ETV Bharat / science-and-technology

ಸ್ಕೈರೂಟ್ ಏರೋಸ್ಪೇಸ್: ಒಂದು ವರ್ಷದಲ್ಲಿ ವಿಕ್ರಮ್-1 ಪ್ರಾರಂಭಿಸಲು ಯೋಜನೆ

ಇತ್ತೀಚಿಗೆ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್ - ಎಸ್ ಯಶಸ್ವಿಯಾಗಿ ಉಡಾವಣೆ ಮಾಡಿದ ಸ್ಕೈರೂಟ್ ಏರೋಸ್ಪೇಸ್ ಕಂಪನಿಯು, ಮುಂದಿನ ವರ್ಷದೊಳಗೆ ಉಪಗ್ರಹಗಳನ್ನು ಕಕ್ಷೆಗೆ ಸಾಗಿಸುವ ಗುರಿ ಹೊಂದಿದೆ.

author img

By

Published : Nov 29, 2022, 5:39 PM IST

Skyroot Aerospace plans to launch Vikram-1 in one year
ಸ್ಕೈರೂಟ್ ಏರೋಸ್ಪೇಸ್: ಒಂದು ವರ್ಷದಲ್ಲಿ ವಿಕ್ರಮ್-1 ಪ್ರಾರಂಭಿಸಲು ಯೋಜನೆ

ಹೈದರಾಬಾದ್​(ತೆಲಂಗಾಣ): ಭಾರತದ ಸ್ಕೈರೂಟ್​ ಏರೋಸ್ಪೇಸ್​ ಕಂಪನಿಯು ಇತ್ತೀಚಿಗೆ ದೇಶದ ಮೊದಲ ಖಾಸಗಿ ರಾಕೆಟ್​ ವಿಕ್ರಮ್​-ಎಸ್​ ಉಡಾವಣೆ ಮಾಡಿದೆ, ಹಾಗೆಯೇ ಮುಂದಿನ ವರ್ಷದಲ್ಲಿ ಉಪಗ್ರಹಗಳನ್ನು ಹೊತ್ತುಕೊಂಡು ಹೋಗುವ ದೊಡ್ಡ ರಾಕೆಟ್​ ವಿಕ್ರಂ-1 ಉಡಾವಣೆ ಮಾಡಲು ಯೋಚಿಸಿದೆ. ಹೈದರಾಬಾದ್​ ಮೂಲದ ಬಾಹ್ಯಕಾಶ ಆರಂಭಿಕ ಕಂಪನಿಯು ಭವಿಷ್ಯದಲ್ಲಿ ಬಾಹ್ಯಕಾಶ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

"ಮೊದಲು ನಾವು ವಿಕ್ರಮ್​-ಎಸ್​ ರಾಕೆಟ್​ ಉಡಾವಣೆ ಮಾದಿದ್ದೇವೆ, ನಮ್ಮ ಮುಂದಿನ ಯೋಜನೆ ಉಪಗ್ರಹವನ್ನು ಕಕ್ಷೆಗೆ ಸಾಗಿಸುವ ದೊಡ್ಡ ರಾಕೆಟ್​ ಆದ ವಿಕ್ರಮ್​-1 ಈಗಿನಿಂದ ಒಂದು ವರ್ಷದೊಳಗೆ ಸಿದ್ದಪಡಿಸುವ ಯೋಜನೆ ಹೊಂದಿದ್ದೇವೆ" ಎಂದು ಸ್ಕೈರೂಟ್​ ಏರೋಸ್ಪೇಸ್​ ಸಹ-ಸಂಸ್ಥಾಪಕ ಪವನ್​ ಚಂದನಾ ತಿಳಿಸಿದರು.

ಅತಿ ಹೆಚ್ಚು ಬಂಡವಾಳ ಸಂಗ್ರಹ: ಸ್ಕೈರೂಟ್​ ಕಂಪನಿಯು ವಿಶ್ವದಲ್ಲೆ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಕೆಲವು ಕಂಪನಿಗಳಲ್ಲಿ ಒಂದಾಗಿದೆ. ಸಂಸ್ಥೆಯು ಸುಮಾರು 68ಮಿಲಿಯನ್​ ಡಾಲರ್​ ಬಂಡವಾಳವನ್ನು ಸಂಗ್ರಹಿಸಿದೆ. ಇದು ಭಾರತದ ಸ್ಟಾರ್ಟ್ಅಪ್​ ಇತಿಹಾಸದಲ್ಲೇ ಅತಿ ಹೆಚ್ಚು ಬಂಡವಾಳ ಹೊಂದಿದ ಕಂಪನಿ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಕೈರೂಟ್​ ತನ್ನ ಮುಂದಿನ ಪ್ರಯಾಣಕ್ಕೆ ಹೆಚ್ಚಿನ ಬಂಡವಾಳವನ್ನು ಸಂಗ್ರಹಿಸಲು ಮುಂದಾಗುತ್ತಿದೆ ಏಕೆಂದರೆ ಬಾಹ್ಯಕಾಶ ಪ್ರಯಾಣ ಬಹಳ ದುಬಾರಿ, ಸಂಸ್ಥೆಯು ವೆಚ್ಚವನ್ನು ಸಹ ಕಡಿತ ಗೊಳಿಸಲು ಮುಂದಾಗಿದೆ, ಬಾಹ್ಯಕಾಶ ಪ್ರಯಾಣ ಅಷ್ಟೋಂದು ವಿಶ್ವಾಸಕರವಲ್ಲ, ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದೂ ತಮ್ಮ ಮುಂದಿನ ಯೋಜನೆ ಬಗ್ಗೆ ಚಂದನಾ ಮಾಹಿತಿ ಬಿಚ್ಚಿಟ್ಟರು.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಓರಿಜಿನ್​(Blue origin) ಸಂಸ್ಥೆಯು ಬಾಹ್ಯಕಾಶ ಪ್ರಯಾಣವನ್ನು ಆರಂಭಿಸಿದೆ. ಈ ತರಹದ ಸೇವೆಯು ಭಾರತದಲ್ಲಿ ಆರಂಬಿಸಲು ಕನಿಷ್ಠ 10ವರ್ಷ ಸಮಯ ತೆಗದುಕೊಳ್ಳಬಹುದು ಎಂದೂ ಅವರು ಇದೇ ವೇಳೆ ಅಭಿಪ್ರಾಯಪಟ್ಟರು. ಭಾರತದ ಮೊಟ್ಟ ಮೊದಲ ಖಾಸಗಿ ನಿರ್ಮಿತ ರಾಕೆಟ್​ನ್ನು ನವೆಂಬರ್​ 18ರಂದು ಯಶಸ್ವಿಯಾಗಿ ಉಡಾವಣೆ ಮಾಡಿತು, ಇದನ್ನು ಅಭಿವೃದ್ಧಿ ಪಡಿಸಲು ಸ್ಕೈರೂಟ್​ ಕಂಪನಿಯು ನಾಲ್ಕು ವರ್ಷ ಸಮಯ ತೆಗೆದುಕೊಂಡಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ರೇಸಿಂಗ್ ಕಾರು ತಯಾರಿಸಿದ ಮದ್ರಾಸ್ ಐಐಟಿ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.