ETV Bharat / science-and-technology

ಕೋವಿಡ್​​ ಮಾನವ ನಿರ್ಮಿತ ವೈರಸ್: ಅಮೆರಿಕ ​ಮೂಲದ ವಿಜ್ಞಾನಿ ಹೇಳಿಕೆ

ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಆಶ್ಚರ್ಯಕರವಾದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅವರು ಕೋವಿಡ್​-19 "ಮಾನವ ನಿರ್ಮಿತ ವೈರಸ್" ಎಂದು ಹೇಳಿದ್ದಾರೆ.

ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯ
ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯ
author img

By

Published : Dec 5, 2022, 3:47 PM IST

ನವದೆಹಲಿ: ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಆಶ್ಚರ್ಯಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್​​-19 "ಮಾನವ ನಿರ್ಮಿತ ವೈರಸ್" ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಅನುದಾನಿತ ಸಂಶೋಧನಾ ಸಂಸ್ಥೆಯಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ ಕೋವಿಡ್​ ಎಂಬ ವೈರಸ್​ ಹೊರ ಬಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. ಬ್ರಿಟಿಷ್ ಪತ್ರಿಕೆ ದಿ ಸನ್‌ನಲ್ಲಿ ಅಮೆರಿಕ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೇಳಿಕೆ ಉಲ್ಲೇಖಿಸಿ ಈ ಕುರಿತು ಸುದ್ದಿ ಮಾಡಲಾಗಿತ್ತು.

ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯ
ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯ

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ "ದಿ ಟ್ರೂತ್ ಅಬೌಟ್ ವುಹಾನ್" ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. ಚೀನಾದಲ್ಲಿ ಅಧ್ಯಯನಕ್ಕೆ ಅಮರಿಕ ಸರ್ಕಾರವು ಧನಸಹಾಯ ಮಾಡಿತ್ತು ಎಂಬ ಅಂಶವನ್ನು ಈ ಪುಸ್ತಕಕದಲ್ಲಿ ಉಲ್ಲೇಖಿಸಲಾಗಿದೆ. ಇಂಗ್ಲೆಂಡ್​ ಮೂಲದ ಟ್ಯಾಬ್ಲಾಯ್ಡ್ ದಿ ಸನ್‌ನಲ್ಲಿ ಹಫ್‌ ಪುಸ್ತಕದ ಆಯ್ದ ಭಾಗಗಳನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ 11% ಕೋವಿಡ್ ಸೋಂಕಿತರಿಗೆ ಶ್ವಾಸಕೋಶದ ಸಮಸ್ಯೆ

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭ ರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಕೆಲಸಗಾರರು ವೈರಸ್ ಈ ಲ್ಯಾಬ್​ನಲ್ಲಿಯೇ ಹುಟ್ಟಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.