ನವದೆಹಲಿ: ಚಾಟ್ಜಿಪಿಟಿಯ ಸೃಷ್ಟಿಕರ್ತ ಸ್ಯಾಮ್ ಆಲ್ಟಮನ್ ಸಿಇಒ ಮತ್ತು ಸಹ ಸಂಸ್ಥಾಪಕನ ಸ್ಥಾನದಿಂದ ಓಪನ್ ಎಐ ಸಂಸ್ಥೆ ತೆಗೆದು ಹಾಕಿದೆ. ಸದ್ಯ ಓಪನ್ ಎಐ ಹಂಗಾಮಿ ಸಿಇಒ ಆಗಿ ಮೀರಾ ಮುರತಿ ಅವರನ್ನು ನೇಮಿಸಲಾಗಿದ್ದು, ತತ್ಕ್ಷಣದಿಂದಲೇ ಅವರು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಈ ವಿದ್ಯಮಾನ ಸದ್ಯ ಟೆಕ್ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಆಲ್ಟ್ಮನ್ ವಜಾದ ಹಿಂದಿನ ಕಾರಣ?: ಸಿಇಒ ಸ್ಯಾಮ್ ಅಲ್ಟಮನ್ ಅವರನ್ನು ಏಕಾಏಕಿ ವಜಾಗೊಳಿಸಿರುವ ಕಾರಣ ಕುರಿತು ಅನೇಕ ಪ್ರಶ್ನೆಗಳು ಉದ್ಬವಿಸಿದ್ದವು. ಇದೀಗ ಅದರ ಹಿಂದಿನ ಕಾರಣಗಳು ಏನು ಎಂಬುದು ಬಯಲಾಗಿದೆ. ಓಪನ್ ಐಎ ಮಂಡಳಿ ಕಂಡಂತೆ ಸ್ಯಾಮ್ ಅಲ್ಟಮನ್, ಮಂಡಳಿ ಜೊತೆಗೆ ಸ್ಪಷ್ಟ ಮತ್ತು ನಿರಂತರ ಸಂಪರ್ಕ ಹೊಂದಿರಲಿಲ್ಲ. ಈ ಹಿನ್ನೆಲೆ ಮಂಡಳಿ ಅವರು ಓಪನ್ ಎಐ ನೇತೃತ್ವವನ್ನು ಮುಂದುವರೆಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ, ಮಂಡಳಿಯ ಕರ್ತವ್ಯ ನಿರ್ವಹಿಸುವ ಸಾಮರ್ಥ್ಯಕ್ಕೆ ಅವರು ಅಡ್ಡಿಯಾಗುತ್ತಿದ್ದರು ಎಂದು ಕಾರಣ ನೀಡಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ಯಾರು ಈ ಮೀರಾ ಮುರತಿ: ಸದ್ಯ ಸ್ಯಾಮ್ ಅಲ್ಟಮನ್ ಸ್ಥಾನಕ್ಕೆ ಮೀರಾ ಮುರತಿಯನ್ನು ತಾತ್ಕಾಲಿಕವಾಗಿ ಮಂಡಳಿ ನೇಮಿಸಿದೆ. ಮೆಕಾನಿಕಲ್ ಇಂಜಿನಿಯರ್ ಆಗಿರುವ ಈಕೆ ಕೆನಡಾದಲ್ಲಿ ಬೆಳೆದವರು. ಡರ್ಟ್ಮೌತ್ ಕಾಲೇಜ್ನಲ್ಲಿ ಪದವಿ ಪಡೆದಿದ್ದಾರೆ. ಟೆಸ್ಲಾ ಮತ್ತು ಗೋಲ್ಡ್ಮನ್ ಸಚ್ಸ್ನಲ್ಲಿ ಇಂಟರ್ನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಎಕ್ಸ್ ನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಲೀಪ್ ಮೋಷನ್ ಎಂಬ ಸ್ಟಾರ್ಟ್ಅಪ್ ಸೃಷ್ಟಿಸಿ, ಅಲ್ಲಿ ಕೈ ಮತ್ತು ಬೆರಳುಗಳ ಚಲನೆಯ ವಿಶ್ಲೇಷಿಸುವ ಕಂಪ್ಯೂಟರ್ ಸಿಸ್ಟಂ ಅನ್ನು ಸೃಷ್ಟಿಸಿದ್ದಾರೆ. ನ್ಯೂ ಯಾರ್ಕ್ ಟೈಮ್ಸ್ ಪ್ರಕಾರ ಈ ಸಂಸ್ಥೆಯನ್ನು 2018ರಲ್ಲಿ ತೊರೆದಿದ್ದಾರೆ. ಟೆಸ್ಲಾದಲ್ಲಿ ಮೂರು ವರ್ಷಗಳ ಕಾಲ ಸೀನಿಯರ್ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದು, ಓಪನ್ಎಐ ಸಿಇಒ ಆಗಿ ನೇಮಕ ಆಗಿದ್ದಾರೆ.
ಮುರತಿ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿರುವ ಓಪನ್ ಎಐ, ಅವರ ವಿಶಿಷ್ಟ ಕೌಶಲ್ಯದ ಸೆಟ್, ಸಂಸ್ಥೆಯ ಮೌಲ್ಯಗಳ ಅರ್ಥೈಸಿಕೊಳ್ಳುವಿಕೆ ಹೊಂದಿದ್ದಾರೆ. ಈಗಾಗಲೇ ಅವರು ಸಂಸ್ಥೆಯ ಸಂಶೋಧನೆ, ಪ್ರೋಡಕ್ಟ್ ಸುರಕ್ಷಾಕಾರ್ಯದಲ್ಲಿ ಅವರು ಕಾರ್ಯಾಚರಣೆ ನಡೆಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: AIನಿಂದ ಬದಲಿಸಲಾದ/ಸೃಷ್ಟಿಸಲಾದ ವಿಡಿಯೋ ತೆಗೆದುಹಾಕಲಿದೆ ಯೂಟ್ಯೂಬ್