ETV Bharat / science-and-technology

ಮಾನವನನ್ನೇ ಮೀರಿಸಲಿದೆ ಕೃತಕ ಬುದ್ಧಿಮತ್ತೆ: ವಿಜ್ಞಾನಿಗಳ ಎಚ್ಚರಿಕೆ - ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್

OpenAI ನ ಚಾಟ್ ಬಾಟ್ ಆಗಿರುವ ಚಾಟ್​ಜಿಪಿಟಿಯನ್ನು ಇದೇ ವೇಗದಲ್ಲಿ ಬೆಳೆಯಲು ಬಿಟ್ಟರೆ ಅದು ಮುಂದೊಂದು ದಿನ ಮನುಷ್ಯರ ಬುದ್ಧಿವಂತಿಕೆಯನ್ನು ಮೀರಿಸಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Scientists claim AI to overtake humans soon

author img

By

Published : Apr 7, 2023, 1:20 PM IST

ವಾಷಿಂಗ್ಟನ್ (ಯುಎಸ್​): OpenAI ತಯಾರಿಸಿರುವ ಚಾಟ್​ಜಿಪಿಟಿ ಚಾಟ್​ಬಾಟ್​ ಮುಂದಿನ ದಿನಗಳಲ್ಲಿ ಮನುಷ್ಯರ ಬುದ್ಧಿವಂತಿಕೆಯನ್ನು ಮೀರಿ ಬೆಳೆಯಲಿವೆ ಎಂದು ವರದಿಗಳು ತಿಳಿಸಿವೆ. ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಆಗಿರುವ ಚಾಟ್​ಜಿಪಿಟಿ ಅಗಾಧ ಪ್ರಮಾಣದ ಡೇಟಾವನ್ನು ತನ್ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು, ಅದನ್ನು ವಿಶ್ಲೇಷಿಸಬಹುದು ಮತ್ತು ನಂತರ GPT-4 ಭಾಷಾ ಸಂಸ್ಕರಣಾ ಮಾದರಿಯ ಆಧಾರದ ಮೇಲೆ ಕಂಟೆಂಟ್​ ಅನ್ನು ರಚಿಸಬಹುದು. ಅಷ್ಟೇ ಅಲ್ಲದೆ ಅದಕ್ಕೆ ಯಾವುದೇ ಪ್ರಶ್ನೆ ಕೇಳಿದರೂ ಅದು ಉತ್ತರಿಸಬಲ್ಲದು. ಆದರೆ ಇದೆಲ್ಲವೂ ಈಗ ಆರಂಭವಾಗಿವೆ ಅಷ್ಟೆ. ಮುಂದಿನ ದಿನಗಳಲ್ಲಿ ಚಾಟ್​ಬಾಟ್​ನ ಕೃತಕ ಬುದ್ಧಿಮತ್ತೆಯನ್ನು ಹೀಗೆಯೇ ಬೆಳೆಯಲು ಬಿಟ್ಟರೆ ಮಾನವ ಕುಲಕ್ಕೆ ಕಂಟಕವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಚಾಟ್​ಬಾಟ್​ ಮಾನವನನ್ನು ಮೀರಿ ಬೆಳೆಯುವ ವಿಷಯವನ್ನು ಹೊರತುಪಡಿಸಿ ನೋಡಿದರೆ, AI ಚಾಟ್‌ಬಾಟ್ ನಿಜವಾಗಿಯೂ ಪ್ರಯೋಜನಕಾರಿ ಸಾಧನವಾಗಿದ್ದು ಅದು ಮಾನವರ ಕೆಲಸದಲ್ಲಿನ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು. ಇದು ಅಂತರ್ಜಾಲದಲ್ಲಿನ ಮಾಹಿತಿಯನ್ನು ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಪಡೆದುಕೊಳ್ಳುವ ನೇರ ಮೂಲವಾಗಿ ಕಾರ್ಯನಿರ್ವಹಿಸಬಹುದು. ಇದರಿಂದ ಬಳಕೆದಾರರು ಸುಖಾಸುಮ್ಮನೆ ಹುಡುಕಾಟದಲ್ಲಿ ಕಾಲ ಕಳೆಯದೇ ತಮಗೆ ಬೇಕಾದ ಮಾಹಿತಿಯನ್ನು ತಕ್ಷಣವೇ ಪಡೆಯಬಹುದು.

ನಿರ್ದಿಷ್ಟ ಡೇಟಾ ಪಾಯಿಂಟ್‌ನಲ್ಲಿ ಬಳಕೆದಾರರಿಗೆ ಮಾಹಿತಿಯನ್ನು ಒದಗಿಸಲು ಇದು ಬೃಹತ್ ಪ್ರಮಾಣದ ಪಠ್ಯವನ್ನು ತಕ್ಷಣವೇ ಪರಿಶೀಲಿಸಬಹುದು. ಇತ್ತೀಚೆಗೆ ನಾಯಿಯೊಂದಕ್ಕೆ ಯಾವ ಕಾಯಿಲೆಯಾಗಿದೆ ಎಂಬುದನ್ನು ಗುರುತಿಸಲು ಚಾಟ್​ಜಿಪಿಟಿ ಸಹಾಯ ಮಾಡಿತ್ತು ಹಾಗೂ ಆ ಮೂಲಕ ನಾಯಿಯ ಜೀವ ಉಳಿಸಿತ್ತು. ಇದನ್ನು ನೋಡಿ ಪಶುವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ.

ಏನಿದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​?: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಕಂಪ್ಯೂಟರ್, ಕಂಪ್ಯೂಟರ್-ನಿಯಂತ್ರಿತ ರೋಬೋಟ್ ಅಥವಾ ಸಾಫ್ಟ್‌ವೇರ್ ಅನ್ನು ಮಾನವನ ಮನಸ್ಸಿನಂತೆ ಬುದ್ಧಿವಂತಿಕೆಯಿಂದ ಯೋಚಿಸುವಂತೆ ಮಾಡುವ ವಿಧಾನವಾಗಿದೆ. ಮಾನವ ಮೆದುಳಿನ ಮಾದರಿಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು ಅರಿವಿನ ಪ್ರಕ್ರಿಯೆಯನ್ನು ವಿಶ್ಲೇಷಿಸುವ ಮೂಲಕ AI ಅನ್ನು ಸಾಧಿಸಲಾಗುತ್ತದೆ. ಈ ಅಧ್ಯಯನಗಳ ಫಲಿತಾಂಶವು ಬುದ್ಧಿವಂತ ಸಾಫ್ಟ್‌ವೇರ್ ಮತ್ತು ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುತ್ತದೆ.

ChatGPT ಎಂಬುದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ AI ಸಂಶೋಧನಾ ಕಂಪನಿ OpenAI ನಿಂದ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿವಂತಿಕೆಯ ಚಾಟ್‌ಬಾಟ್ ಆಗಿದೆ. idu ನವೆಂಬರ್ 2022 ರಲ್ಲಿ ಬಿಡುಗಡೆಯಾಯಿತು. ಇದು ಇತಿಹಾಸದಿಂದ ತತ್ತ್ವಶಾಸ್ತ್ರದ ವಿಷಯಗಳ ಕುರಿತು ಸಂಭಾಷಣೆಗಳನ್ನು ನಡೆಸಬಹುದು. ಹೆಸರಾಂತ ಸಾಹಿತಿಗಳ ಶೈಲಿಯಲ್ಲಿ ಸಾಹಿತ್ಯವನ್ನು ರಚಿಸಬಹುದು ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೋಡ್‌ಗೆ ಎಡಿಟಿಂಗ್ ಮಾಡಬಹುದು.

ಚಾಟ್‌ಜಿಪಿಟಿಗೆ ಆಧಾರವಾಗಿರುವ ತಂತ್ರಜ್ಞಾನವು ಅದರ ಹೆಸರಿನಲ್ಲಿಯೇ ಇದೆ. ಅದೇ ಜಿಪಿಟಿ. ಇದು ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಟ್ರಾನ್ಸ್‌ಫಾರ್ಮರ್‌ಗಳು ಡೇಟಾದ ಅನುಕ್ರಮಗಳಲ್ಲಿ ದೀರ್ಘ ಶ್ರೇಣಿಯ ನಮೂನೆಗಳನ್ನು ಕಂಡುಹಿಡಿಯಲು ವಿಶೇಷ ಕ್ರಮಾವಳಿಗಳಾಗಿವೆ. ಟ್ರಾನ್ಸಫಾರ್ಮರ್ ಒಂದು ವಾಕ್ಯದಲ್ಲಿ ಮುಂದಿನ ಪದವನ್ನು ಮಾತ್ರವಲ್ಲದೆ ಒಂದು ಪ್ಯಾರಾಗ್ರಾಫ್​​ನಲ್ಲಿನ ಮುಂದಿನ ವಾಕ್ಯ ಮತ್ತು ಪ್ರಬಂಧದಲ್ಲಿ ಮುಂದಿನ ಪ್ಯಾರಾಗ್ರಾಫ್ ಅನ್ನು ಊಹಿಸಲು ಕಲಿಯುತ್ತದೆ.

ಇದನ್ನೂ ಓದಿ : ಜಾಗತಿಕ ಆರ್ಥಿಕ ಬೆಳವಣಿಗೆ 3 ದಶಕಗಳಲ್ಲೇ ಕನಿಷ್ಠ: ಭಾರತ. ಚೀನಾ ವಿಶ್ವಕ್ಕೆ ಆಶಾಕಿರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.