ETV Bharat / science-and-technology

ಜ.6ರಂದು ನಿಗದಿತ ಬಿಂದು ತಲುಪಲಿದೆ ಆದಿತ್ಯ ಎಲ್​1: ಇಸ್ರೋ ಅಧ್ಯಕ್ಷ ಸೋಮನಾಥ್​​ - ಈಟಿವಿ ಭಾರತ್​ ಕನ್ನಡ

ಸೂರ್ಯನ ಸಮಗ್ರ ಅಧ್ಯಯನಕ್ಕೆ ಇಸ್ರೋ ಉಡಾವಣೆ ಮಾಡಿರುವ ಆದಿತ್ಯ ಎಲ್1 ನೌಕೆಯು ಸೆಪ್ಟೆಂಬರ್​ 2ರಂದು ಲಾಗ್ರಾಂಜಿಯನ್ ಪಾಯಿಂಟ್ (ಎಲ್ 1) ತಲುಪಲಿದೆ.

solar-mission-aditya-l1-will-reach-its-destination-on-jan-6

author img

By PTI

Published : Dec 23, 2023, 12:44 PM IST

ನವದೆಹಲಿ: ಸೂರ್ಯನ ಕುರಿತು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಕಾಶ ಆಧಾರಿತ ಯೋಜನೆಯ ನೌಕೆ ಆದಿತ್ಯ ಎಲ್ 1 ಜನವರಿ 6 ರಂದು ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಾಗ್ರಾಂಜಿಯನ್ ಪಾಯಿಂಟ್ (ಎಲ್ 1) ತಲುಪಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್​ ಸೋಮನಾಥ್​ ತಿಳಿಸಿದ್ದಾರೆ

ಸೂರ್ಯನ ಸಮಗ್ರ ಅಧ್ಯಯನಕ್ಕೆ ಇಸ್ರೋ ಆದಿತ್ಯ ಎಲ್1 ನೌಕೆಯನ್ನು ಸೆಪ್ಟೆಂಬರ್​ 2ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಿತ್ತು. ಆದಿತ್ಯ-ಎಲ್​1 ಜನವರಿ 6ರಂದು ಎಲ್​1 ಪಾಯಿಂಟ್​​ ಪ್ರವೇಶಿಸಲಿದೆ. ಅದರ ಕುರಿತಂತೆ ನಿಖರ ಸಮಯವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳದಲ್ಲಿ ಈ ಕುರಿತು ಮಾಹಿತಿ ನೀಡಿದರು.

ನೌಕೆ ಎಲ್​1 ಬಿಂದು ತಲುಪುತ್ತಿದ್ದಂತೆ ನಾವು ಮತ್ತೊಮ್ಮೆ ಇಂಜಿನ್​ ಅನ್ನು ಹೊತ್ತಿಸುತ್ತೇವೆ. ಮತ್ತೆ ಅದು ಎಲ್ಲಿಗೂ ಹೋಗಬಾರದೆಂದು ಹೀಗೆ ಮಾಡಲಾಗುತ್ತದೆ. ಇದು ಬಿಂದುವಿನ ಸ್ಥಾನಕ್ಕೆ ಹೋಗಲಿದ್ದು, ಒಮ್ಮೆ ಇದು ನಿರ್ದಿಷ್ಟ ಬಿಂದುವಿನ ಸ್ಥಳಕ್ಕೆ ತಲುಪಿದರೆ, ಅದರ ಸುತ್ತ ನೌಕೆಯು ಸುತ್ತಲಿದೆ ಎಂದರು.

ಆದಿತ್ಯ ಎಲ್​1 ತನ್ನ ನಿಗದಿತ ಸ್ಥಾನವನ್ನು ಒಮ್ಮೆ ತಲುಪಿದರೆ, ಮುಂದಿನ ಐದು ವರ್ಷ ಸೂರ್ಯನಲ್ಲಿ ಏನೆಲ್ಲಾ ಘಟನೆಗಳು ನಡೆಯಲಿದೆ ಎಂದು ಮಾಪನ ಮಾಡಲು ಸಹಾಯವಾಗಲಿದೆ. ನಿಗದಿತ ಸ್ಥಳಕ್ಕೆ ತಲುಪಿದರೆ, ಮುಂದಿನ ಐದು ವರ್ಷ ಅಲ್ಲಿಯೇ ಸ್ಥಿರವಾಗಿ ಇರಲಿದೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ, ಜಗತ್ತಿಗೆ ಬೇಕಾದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲಿದೆ. ಈ ದತ್ತಾಂಶವೂ ಸೂರ್ಯನ ಡೈನಾಮಿಕ್ಸ್​ ಮತ್ತು ಅದು ನಮ್ಮ ಜೀವನದ ಮೇಲೆ ಬೀರುವ ಪರಿಣಾಮ ಅರಿಯಲು ಸಹಕಾರಿಯಾಗಲಿದೆ. ಈ ಮೂಲಕ ಭಾರತವು ಹೇಗೆ ತಾಂತ್ರಿಕವಾಗಿ ಶಕ್ತಿಶಾಲಿಯಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ಇದೇ ವೇಳೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅಮೃತ ಕಾಲದ ಸಮಯದಲ್ಲಿ 'ಭಾರತೀಯ ಬಾಹ್ಯಾಕಾಶ ನಿಲ್ದಾಣ' ನಿರ್ಮಿಸಲು ಇಸ್ರೋ ಯೋಜನೆ ರೂಪಿಸಿದೆ. ಭಾರತವು ಎಲ್ಲದರಲ್ಲೂ ನಾಯಕನಾಗಲು ಸಾಧ್ಯವಿಲ್ಲ. ಆದರೆ, ಸಾಧ್ಯವಿರುವ ಕ್ಷೇತ್ರಗಳ ಮೇಲೆ ನಾವು ಗಮನಹರಿಸಬೇಕು ಎಂದರು.

ಇದನ್ನೂ ಓದಿ: ಪೂರ್ಣ ಸೂರ್ಯನ ಮೊದಲ ಚಿತ್ರ ಸೆರೆಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್​-1 ನೌಕೆ: ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.