ಪ್ರಚೋದಕಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಲು ಅವರಿಗೆ ಈ ಮಾಹಿತಿ ಅನುವು ಮಾಡಿಕೊಡಲಿದೆ ಮತ್ತು ಆರೋಗ್ಯ ಮತ್ತು ಯೋಗಕ್ಷೇಮ, ಶಿಕ್ಷಣ ಮತ್ತು ಭದ್ರತೆಯ ವಿಷಯಗಳಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗಬಲ್ಲದು ಎಂದು ಪ್ರೊಫೆಸರ್ ನಯೀಮ್ ರಂಜಾನ್ ಹೇಳಿದರು.

ಈ ವ್ಯವಸ್ಥೆಯು ಮಲ್ಟಿಮೋಡಲ್ ಡೇಟಾಬೇಸ್ ಮೇಲೆ ಆಧರಿತವಾಗಿದೆ. ಇದು ಆಡಿಯೊ ದೃಶ್ಯ ಪ್ರಚೋದಕಗಳನ್ನು ಬಳಸಿಕೊಂಡು ಅಧ್ಯಯನದ ಸಮಯದಲ್ಲಿ ದಾಖಲಿಸಲಾದ ಸಂಕೇತಗಳನ್ನು ಒಳಗೊಂಡಿರುತ್ತದೆ. ಅಧ್ಯಯನದಲ್ಲಿ ಭಾಗವಹಿಸುವವರು ಪ್ರತಿ ಪ್ರಚೋದಕಗಳಿಗೆ ಪ್ರತಿಕ್ರಿಯೆ, ಪ್ರಚೋದನೆ ಮತ್ತು ಪ್ರಾಬಲ್ಯದ ವಿಷಯದಲ್ಲಿ ತಮ್ಮ ಭಾವನಾತ್ಮಕ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ ಮತ್ತು ಸ್ವಯಂ ಮೌಲ್ಯಮಾಪನ ಮಾಡಿದ್ದಾರೆ. ದೈನಂದಿನ ಅಪ್ಲಿಕೇಶನ್‌ಗಳಲ್ಲಿ ಪರಿಣಾಮಕಾರಿ ಕಂಪ್ಯೂಟಿಂಗ್ ವಿಧಾನಗಳನ್ನು ಬಳಸುವಂಥ ಸಾಮರ್ಥ್ಯ ಹೊಂದಿರುವ ಕ್ಯಾಮರಾ ಮತ್ತು ಧರಿಸಬಹುದಾದ ವೈರ್‌ಲೆಸ್ ಉಪಕರಣಗಳನ್ನು ಬಳಸಿಕೊಂಡು ಸಿಗ್ನಲ್‌ಗಳನ್ನು ಸೆರೆಹಿಡಿಯಲಾಗಿದೆ.

ಈ ವೈಜ್ಞಾನಿಕ ಆವಿಷ್ಕಾರವು ವೈದ್ಯರು, ಚಿಕಿತ್ಸಕರು ಮತ್ತು ಆರೈಕೆದಾರರಿಗೆ ನರ ವೈವಿಧ್ಯ ಪರಿಸ್ಥಿತಿಗಳ ವ್ಯಾಪ್ತಿಯೊಂದಿಗೆ ವ್ಯಕ್ತಿಗಳ ಭಾವನಾತ್ಮಕ ಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೊಸ ಸಾಧನವನ್ನು ನೀಡಬಹುದು. ಈ ತಂತ್ರಜ್ಞಾನವು ವರ್ಚುವಲ್ ರಿಯಾಲಿಟಿ ಅಥವಾ ರೊಬೊಟಿಕ್ಸ್‌ನಲ್ಲಿನ ಅಪ್ಲಿಕೇಶನ್‌ನ ರಚನೆಗೆ ದಾರಿ ಮಾಡಿಕೊಡಬಹುದು. ಇದನ್ನು ವಿಶೇಷವಾಗಿ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ವ್ಯಕ್ತಪಡಿಸುವ ಮೂಲಕ ವ್ಯಕ್ತಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : Sudan War: ಸುಡಾನ್​ನಲ್ಲಿ ಮುಂದುವರಿದ ಸಶಸ್ತ್ರ ಸಂಘರ್ಷ; ಆಹಾರ ಕ್ಷಾಮದ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.