ವಾಷಿಂಗ್ಟನ್: ಸ್ಪರ್ಧೆಯನ್ನು ನಿಗ್ರಹಿಸಲು ಮತ್ತು ಗ್ರಾಹಕರಿಗೆ ಹಾನಿ ಮಾಡಲು ಗೂಗಲ್ ಆನ್‌ಲೈನ್ ಹುಡುಕಾಟದಲ್ಲಿ ತನ್ನ ಆನ್‌ಲೈನ್ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ನ್ಯಾಯಾಂಗ ಇಲಾಖೆ ಮೊಕದ್ದಮೆ ಹೂಡಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ಇಲಾಖೆ ಮತ್ತು ಫೆಡರಲ್ ಟ್ರೇಡ್ ಕಮಿಷನ್ ಎರಡರಲ್ಲೂ ಆ್ಯಪಲ್, ಅಮೆಜಾನ್ ಮತ್ತು ಫೇಸ್‌ಬುಕ್ ಸೇರಿದಂತೆ ಪ್ರಮುಖ ಟೆಕ್ ಕಂಪನಿಗಳ ತನಿಖೆ ನಡೆಯುತ್ತಿರುವಾಗಲೇ, ಈ ಮೊಕದ್ದಮೆ ಹೂಡಲಾಗುತ್ತಿದೆ.
ಗೂಗಲ್ ಆನ್‌ಲೈನ್ ಹುಡುಕಾಟ ಮತ್ತು ಜಾಹೀರಾತಿನಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಮತ್ತು ಸ್ಪರ್ಧೆಯನ್ನು ನಿಗ್ರಹಿಸಲು ಹಾಗೂ ಅದರ ಲಾಭ ಹೆಚ್ಚಿಸಲು ಪ್ರಾಬಲ್ಯವನ್ನು ಬಳಸಿದೆ ಎಂದು ಆರೋಪಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಯುರೋಪಿಯನ್ ನಿಯಂತ್ರಕರು ವಿಧಿಸಿರುವ ಕಡ್ಡಾಯ ಬದಲಾವಣೆಗಳನ್ನು ಗೂಗಲ್ ಸರಿಯಾಗಿ ನಿರ್ವಹಿಸಿಲ್ಲ ಮತ್ತು ರಚನಾತ್ಮಕ ಬದಲಾವಣೆಗಳ ಅಗತ್ಯವಿದೆ ಎಂದು ವಿಮರ್ಶಕರು ವಾದಿಸುತ್ತಾರೆ.