ಸ್ಯಾನ್ ಜೋಸ್ (ಕ್ಯಾಲಿಫೋರ್ನಿಯಾ) : ದಕ್ಷಿಣ ಕೊರಿಯಾದ ಪ್ರಸಿದ್ಧ ಟೆಕ್ ದೈತ್ಯ ಸ್ಯಾಮ್ಸಂಗ್ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ನಡೆದ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2024 ರಲ್ಲಿ ಜಾಗತಿಕವಾಗಿ ಹೊಸ ಸ್ಮಾರ್ಟ್ಫೋನ್ ಸರಣಿಯನ್ನು ಪರಿಚಯಿಸಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ, ಗ್ಯಾಲಕ್ಸಿ ಎಸ್ 24 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 24 ಎಂಬ ಮೂರು ಫೋನ್ಗಳನ್ನು ಕಂಪನಿ ಅನಾವರಣಗೊಳಿಸಿದೆ.
ಸ್ಯಾಮ್ಸಂಗ್ ನ ಹೊಸ ಎಸ್ 24 ಸರಣಿಯ ಬಗ್ಗೆ ಹೇಳುವುದಾದರೆ - ನೀವು 799.99 ಡಾಲರ್ನ ಗ್ಯಾಲಕ್ಸಿ ಎಸ್ 24, 999.99 ಡಾಲರ್ನ ಗ್ಯಾಲಕ್ಸಿ ಎಸ್ 24 ಪ್ಲಸ್ ಅಥವಾ 1,299.99 ಡಾಲರ್ ಬೆಲೆಯ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಹೀಗೆ ಯಾವುದೇ ಬೆಲೆಯ ಫೋನ್ ಕೊಂಡರೂ ಅವುಗಳ ಕಾರ್ಯಕ್ಷಮತೆ ಮಾತ್ರ ಒಂದೇ ರೀತಿಯಾಗಿರುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಎಲ್ಲಾ ಫೋನ್ಗಳು ಸ್ನ್ಯಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ಗಳನ್ನು ಹೊಂದಿರುವುದರಿಂದ ಆನ್-ಡಿವೈಸ್ ಎಐ ಕಾರ್ಯಗಳ ಕಾರ್ಯಕ್ಷಮತೆ ಒಂದೇ ರೀತಿ ಇರಲಿದೆ.
ಸ್ಯಾಮ್ಸಂಗ್ ಈ ಎಲ್ಲ ಮೂರು ಫೋನ್ಗಳಿಗೆ ಏಳು ಜನರೇಷನ್ವರೆಗೆ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು ಏಳು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಸ್ ನೀಡುವುದಾಗಿ ಭರವಸೆ ನೀಡಿದೆ. ಇದು ಗೂಗಲ್ ತನ್ನ ಪಿಕ್ಸೆಲ್ 8 ಶ್ರೇಣಿಯ ಫೋನ್ಗಳಿಗೆ ನೀಡುವ ಸಪೋರ್ಟ್ ಮಟ್ಟಕ್ಕೆ ಸಮನಾಗಿದೆ. ಅಲ್ಟ್ರಾದ ಅತ್ಯಂತ ಗಮನಾರ್ಹವಾದ ಹೊಸ ವೈಶಿಷ್ಟ್ಯವೆಂದರೆ ಅದರ ನಿರ್ಮಾಣ. ಈ ವರ್ಷದ ಮಾದರಿಯು ಆಪಲ್ ನ ಐಫೋನ್ 15 ಪ್ರೊನಂತೆ ಟೈಟಾನಿಯಂ ಫ್ರೇಮ್ ಅನ್ನು ಹೊಂದಿದೆ. ಇದು ದೀರ್ಘಾವಧಿಯ ಬಾಳಿಕೆಯನ್ನು ನೀಡುತ್ತದೆ ಎಂದು ಸ್ಯಾಮ್ ಸಂಗ್ ಹೇಳಿಕೊಂಡಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ: ಗ್ಯಾಲಕ್ಸಿ ಎಸ್ 24 ಅಲ್ಟ್ರಾ 6.8-ಇಂಚಿನ ಕ್ಯೂಎಚ್ಡಿ+ ಡೈನಾಮಿಕ್ ಅಮೋಲೆಡ್ 2 ಎಕ್ಸ್ ಡಿಸ್ಪ್ಲೇಯನ್ನು 1-120 ಹೆರ್ಟ್ಜ್ ರಿಫ್ರೆಶ್ ರೇಟ್ನೊಂದಿಗೆ ಹೊಂದಿದೆ. ಗಮನಾರ್ಹವಾದ 2,600-ಎನ್ಐಟಿ ಗರಿಷ್ಠ ಪ್ರಕಾಶದೊಂದಿಗೆ ಹೊರಾಂಗಣ ಗೋಚರತೆ ಹೆಚ್ಚಿಸುವ ಹೊಸ ವಿಷನ್ ಬೂಸ್ಟರ್ ಇದರಲ್ಲಿದೆ. ಈ ಸಾಧನವು ತೆಳ್ಳಗಿನ ಬೆಜೆಲ್ಗಳು ಮತ್ತು ಟೈಟಾನಿಯಂ ಫ್ರೇಮ್ ಹೊಂದಿರುವ ಮೊದಲ ಗ್ಯಾಲಕ್ಸಿ ಫೋನ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ಫೋನ್ನ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಎಸ್ 24 ಅಲ್ಟ್ರಾದಲ್ಲಿನ ಕ್ಯಾಮೆರಾ ವ್ಯವಸ್ಥೆಯು ನಿಜವಾಗಿಯೂ ಪ್ರಭಾವಶಾಲಿಯಾಗಿದೆ. 200 ಎಂಪಿ ಮುಖ್ಯ ಕ್ಯಾಮೆರಾ, 12 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 10 ಎಂಪಿ 3 ಎಕ್ಸ್ ಟೆಲಿಫೋಟೋ ಕ್ಯಾಮೆರಾ ಇದರಲ್ಲಿವೆ. 5x ಜೂಮ್ ಹೊಂದಿರುವ ಹೊಸ 50 ಎಂಪಿ ಟೆಲಿಫೋಟೋ ಕ್ಯಾಮೆರಾ, ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ ತಂತ್ರಜ್ಞಾನ ಬೆರಗುಗೊಳಿಸುವಂತಿದೆ. ಆಪ್ಟಿಕಲ್ ಜೂಮ್ ಮಟ್ಟವನ್ನು 2x ನಿಂದ 10x ವರೆಗೆ ಬಳಸಬಹುದು. ಸ್ಟೋರೇಜ್ ಆಯ್ಕೆಗಳಲ್ಲಿ 256 ಜಿಬಿ, 512 ಜಿಬಿ ಅಥವಾ 1 ಟಿಬಿ ಸೇರಿವೆ. ಪ್ರತಿ ಮಾದರಿಯು 12 ಜಿಬಿ ರ್ಯಾಮ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಟೈಟಾನಿಯಂ ಗ್ರೇ, ಟೈಟಾನಿಯಂ ಬ್ಲ್ಯಾಕ್, ಟೈಟಾನಿಯಂ ವೈಲೆಟ್ ಮತ್ತು ಟೈಟಾನಿಯಂ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 24 ಪ್ಲಸ್: ಗ್ಯಾಲಕ್ಸಿ ಎಸ್ 24 ಪ್ಲಸ್ 6.7 ಇಂಚುಗಳ ಕ್ಯೂಎಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಇದು ಗ್ಯಾಲಕ್ಸಿ ಎಸ್ 24 ಅಲ್ಟ್ರಾದಲ್ಲಿರುವಂತೆಯೇ ಇದೆ. ಕ್ಯಾಮೆರಾ ವ್ಯವಸ್ಥೆಯು ಗ್ಯಾಲಕ್ಸಿ ಎಸ್ 24 ಅನ್ನು ಪ್ರತಿಬಿಂಬಿಸುತ್ತದೆ. 50 ಎಂಪಿ ಅಗಲ ಕ್ಯಾಮೆರಾ, 12 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3 ಎಕ್ಸ್ ಆಪ್ಟಿಕಲ್ ಜೂಮ್ನೊಂದಿಗೆ 10 ಎಂಪಿ ಟೆಲಿಫೋಟೋ ಕ್ಯಾಮೆರಾ ಇದರಲ್ಲಿವೆ. ಈ ಸಾಧನವು 256 ಜಿಬಿ ಅಥವಾ 512 ಜಿಬಿ ಸ್ಟೋರೇಜ್, 12 ಜಿಬಿ ಮೆಮೊರಿ ಮತ್ತು ದೊಡ್ಡ 4,900 ಎಂಎಎಚ್ ಬ್ಯಾಟರಿಯೊಂದಿಗೆ ಲಭ್ಯವಿದೆ. ಇದು ಸಾಮಾನ್ಯ ಎಸ್ 24 ನಂತೆಯೇ ಅದೇ ಬಣ್ಣಗಳಲ್ಲಿ ಲಭ್ಯವಿದೆ. ಆರಂಭಿಕ ಬೆಲೆ $ 999 ಆಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 24: ಗ್ಯಾಲಕ್ಸಿ ಎಸ್ 24, ಹೆಚ್ಚು ಕಾಂಪ್ಯಾಕ್ಟ್ ಮತ್ತು ಬಜೆಟ್ ಸ್ನೇಹಿ ಆಯ್ಕೆಯಾಗಿದ್ದು, 6.2 ಇಂಚಿನ ಎಫ್ಎಚ್ಡಿ + ಡೈನಾಮಿಕ್ ಅಮೋಲೆಡ್ 2 ಎಕ್ಸ್ ಡಿಸ್ಪ್ಲೇಯನ್ನು 1-120 ಹೆರ್ಟ್ಜ್ ರಿಫ್ರೆಶ್ ರೇಟ್ನೊಂದಿಗೆ ಹೊಂದಿದೆ. ವಿಷನ್ ಬೂಸ್ಟರ್ ವೈಶಿಷ್ಟ್ಯ ಕೂಡ ಇದರಲ್ಲಿದೆ. ಈ ಸಾಧನವು 50 ಎಂಪಿ ಮುಖ್ಯ ಕ್ಯಾಮೆರಾ, 12 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ, 10 ಎಂಪಿ ಟೆಲಿಫೋಟೋ ಕ್ಯಾಮೆರಾ ಮತ್ತು 12 ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 128 ಜಿಬಿ, 256 ಜಿಬಿ ಅಥವಾ 512 ಜಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್ 24 ಫ್ಲಾಟ್, ಮ್ಯಾಟ್ ಫ್ರೇಮ್ ನೊಂದಿಗೆ ಹೊಸ ವಿನ್ಯಾಸವನ್ನು ಇದು ಒಳಗೊಂಡಿದೆ. ಈ ಸಾಧನವು ಒನಿಕ್ಸ್ ಬ್ಲ್ಯಾಕ್, ಮಾರ್ಬಲ್ ಗ್ರೇ, ಕೋಬಾಲ್ಟ್ ವೈಲೆಟ್ ಮತ್ತು ಅಂಬರ್ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ $ 799 ರಿಂದ ಪ್ರಾರಂಭವಾಗುತ್ತದೆ.
ಗ್ಯಾಲಕ್ಸಿ AI : ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಗ್ಯಾಲಕ್ಸಿ ಎಐ ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಸಂವಹನ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಿರುವ ಬಹು ನಿರೀಕ್ಷಿತ ವೈಶಿಷ್ಟ್ಯವಾಗಿದೆ.
ಇದನ್ನೂ ಓದಿ : ಬೈ ವಿತ್ ಪ್ರೈಮ್ ವಿಭಾಗದಲ್ಲಿ ಶೇ 5ರಷ್ಟು ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್