ನವದೆಹಲಿ : ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಮಧ್ಯಮ ಶ್ರೇಣಿಯ ಗ್ಯಾಲಕ್ಸಿ ಎ15 5ಜಿ (Galaxy A15 5G) ಮತ್ತು ಗ್ಯಾಲಕ್ಸಿ ಎ25 5ಜಿ (Galaxy A25 5G) ಸ್ಮಾರ್ಟ್ ಫೋನ್ ಗಳನ್ನು ಸ್ಯಾಮ್ಸಂಗ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಗ್ಯಾಲಕ್ಸಿ ಎ 15 5 ಜಿ ಬ್ಲೂ ಬ್ಲ್ಯಾಕ್, ಬ್ಲೂ ಮತ್ತು ಲೈಟ್ ಬ್ಲೂ ವರ್ಣಗಳಲ್ಲಿ ಲಭ್ಯವಿದ್ದು, 8 ಜಿಬಿ + 256 ಜಿಬಿ ಮಾದರಿ 22,499 ರೂ. ಮತ್ತು 8 ಜಿಬಿ + 128 ಜಿಬಿ ಮಾದರಿ 19,499 ರೂ.ಗಳ ಆರಂಭಿಕ ಬೆಲೆಗಳಲ್ಲಿ ಸಿಗಲಿವೆ. ಹಾಗೆಯೇ ಗ್ಯಾಲಕ್ಸಿ ಎ 25 5 ಜಿ ಬ್ಲೂ ಬ್ಲ್ಯಾಕ್, ಬ್ಲೂ ಮತ್ತು ಹಳದಿ ವರ್ಣಗಳಲ್ಲಿ ಲಭ್ಯವಿದ್ದು, 8 ಜಿಬಿ + 256 ಜಿಬಿ ಮಾದರಿ 29,999 ರೂ. ಮತ್ತು 8 ಜಿಬಿ + 128 ಜಿಬಿ ಮಾದರಿ 26,999 ರೂ.ಗಳ ಆರಂಭಿಕ ಬೆಲೆಗಳಲ್ಲಿ ಸಿಗಲಿವೆ.
ಎಸ್ಬಿಐ ಕಾರ್ಡ್ ಬಳಸಿ ಕೊಂಡರೆ ಎರಡೂ ಮಾದರಿಗಳ ಮೇಲೆ ಕ್ಯಾಶ್ಬ್ಯಾಕ್ ಆಫರ್ ಪಡೆಯಬಹುದು. ಗ್ಯಾಲಕ್ಸಿ ಎ 25 5 ಜಿ ವಿಷನ್ ಬೂಸ್ಟರ್ ತಂತ್ರಜ್ಞಾನದೊಂದಿಗೆ ಸೂಪರ್ - ಅಮೋಲೆಡ್ ಡಿಸ್ಪ್ಲೇ, ಎಕ್ಸಿನೋಸ್ 1280 ಪ್ರೊಸೆಸರ್, ಫೋಟೋ-ಎಡಿಟಿಂಗ್ ವೈಶಿಷ್ಟ್ಯಗಳ 50 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್, 5000 ಎಂಎಎಚ್ ಬ್ಯಾಟರಿ ಮತ್ತು ನಾಕ್ಸ್ ವಾಲ್ಟ್ನಂಥ (Knox Vault) ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಗ್ಯಾಲಕ್ಸಿ ಎ 14 5 ಜಿಯ ಸುಧಾರಿತ ಸ್ಮಾರ್ಟ್ಫೋನ್ ಆಗಿರುವ ಗ್ಯಾಲಕ್ಸಿ ಎ 15 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ ಎ 15 5 ಜಿ ಮಬ್ಬಾದ ಫಿನಿಶ್ನ ಗ್ಲಾಸ್ಟಿಕ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದ್ದರೆ, ಗ್ಯಾಲಕ್ಸಿ ಎ 25 5 ಜಿ ಗ್ಲಾಸಿ ಪ್ರಿಸ್ಮ್ ಪ್ಯಾಟರ್ನ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದೆ.
ಈ ಸಾಧನವು 6.5-ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಒಳಗೊಂಡಿದ್ದು, ವಿಷನ್ ಬೂಸ್ಟರ್ ಕೂಡ ಇದರಲ್ಲಿದೆ. 90 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು ದೃಷ್ಟಿಯ ಆರಾಮಕ್ಕಾಗಿ ಕಡಿಮೆ ನೀಲಿ ಬೆಳಕಿನ ಡಿಸ್ಪ್ಲೇಯೊಂದಿಗೆ ನಯವಾದ ಮತ್ತು ಸ್ಪಷ್ಟ ವೀಕ್ಷಣೆಯ ಅನುಭವ ನೀಡುತ್ತದೆ.
ಗ್ಯಾಲಕ್ಸಿ ಎ 15 5 ಜಿ ವಿಡಿಐಎಸ್ ನೊಂದಿಗೆ 50 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ವೀಡಿಯೊಗಳಲ್ಲಿನ ಮಸುಕನ್ನು ಕಡಿಮೆ ಮಾಡುತ್ತದೆ. ಗ್ಯಾಲಕ್ಸಿ ಎ 25 5 ಜಿ ಹೆಚ್ಚಿನ ರೆಸಲ್ಯೂಶನ್ ಮತ್ತು ಶೇಕ್-ಫ್ರೀ ಫೋಟೋಗಳು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು 50 ಎಂಪಿ (ಒಐಎಸ್) ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಇದನ್ನೂ ಓದಿ : ಜಿಯೋ ₹2,999 ಪ್ಲಾನ್ ವ್ಯಾಲಿಡಿಟಿ ಹೆಚ್ಚಳ: 389 ದಿನಗಳವರೆಗೆ ಪ್ರತಿದಿನ 2.5 ಜಿಬಿ ಡೇಟಾ ಆಫರ್