ನವದೆಹಲಿ: 50MP ಟ್ರಿಪಲ್ ಕ್ಯಾಮರಾ, 6000mAh ಬ್ಯಾಟರಿ, 5nm ಪ್ರೊಸೆಸರ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ Galaxy M14 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ಸೋಮವಾರ ಘೋಷಿಸಿದೆ. ಪೂರ್ಣ HD+ 90Hz ಡಿಸ್ಪ್ಲೇ ಹೊಂದಿರುವ 6.6-ಇಂಚಿನ Galaxy M14 5G ಬೆಲೆಗಳು 13,490 (4+128GB) ಮತ್ತು 14,990 (6+128GB) ಆಗಿವೆ. ಐಸಿ ಸಿಲ್ವರ್, ಬೆರ್ರಿ ಬ್ಲೂ ಮತ್ತು ಸ್ಮೋಕಿ ಟೀಲ್ ಹೀಗೆ ಮೂರು ಬಣ್ಣಗಳಲ್ಲಿ ಇದು ಲಭ್ಯವಾಗಲಿದೆ. Galaxy M14 5G ಇದರ ಮಾರಾಟ ಭಾರತದಲ್ಲಿ ಏಪ್ರಿಲ್ 21 ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಲಿದೆ.
-
Galaxy M14 5G goes official in India with 5nm chip and 6,000mAh battery: https://t.co/ViG68w6wu1
— SamMobile - Samsung news! (@SamMobiles) April 17, 2023 " class="align-text-top noRightClick twitterSection" data="
">Galaxy M14 5G goes official in India with 5nm chip and 6,000mAh battery: https://t.co/ViG68w6wu1
— SamMobile - Samsung news! (@SamMobiles) April 17, 2023Galaxy M14 5G goes official in India with 5nm chip and 6,000mAh battery: https://t.co/ViG68w6wu1
— SamMobile - Samsung news! (@SamMobiles) April 17, 2023
2019 ರಲ್ಲಿ ಲಾಂಚ್ ಆದಾಗಿನಿಂದ Galaxy M ಸರಣಿಯು ಭಾರತದಲ್ಲಿ ಲಕ್ಷಾಂತರ ಗ್ರಾಹಕರ ಮೆಚ್ಚುಗೆ ಪಡೆದಿದೆ. ಈ ಪರಂಪರೆಯನ್ನು ನಿರ್ಮಿಸುವ ಮೂಲಕ ನಾವು Galaxy M14 5G ಪರಿಚಯಿಸಲು ಹೆಮ್ಮೆಪಡುತ್ತೇವೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರ ವಿಭಾಗದ ನಿರ್ದೇಶಕ ರಾಹುಲ್ ಪಹ್ವಾ ಹೇಳಿದ್ದಾರೆ.
ವೈಶಿಷ್ಟ್ಯತೆಗಳು: F1.8 ಲೆನ್ಸ್ ಉತ್ತಮ ಸ್ಪಷ್ಟತೆಯೊಂದಿಗೆ ಕಡಿಮೆ-ಬೆಳಕಿನಲ್ಲಿ ಛಾಯಾಗ್ರಹಣಕ್ಕೆ ಸಹಕಾರಿಯಾಗಿದೆ. ಸೆಲ್ಫಿಗಳಿಗಾಗಿ 13 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 6000mAh ಬ್ಯಾಟರಿಯೊಂದಿಗೆ Galaxy M14 5G ಚಾರ್ಜ್ ಮಾಡದೆಯೇ ಎರಡು ದಿನಗಳವರೆಗೆ ಬಳಸಬಹುದು. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಮೂಲಕ ಫೋನ್ ಅನ್ನು ತ್ವರಿತ ಸಮಯದಲ್ಲಿ ರೀಚಾರ್ಜ್ ಮಾಡಬಹುದು. ಮಲ್ಟಿಟಾಸ್ಕಿಂಗ್ಗಾಗಿ ಸೆಗ್ಮೆಂಟ್ ಲೀಡಿಂಗ್ 5nm Exynos 1330 ಪ್ರೊಸೆಸರ್ ಅನ್ನು ಹೊಂದಿದೆ.
-
Buy this Samsung galaxy M14 mobile phone. It's have fanatics features and low prices #GalaxyM14isHERE pic.twitter.com/AdLk5TI2ws
— Rajvi Solanki (@rajvi_solanki9) April 17, 2023 " class="align-text-top noRightClick twitterSection" data="
">Buy this Samsung galaxy M14 mobile phone. It's have fanatics features and low prices #GalaxyM14isHERE pic.twitter.com/AdLk5TI2ws
— Rajvi Solanki (@rajvi_solanki9) April 17, 2023Buy this Samsung galaxy M14 mobile phone. It's have fanatics features and low prices #GalaxyM14isHERE pic.twitter.com/AdLk5TI2ws
— Rajvi Solanki (@rajvi_solanki9) April 17, 2023
ಇದು ಬ್ಯಾಟರಿ ಶಕ್ತಿಯನ್ನು ಉಳಿತಾಯ ಮಾಡಬಲ್ಲ CPU ರಚನೆಯನ್ನು ಹೊಂದಿದೆ ಮತ್ತು ಉತ್ತಮ ಗೇಮಿಂಗ್ ಅನುಭವಕ್ಕಾಗಿ 3D ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. Galaxy M14 5G RAM ಪ್ಲಸ್ ವೈಶಿಷ್ಟ್ಯದೊಂದಿಗೆ 12GB RAM ಹೊಂದಿದೆ. ವೈಯಕ್ತಿಕ ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಸಂಗ್ರಹಿಸಲು ಹೆಚ್ಚುವರಿ ಭದ್ರತೆ ಮತ್ತು ಗೌಪ್ಯತೆಗಾಗಿ ಸಾಧನವು 'ಸುರಕ್ಷಿತ ಫೋಲ್ಡರ್' ಅನ್ನು ಬೆಂಬಲಿಸುತ್ತದೆ. ಇದು Android 13 ಆಧಾರಿತ One UI 5.1 ಕೋರ್ ಅನ್ನು ಹೊಂದಿದೆ. ಗ್ಯಾಲಕ್ಸಿ M14 5G ಗೆ 2 ಜನರೇಶನ್ ವರೆಗೆ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ಗಳನ್ನು ಮತ್ತು 4 ವರ್ಷಗಳವರೆಗೆ ಭದ್ರತಾ ಅಪ್ಡೇಟ್ಗಳನ್ನು ನೀಡಲಾಗುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ.
ಗ್ಯಾಲಕ್ಸಿ M14 5G 206 ಗ್ರಾಂ ತೂಕ ಹೊಂದಿದೆ. ಹ್ಯಾಂಡ್‌ಸೆಟ್ 166.8mm x 77.2mm x 9.4mm ಗಾತ್ರವನ್ನು ಹೊಂದಿದೆ. 5G, 4G, Wi-Fi, Bluetooth 5.2 ಮತ್ತು GPS ಸಂಪರ್ಕ ಬೆಂಬಲವನ್ನು ಹೊಂದಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ನೊಂದಿಗೆ 25W ಕ್ಷಿಪ್ರ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಅಮೆಜಾನ್, ಸ್ಯಾಮ್‌ಸಂಗ್ ವೆಬ್ಸೈಟ್ಗಳಿಂದ Samsung Galaxy M14 5G ಅನ್ನು ಖರೀದಿಸಬಹುದು. ಆಯ್ದ ರಿಟೇಲ್ ಸ್ಟೋರ್ಗಳಿಂದ ಸಹ ಇದನ್ನು ಖರೀದಿಸಬಹುದು. ಏಪ್ರಿಲ್ 21, 12pm (IST) ರಿಂದ ಇದರ ಸೇಲ್ ಆರಂಭವಾಗಲಿದೆ.
ಇದನ್ನೂ ಓದಿ: ಭಾರತದೊಂದಿಗೆ 25 ವರ್ಷಗಳ ಇತಿಹಾಸ ಮುಂದುವರಿಸಲು ಆ್ಯಪಲ್ ಉತ್ಸುಕ: ಟಿಮ್ ಕುಕ್