ETV Bharat / science-and-technology

ಕಾಳ್ಗಿಚ್ಚಿನ ಹೊಗೆ ಓಝೋನ್ ಪದರವನ್ನು ನಾಶಪಡಿಸುತ್ತದೆ: ಸಂಶೋಧನೆ

author img

By

Published : Mar 18, 2022, 5:33 PM IST

ಕೆನಡಾದ ವಾಟರ್​ಲೂ ವಿಶ್ವವಿದ್ಯಾಲಯದ ಸಂಶೋಧಕರು ಕೆನಡಿಯನ್ ಸ್ಪೇಸ್ ಏಜೆನ್ಸಿಯ ಅಟ್ಮಾಸ್ಪರಿಕ್ ಕೆಮಿಸ್ಟ್ರಿ ಎಕ್ಸ್​ಪೆರಿಮೆಂಟ್​ ಉಪಗ್ರಹವನ್ನು ಬಳಸಿ ನಡೆಸಿದ ಸಂಶೋಧನೆಯಲ್ಲಿ ಕಾಳ್ಗಿಚ್ಚು ಕೂಡಾ ಓಝೋನ್ ಪದರದ ನಾಶಕ್ಕೆ ಕಾರಣವಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ.

Smoke from wildfires destroys Ozone layer, reveals study
ಕಾಳ್ಗಿಚ್ಚಿನ ಹೊಗೆ ಓಝೋನ್ ಪದರನ್ನು ನಾಶಪಡಿಸುತ್ತದೆ: ಸಂಶೋಧನೆ

ವಾಟರ್​ಲೂ(ಕೆನಡಾ): ಸೂರ್ಯನ ಅತಿನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರವನ್ನು ಕ್ಲೋರೋಫ್ಲೋರೋ ಕಾರ್ಬನ್ ಅನಿಲ ನಾಶಗೊಳಿಸುತ್ತದೆ ಎಂದು ಇತ್ತೀಚಿನವರೆಗೆ ನಂಬಲಾಗಿದ್ದು, ಈಗ ಕೆನಡಾದ ವಾಟರ್​ಲೂ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೊಸ ವಿಚಾರವನ್ನು ಬಹಿರಂಗಪಡಿಸಿದೆ. ಕಾಳ್ಗಿಚ್ಚು ಕೂಡಾ ಓಝೋನ್ ಪದರದ ನಾಶಕ್ಕೆ ಕಾರಣವಾಗುತ್ತದೆ ಎಂದು ಈ ಅಧ್ಯಯ ವರದಿ ಬಹಿರಂಗಪಡಿಸಿದೆ.

ವಿಶ್ವವಿದ್ಯಾಲಯದ ಸಂಶೋಧನಾ ವರದಿ 'ಸೈನ್ಸ್' ಎಂಬ ಜರ್ನಲ್​ನಲ್ಲಿ ಪ್ರಕಟವಾಗಿದ್ದು, ಬೃಹತ್​ ಪ್ರಮಾಣದಲ್ಲಿ ಆಗಾಗ ಸಂಭವಿಸುವ ಕಾಳ್ಗಿಚ್ಚು ಹವಾಮಾನ ಬದಲಾವಣೆ ಮತ್ತು ಓಝೋನ್ ಪದರದ ನಾಶಕ್ಕೂ ಕಾರಣವಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅಧ್ಯಯನ ನಡೆಸಲು ಸಂಶೋಧಕರು ಕೆನಡಿಯನ್ ಸ್ಪೇಸ್ ಏಜೆನ್ಸಿಯ ಅಟ್ಮಾಸ್ಪರಿಕ್ ಕೆಮಿಸ್ಟ್ರಿ ಎಕ್ಸ್​ಪೆರಿಮೆಂಟ್​(ಎಸಿಇ) ಉಪಗ್ರಹವನ್ನು ಉಪಯೋಗಿಸಿದ್ದಾರೆ. ಈ ಉಪಗ್ರಹದ ಮೂಲಕ ಕಾಳ್ಗಿಚ್ಚಿನ ಹೊಗೆಯ ಕಣಗಳು ಓಝೋನ್ ಪದರವಿರುವ ಸ್ಟ್ರಾಟೋಸ್ಪಿಯರ್​ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧನೆ ನಡೆಸಲಾಗಿದೆ.

ಇದನ್ನೂ ಓದಿ: ಗಿಡಗಳು ಸೂರ್ಯನ ಬೆಳಕಿನೆಡೆ ತಂತಾನೆ ಚಲಿಸುವ ಸಾಧನ: ಜವಾಹರ್‌ ನವೋದಯ ವಿದ್ಯಾರ್ಥಿನಿಯರ ಅನ್ವೇಷಣೆ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ವಾಯುಮಂಡಲಕ್ಕೆ ಆಮ್ಲೀಯ ಹೊಗೆ ಕಣಗಳನ್ನು ಸೇರಿಸಿದೆ. ಈ ಹೊಗೆಯ ಕಣಗಳು ಓಝೋನ್ ಪದರಕ್ಕೆ ಹಾನಿ ಮಾಡುತ್ತವೆ ಎಂದು ವಾಟರ್​​ಲೂ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ಪ್ರಾಧ್ಯಾಪಕ ಮತ್ತು ಈ ಅಧ್ಯಯನದ ಪ್ರಮುಖ ಲೇಖಕ ಪೀಟರ್ ಬರ್ನಾಥ್ ಹೇಳಿದ್ದಾರೆ.

ಈ ಮೊದಲು ಧ್ರುವ ಪ್ರದೇಶಗಳಲ್ಲಿ ಕೆಲವೆಡೆ ಓಝೋನ್ ರಂಧ್ರಗಳು ಕಾಣಿಸಿಕೊಂಡಿದ್ದವು. ಅವುಗಳು ಕಾಲ ಕಳೆದಂತೆ ರಂಧ್ರಗಳು ಮರೆಯಾಗಿದ್ದವು. ಹಾಗೆಯೇ ಪ್ರಸ್ತುತ ಕಾಳ್ಗಿಚ್ಚಿನಿಂದ ಉಂಟಾದ ಓಝೋನ್ ಹಾನಿಯೂ ತಾತ್ಕಾಲಿಕವಾಗಿದೆ. ಆದರೆ, ಹೆಚ್ಚು ಕಾಳ್ಗಿಚ್ಚು ಸಂಭವಿಸಿದಂತೆಯೇ, ಓಝೋನ್ ವಿನಾಶವೂ ಹೆಚ್ಚಾಗುತ್ತದೆ ಎಂದು ಪೀಟರ್ ಬರ್ನಾಥ್ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.