ಸಿಯೋಲ್, ದಕ್ಷಿಣ ಕೊರಿಯಾ : ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಹೊಸ ಮೆಟ್ರೋ ರೈಲುಗಳನ್ನು ಮುಂದಿನ ತಿಂಗಳಿಂದ ಅಲ್ಲಿನ ಸರ್ಕಾರ ಪರಿಚಯಿಸಲಿದೆ. ಈ ರೈಲುಗಳ ಮೂಲಕ ಜನರ ಮೇಲಿನ ಕಾಳಜಿಯನ್ನು ಅಲ್ಲಿನ ಸರ್ಕಾರ ಪ್ರದರ್ಶಿಸಿದೆ.
ಹೊಸ ರೈಲುಗಳಲ್ಲಿ ಗರ್ಭಿಣಿಯರಿಗಾಗಿಯೇ ಹೊಸ ವಿನ್ಯಾಸದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮೊಬೈಲ್ ಚಾರ್ಜಿಂಗ್ಗೆ ಪೋರ್ಟ್‌ಗಳನ್ನು ಕೂಡ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ 5 ಮೆಟ್ರೋ ರೈಲುಗಳನ್ನು ಪರಿಚಯಿಸಲಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ 20ಕ್ಕೂ ಹೆಚ್ಚು ರೈಲುಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿದೆ.
ಇದನ್ನೂ ಓದಿ: ಚೀನಾದ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ 'ನರಮೇಧದ ಕ್ರೀಡಾಕೂಟ'
ಸಿಯೋಲ್ನಲ್ಲಿ ಸಂಚಾರ ಮಾಡಲಿರುವ ಈ ಮೆಟ್ರೋ ರೈಲುಗಳು ಕಡಿಮೆ ಗದ್ದಲವನ್ನು ಹೊಂದಿರುತ್ತವೆ. ಇದರ ಜೊತೆಗೆ ವೈಯರ್ಲೆಸ್ ಚಾರ್ಚಿಂಗ್ ವ್ಯವಸ್ಥೆ ಹೊಂದಿರುತ್ತವೆ. ಅಂದಹಾಗೆ, ಇದೇ ಮೊದಲ ಬಾರಿಗೆ ಮೆಟ್ರೋದಲ್ಲಿ ವೈಯರ್ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಒಂದು ಬೋಗಿಯಲ್ಲಿ ಒಟ್ಟು 2 ಚಾರ್ಜಿಂಗ್ಗಳನ್ನು ಹಾಕಲಾಗುತ್ತದೆ. ಅಂದ್ರೇ ಒಂದು ರೈಲು 4 ಬೋಗಿಗಳನ್ನು ಹೊಂದಿದ್ದು, 8 ಚಾರ್ಜಿಂಗ್ ವ್ಯವಸ್ಥೆಗಳಿರುತ್ತವೆ. ಅಂದಹಾಗೆ, 2014ರಲ್ಲಿ ಸಿಯೋಲ್ನಲ್ಲಿ ರೈಲು ವ್ಯವಸ್ಥೆಗೆ ಬದಲಿಯಾಗಿ ಮೆಟ್ರೋ ಸೇವೆ ಅನುಷ್ಠಾನಗೊಳಿಸಲಾಗಿತ್ತು.