ಜೆರುಸಲೇಂ: ಸ್ಟಾರ್ ಮ್ಯಾಪಿಂಗ್ ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಗಯಾ ಬಾಹ್ಯಾಕಾಶ ನೌಕೆಯು ನಕ್ಷತ್ರಪುಂಜದೊಳಗಿನ ದೂರದ ಸೌರವ್ಯೂಹಗಳಲ್ಲಿ ಎರಡು ಹೊಸ ಗುರುವಿನಂತಹ ಗ್ರಹಗಳನ್ನು ಕಂಡುಹಿಡಿದಿದೆ.
ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಂಶೋಧಕರು ಗಯಾ-1ಬಿ ಮತ್ತು ಗಯಾ-2ಬಿ ಎಂಬ ದೈತ್ಯ ಗ್ರಹಗಳನ್ನು ಗುರುತಿಸಿದ್ದಾರೆ. ಹೊಸ ಗ್ರಹಗಳು ತಮ್ಮ ಸೂರ್ಯನಿಗೆ ಬಹಳ ಹತ್ತಿರದಲ್ಲಿವೆ. ಹೀಗಾಗಿ ಅಲ್ಲಿನ ತಾಪಮಾನವು ಸುಮಾರು 1,000 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಈ ಕಾರಣದಿಂದಾಗಿ ಇವುಗಳನ್ನು ‘ಹಾಟ್ ಜುಪಿಟರ್ಸ್’ ಎಂದೂ ಕರೆಯಲಾಗುತ್ತದೆ ಅಂತಾ ಜರ್ನಲ್ ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಓದಿ: ಬಿಗ್‌ಬ್ಯಾಂಗ್ ನಂತರ ರೂಪುಗೊಂಡ ಆರಂಭಿಕ ನಕ್ಷತ್ರಪುಂಜಗಳ ಮೊಟ್ಟ ಮೊದಲ ಚಿತ್ರ!
ಅಮೆರಿಕದ ಅರಿಝೋನಾದಲ್ಲಿ ಟೆಲಿಸ್ಕೋಪ್ನಿಂದ ಪತ್ತೆ ಮಾಡಲಾಗಿರುವ ಎರಡು ದೈತ್ಯ ಗ್ರಹಗಳು ನಮ್ಮ ಸೌರವ್ಯೂಹದ ಗುರು ಗ್ರಹದ ಗಾತ್ರವನ್ನು ಹೋಲುತ್ತವೆ. ಅವುಗಳು ಕಕ್ಷೆಯನ್ನು ಪೂರ್ಣಗೊಳಿಸುವಷ್ಟು ಸೂರ್ಯನಿಗೆ ಹತ್ತಿರದಲ್ಲಿವೆ. ನಾಲ್ಕು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಅಂದರೆ ಪ್ರತಿ ಭೂಮಿಯ ವರ್ಷವನ್ನು ಆ ಗ್ರಹದ 90 ವರ್ಷಗಳಿಗೆ ಹೋಲಿಸಬಹುದಾಗಿದೆ.
ಕೃತಕ ಬುದ್ಧಿಮತ್ತೆಯ ವಿಧಾನಗಳನ್ನು ಬಳಸಿಕೊಂಡು ನಿಖರವಾದ ಹುಡುಕಾಟದ ಹಿನ್ನೆಲೆ ಎರಡು ಹೊಸ ಗ್ರಹಗಳ ಆವಿಷ್ಕಾರವನ್ನು ಮಾಡಲಾಗಿದೆ ಎಂದು ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಶೇಯ್ ಜುಕರ್ ಹೇಳಿದ್ದಾರೆ.