ETV Bharat / science-and-technology

ಕ್ಷುದ್ರಗ್ರಹ ಸಿರಿಸ್​ನಲ್ಲಿ ಅಪಾರ ನೀರಿನ ಮೂಲ ಪತ್ತೆ: ನಾಸಾ ಸಂಶೋಧನೆ - ಜೆಟ್​ ಪ್ರೊಪಲ್ಷನ್ ಲ್ಯಾಬೊರೇಟರಿ

ಗುರು ಗ್ರಹ ಹಾಗೂ ಮಂಗಳ ಗ್ರಹಗಳ ನಡುವೆ ಇರುವ ಕ್ಷುದ್ರಗ್ರಹಗಳಲ್ಲೊಂದಾಗಿರುವ ಸಿರಿಸ್​ನಲ್ಲಿ ಅಪಾರ ನೀರಿನ ಸಂಪನ್ಮೂಲವಿದೆ ಎಂದು ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ceres dwarf planet
ಸಿರಿಸ್ ಕ್ಷುದ್ರಗ್ರಹ
author img

By

Published : Aug 16, 2020, 3:03 PM IST

Updated : Feb 16, 2021, 7:31 PM IST

ವಾಷಿಂಗ್ಟನ್​ : ಗುರು ಮತ್ತು ಮಂಗಳ ಗ್ರಹಗಳ ಮಧ್ಯೆ ಇರುವ ಕ್ಷುದ್ರಗ್ರಹ ಸಿರಿಸ್​ನಲ್ಲಿ ಈವರೆಗೆ ಈ ಕ್ಷುದ್ರಗ್ರಹದಲ್ಲಿ ಕಲ್ಲುಬಂಡೆಗಳಿವೆ ಎಂದು ನಂಬಲಾಗಿದ್ದು, ಅಪಾರ ಜಲಸಂಪತ್ತು ಇದೆ ಎಂದು ನಾಸಾದ ಡಾನ್​ ಆಕಾಶನೌಕೆಯ ಸಂಶೋಧನೆಯಿಂದ ತಿಳಿದುಬಂದಿದೆ.

ಡಾನ್​ ಆಕಾಶನೌಕೆ ಕಳುಹಿಸಿದ ಛಾಯಾಚಿತ್ರಗಳನ್ನು ವಿಜ್ಞಾನಿಗಳು ಪರಿಶೀಲನೆ ನಡೆಸಿದಾಗ ಕ್ಷುದ್ರಗ್ರಹದ 40 ಕಿಲೋಮೀಟರ್ ಆಳ ಹಾಗೂ ನೂರಾರು ಕಿಲೋಮೀಟರ್ ಅಗಲವಿರುವ ಉಪ್ಪು ನೀರಿನ ಜಲಮೂಲ ಇದ್ದಿರಬಹುದೆಂದು ಊಹಿಸಿದ್ದಾರೆ.

ನಾವು ಭಾವಿಸಿದ್ದಕ್ಕಿಂತ ಹೆಚ್ಚಿನ ಫಲಿತಾಂಶಗಳನ್ನು ಡಾನ್​ ಆಕಾಶ ನೌಕೆ ನೀಡಿದೆ. ಭೂಮಿಯಿಂದ ಹೊರಗಡೆಯ ಸಂಶೋಧನೆಯ ವಿಚಾರದಲ್ಲಿ ಮಹತ್ತರವಾದುದನ್ನು ಡಾನ್​ ಸಾಧಿಸಿದೆ. ಅಂತರಗ್ರಹ ಸಂಶೋಧನೆಯಲ್ಲಿ ಇದೊಂದು ಮೈಲುಗಲ್ಲು ಎಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್​ ಪ್ರೊಪಲ್ಷನ್ ಲ್ಯಾಬೊರೇಟರಿಯ ಮಿಷನ್ ಡೈರೆಕ್ಟರ್ ಮಾರ್ಕ್​ ರೇಮನ್ ​ಹೇಳಿದ್ದಾರೆ.

ಕ್ಷುದ್ರಗ್ರಹಗಳ ಒಟ್ಟು ಗಾತ್ರದ ಮೂರನೇ ಒಂದು ಭಾಗದಷ್ಟು ಭಾಗವನ್ನು ಸಿರಿಸ್ ಹೊಂದಿದೆ. ಭೂಮಿಯ ಚಂದ್ರನಿಗಿಂತ ಇದು ಚಿಕ್ಕದಾಗಿದ್ದು, 2015ರಲ್ಲಿ ಡಾನ್​ ಆಕಾಶನೌಕೆ ಇಲ್ಲಿಗೆ ಕಾಲಿಟ್ಟಿತ್ತು. ಕೆಲವು ವರ್ಷಗಳ ಹಿಂದೆ ಈ ಕ್ಷುದ್ರಗ್ರಹದ ಕೆಲವು ಭಾಗದಲ್ಲಿ ಪ್ರಕಾಶಮಾನವಾದ ಭೂಭಾಗವನ್ನು ವಿಜ್ಞಾನಿಗಳು ಗಮನಿಸಿದ್ದರು.

ಅಕ್ಟೋಬರ್ 2018ರಲ್ಲಿ ಕೆಲವೊಂದು ಕೆಲವು ಪ್ರಮುಖ ಮಾಹಿತಿಗಳನ್ನು ಡಾನ್​ ರವಾನಿಸಿದ್ದು, ಪ್ರಕಾಶಮಾನವಾದ ಭೂಭಾಗಕ್ಕೆ ಅಲ್ಲಿರುವ ಸೋಡಿಯಂ ಕಾರ್ಬೋನೆಟ್​ ಕಾರಣವೆಂದು ವಿಜ್ಞಾನಿಗಳು ನಿರ್ಧರಿಸಿದ್ದರು.ಇದರಮ ಜೊತೆಗೆ 2 ಮಿಲಿಯನ್ ವರ್ಷಗಳ ಹಿಂದೆ ಈ ಸೋಡಿಯಂ ಕಾರ್ಬೋನೆಟ್​ ಭೂಭಾಗ ಸೃಷ್ಟಿಯಾಗಿರಬಹುದೆಂದು ವಿಜ್ಞಾನಿಗಳು ಅಂದಾಜಿಸಿದರು.

ಈಗ ಮತ್ತೆ ಕೆಲವು ಅಂಶಗಳು ಬಹಿರಂಗವಾಗಿದ್ದು, ನೀರಿನ ಮೂಲಗಳಿರುವ ಬಗ್ಗೆ ನೀಡಿದ್ದು, ಮತ್ತಷ್ಟು ಸಂಶೋಧನೆ ಮುಂದುವರೆದಿದೆ.

Last Updated : Feb 16, 2021, 7:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.