ETV Bharat / science-and-technology

Spectrum Bands: ಹೊಸ ಸ್ಪೆಕ್ಟ್ರಮ್ ಬ್ಯಾಂಡ್‌ಗಳ ಹರಾಜಿಗೆ DoT ಸಿದ್ಧತೆ; ಟ್ರಾಯ್​ಗೆ ಪ್ರಸ್ತಾವನೆ

author img

By

Published : Jul 9, 2023, 6:53 PM IST

ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಪರವಾನಿಗೆ ಅವಧಿ ಮುಕ್ತಾಯಗೊಳ್ಳಲಿರುವ ಮೊಬೈಲ್​ ಸ್ಪೆಕ್ಟ್ರಮ್​ಗಳ ಹರಾಜು ನಡೆಯುವ ಸಾಧ್ಯತೆಯಿದೆ.

DoT to Approach Trai for Auction of New Spectrum Bands This Week

ನವದೆಹಲಿ : ಪರವಾನಿಗೆಗಳ ಮೂಲಕ ಹೊಂದಿರುವ ಮತ್ತು 2024 ರಲ್ಲಿ ಪರವಾನಿಗೆ ಅವಧಿ ಮುಕ್ತಾಯಗೊಳ್ಳಲಿರುವ ರೇಡಿಯೊ ತರಂಗಗಳು (radio waves) ಮತ್ತು ಸ್ಪೆಕ್ಟ್ರಮ್ ಬ್ಯಾಂಡ್‌ಗಳ ಸೆಟ್ ಹರಾಜಿಗಾಗಿ ಟೆಲಿಕಾಂ ಇಲಾಖೆ (DoT) ಈ ವಾರ ವಲಯ ನಿಯಂತ್ರಕ ಟ್ರಾಯ್ ಅನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಟೆಲಿಕಾಂ ಇಲಾಖೆ ಹರಾಜನ್ನು ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

"2024 ರಲ್ಲಿ ನವೀಕರಣಗೊಳ್ಳಲಿರುವ 37 GHz ಬ್ಯಾಂಡ್ ಮತ್ತು ಟೆಲಿಕಾಂ ಪರವಾನಗಿಗಳ ರೇಡಿಯೋ ತರಂಗಗಳ ಹರಾಜಿಗಾಗಿ ಟೆಲಿಕಾಂ ಇಲಾಖೆ ಒಂದೆರಡು ದಿನಗಳಲ್ಲಿ ಟ್ರಾಯ್‌ಗೆ ಉಲ್ಲೇಖವನ್ನು ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಉಲ್ಲೇಖವು 600 ಮೆಗಾಹರ್ಟ್ಜ್ ಬ್ಯಾಂಡ್‌ನಲ್ಲಿನ ಸ್ಪೆಕ್ಟ್ರಮ್‌ನ ಹರಾಜು ಮತ್ತು 2022 ರಲ್ಲಿ ನಡೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಆವರ್ತನ (frequency)ವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಗಳನ್ನು ಆಫರ್ ಮಾಡಿತ್ತು. ಆದರೆ 600 MHz, 800 MHz ಮತ್ತು 2300 MHz ಬ್ಯಾಂಡ್‌ಗಳಲ್ಲಿ ಏರ್‌ವೇವ್‌ಗಳಿಗೆ ಯಾವುದೇ ಬಿಡ್‌ಗಳು ಬಂದಿರಲಿಲ್ಲ. ಸುಮಾರು ಮೂರನೇ ಎರಡರಷ್ಟು ಬಿಡ್‌ಗಳು 5G ಬ್ಯಾಂಡ್‌ಗಳಿಗೆ (3300 Mhz ಮತ್ತು 26 GHz) ಮತ್ತು ಕಾಲು ಭಾಗಕ್ಕಿಂತ ಹೆಚ್ಚಿನ ಬೇಡಿಕೆಯು 700 Mhz ಬ್ಯಾಂಡ್‌ನಲ್ಲಿ ಬಂದಿತ್ತು. 700 Mhz ಬ್ಯಾಂಡ್‌ಗೆ ಹಿಂದಿನ ಎರಡು ಹರಾಜುಗಳಲ್ಲಿ ಅಂದರೆ 2016 ಮತ್ತು 2021 ರಲ್ಲಿ ಯಾವುದೇ ಬೇಡಿಕೆ ಬರದೆ ಮಾರಾಟವಾಗದೆ ಉಳಿದಿತ್ತು.

ಮಾರ್ಚ್ ತ್ರೈಮಾಸಿಕದಲ್ಲಿ ಯೋಜಿಸಲಾದ ಹರಾಜಿನಲ್ಲಿ ಸೇರಿಸಲು ಅನುಕೂಲವಾಗುವಂತೆ ಉಪಗ್ರಹ ಸಂವಹನ ಸ್ಪೆಕ್ಟ್ರಮ್‌ಗಾಗಿ ಹರಾಜು ಮಾರ್ಗಸೂಚಿಗಳನ್ನು ಶೀಘ್ರವೇ ಟ್ರಾಯ್ ಶಿಫಾರಸು ಮಾಡಲಿದೆ ಎಂದು ಟೆಲಿಕಾಂ ಇಲಾಖೆ ನಿರೀಕ್ಷಿಸಿದೆ. ಆದರೆ ಕೇವಲ ಒಂದು ಸ್ಯಾಟಲೈಟ್ ಕಮ್ಯುನಿಕೇಷನ್ ಕಂಪನಿ ಮಾತ್ರ ತರಂಗಾಂತರ ಬೇಡಿಕೆ ಇಟ್ಟಿದೆ. ಆದರೆ ಹರಾಜು ಬದಲಾಗಿ ಆಡಳಿತಾತ್ಮಕವಾಗಿ ತರಂಗಾಂತರವನ್ನು ಹಂಚಿಕೆ ಮಾಡುವಂತೆ ಅದು ಒತ್ತಾಯಿಸಿದೆ.

ಮೂಲಗಳ ಪ್ರಕಾರ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಕೆಲವು ಪರವಾನಗಿಗಳು 2024 ರಲ್ಲಿ ಮುಕ್ತಾಯಗೊಳ್ಳಲಿವೆ ಮತ್ತು ಈ ಪರವಾನಗಿಗಳ ಮೂಲಕ ಹೊಂದಿರುವ ಸ್ಪೆಕ್ಟ್ರಮ್ ಅನ್ನು ಮಾರ್ಚ್ ತ್ರೈಮಾಸಿಕದಲ್ಲಿ ಹರಾಜಿಗೆ ಇಡಲಾಗುತ್ತದೆ.

ಸ್ಪೆಕ್ಟ್ರಮ್ ಎಂಬುದು ಮೊಬೈಲ್ ಉದ್ಯಮಕ್ಕೆ ಮತ್ತು ಇತರ ವಲಯಗಳಿಗೆ ಏರ್ ವೇವ್​ಗಳ ಮೂಲಕ ಸಂವಹನಕ್ಕಾಗಿ ಹಂಚಲಾದ ರೇಡಿಯೋ ತರಂಗಾಂತರಗಳಾಗಿವೆ. ಈ ಸಂದರ್ಭದಲ್ಲಿ ಸ್ಪೆಕ್ಟ್ರಮ್ ಎಂಬ ಪದವು ಸಂವಹನ ಉದ್ದೇಶಗಳಿಗಾಗಿ ಬಳಸಲಾಗುವ ರೇಡಿಯೋ ತರಂಗಗಳ ಶ್ರೇಣಿಯನ್ನು ಸೂಚಿಸುತ್ತದೆ. ಇದು ನೀವು ಕೆಲಸ ಮಾಡುವ ಮಾರ್ಗದಲ್ಲಿ ಕೇಳುವ FM ಅಥವಾ AM ರೇಡಿಯೋ ಪ್ರಸಾರಗಳನ್ನು ಮತ್ತು ಬ್ಲೂಟೂತ್ ಮತ್ತು Wi-Fi ನಂತಹ ಇತರ ವೈರ್‌ಲೆಸ್ ಸಂವಹನಗಳನ್ನು ಒಳಗೊಂಡಿದೆ. ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಡೇಟಾವನ್ನು ರವಾನಿಸಲು ಇದೇ ರೇಡಿಯೋ ತರಂಗಗಳನ್ನು ಬಳಸುತ್ತದೆ.

ಇದನ್ನೂ ಓದಿ : ಗೂಗಲ್​​ನ Med-PaLM 2: ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.