ಹೈದರಾಬಾದ್: ಕೋವಿಡ್ ಸಾಂಕ್ರಾಮಿಕತೆ ಬಳಿಕ ಅನೇಕ ವೈರಸ್ ಬಗ್ಗೆ ಜನರು ಜಾಗೃತರಾಗಿದ್ದಾರೆ. ವೈರಸ್ಗಳಿಂದಾಗಿ ರಕ್ಷಣೆ ಪಡೆಯಲು ತುರ್ತು ವೈದ್ಯಕೀಯ ಮೊರೆ ಹೋಗುವುದು ಕಾಣಬಹುದು. ಇನ್ನು ಮಕ್ಕಳಿಗೆ ಜ್ವರ ಸೇರಿದಂತೆ ಅನೇಕ ವೈರಸ್ಗಳು ಕಾಡುವುದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇಂತಹ ಅನೇಕ ವೈರಸ್ಗಳನ್ನು ಪತ್ತೆ ಮಾಡುವ ರಿಯಲ್ ಟೈಮ್ ಪಾಲಿಮರೇಸ್ ಚಥನ್ ರಿಯಾಕ್ಷನ್ (ಆರ್ಟಿಪಿಸಿಆರ್) ಎಂಬ ಸಣ್ಣ ಮಷಿನ್ ಅನ್ನು ಹೈದರಾಬಾದ್ ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ.
ಈ ಚಿಕ್ಕ ಯಂತ್ರವನ್ನು ಆರಾಮವಾಗಿ ಯಾವುದೇ ಸ್ಥಳಕ್ಕೆ ಬೇಕಾದರೂ ಜೊತೆಯಲ್ಲಿಯೇ ಕೊಂಡೊಯ್ಯಬಹುದಾಗಿದ್ದು, ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ. ಈ ಯಂತ್ರದ ಮೂಲಕ 30 ನಿಮಿಷದೊಳಗೆ ಪರೀಕ್ಷೆ ಮಾಡಬಹುದಾಗಿದೆ. ಉಸಿರಾಟದ ಸಮಸ್ಯೆ, ರಕ್ತ ಮತ್ತು ಜಠರ ಕರುಳಿನ ಇತರ ವಿವಿಧ ವೈರಸ್ಗಳನ್ನು ಪರೀಕ್ಷಿಸಬಹುದ್ದಾಗಿದ್ದು, ಈ ಯಂತ್ರವನ್ನು 'ಬಯೊಏಷ್ಯಾ 2023'ರಲ್ಲಿ ಪ್ರದರ್ಶಿಸಲಾಗಿದೆ.
ಉತ್ತಮ ಸಾಮರ್ಥ್ಯ: 'ನಾವು ಹೈದರಾಬಾದ್ನ ವೈದ್ಯಕೀಯ ಸಾಧನಗಳ ಪಾರ್ಕ್ನಲ್ಲಿದ್ದು, ರೋಗಗಳನ್ನು ಪತ್ತೆ ಮಾಡುವ ಕಿಟ್ ಮತ್ತು ಸಾಧನಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಅನೇಕ ಮೊಲೆಕ್ಯೂಲರ್ ಡಯಾಗ್ನಾಸ್ಟಿಕ್ ಕಿಟ್ಗಳ ಲೈಸೆನ್ಸ್ ಅನ್ನು ನಾವು ಹೊಂದಿದ್ದೇವೆ. ಇದು ಪಾಕ್ಟ್ನ ವ್ಯವಸ್ಥೆಯ ಸಣ್ಣ ರಿಯಲ್ ಟೈಮ್ ಪಿಸಿಆರ್ ಮಷಿನ್ ಆಗಿದೆ. ಫಿಸಿಶಿಯನ್ ರೂಮ್ನ ಒಳಾಂಗಣ ಮತ್ತು ಹೊರಾಂಗಣದ ಯಾವುದೇ ಸ್ಥಳದಲ್ಲಿ ಬೇಕಾದಾಗ ಬಳಕೆ ಮಾಡಬಹುದಾಗಿದೆ. ಇದಕ್ಕೆ ನಿರ್ದಿಷ್ಟ ಪೂರಕ ವಾತಾವಣ ಮತ್ತು ಪರೀಕ್ಷೆ ಮಾಡಲು ತರಬೇತಿ ಹೊಂದಿರುವ ವ್ಯಕ್ತಿ ಬೇಕಿಲ್ಲ. ಈ ಮಷಿನ್ ಸಾಮರ್ಥ್ಯ ಕೂಡ ಉತ್ತಮವಾಗಿದೆ' ಎಂದು ಹುವೆಲ್ ಲೈಫ್ಸೈನ್ಸ್ನ ಸಿಇಒ ರಚನಾ ತ್ರಿಪಾಠಿ ತಿಳಿಸಿದರು.
ಕ್ಲಿನಿಕ್ಗಾಗಿ ಅಭಿವೃದ್ಧಿ: ಇದು ವೈರಸ್ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಯಾವುದೇ ಕಾರಕವನ್ನು ಅಭಿವೃದ್ಧಿಪಡಿಸಿದಾಗ ಅವುಗಳನ್ನು ಕಾರ್ಟ್ರಿಡ್ಜ್ ಒಳಗೆ ಇರಿಸುವ ಮೂಲಕ ವೈರಸ್ ಅಥವಾ ಬ್ಯಾಕ್ಟಿರೀಯಾಗಳನ್ನು ಪತ್ತೆ ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಫಿಷಿಶಿಯನ್, ಸ್ತ್ರಿರೋಗ ತಜ್ಞರ ಕ್ಲಿನಿಕ್ನಲ್ಲಿ ಇದನ್ನು ಇಡಬಹುದು. ಇದರ ಬಳಕೆ ಕೂಡ ಸುಲಭವಾಗಿದೆ. ಸೂಕ್ಷ್ಮವಾದ ಸಾಮರ್ಥ್ಯವನ್ನು ಇದು ಹೊಂದಿದ್ದು, ಆ್ಯಂಟಿಜೆನ್ ಮಾದರಿ ಪರೀಕ್ಷೆ ನಡೆಸಲಾಗುವುದು. ಸಿಂಗಲ್ ಟೆಸ್ಟ್ಗೆ 30 ನಿಮಿಷ ಬೇಕಾಗುತ್ತದೆ. ಇದನ್ನು ಮನೆ ಅಥವಾ ವೈಯಕ್ತಿಕ ಬಳಕೆಗೆ ಪ್ರಸ್ತುತ ನೀಡಲಾಗುತ್ತಿಲ್ಲ. ಕೇವಲ ಪ್ರಾಥಮಿಕ ಕೇಂದ್ರ, ಕ್ಲಿನಿಕ್ಗಳಿಗೆ ನಮ್ಮ ಗಮನ ಇದೆ. ಇದರಲ್ಲಿ ಎಚ್ಪಿವಿ ಮತ್ತು ಎಸ್ಟಿಡಿಯನ್ನು ಕೂಡ ಪತ್ತೆ ಮಾಡಬಹುದಾಗಿದೆ ಎಂದಿದ್ದಾರೆ.
ಕೋವಿಡ್ ಆತಂಕದಲ್ಲಿ ನಾವಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ನಾವು ಕಾರ್ಪೊರೆಟ್ ಕಚೇರಿಗಳಲ್ಲಿ ಕೂಡ ಬಳಕೆ ಮಾಡಬಹುದಾಗಿದೆ. ನಾವು ಕಚೇರಿಯಲ್ಲಿ ಎಲ್ಲ ವೈರಸ್ಗಳನ್ನು ಪತ್ತೆ ಮಾಡಬಹುದಾಗಿದ್ದು, ಎಲ್ಲ ಸೋಂಕಿನ ತಡೆಗೆ ಕ್ರಮ ವಹಿಸಬಹುದು. ಕಾಟ್ರಿಡ್ಜ್ನಲ್ಲಿ ಇಡುವ ಮೂಲಕ ಇದು ವೈರಸ್, ಬ್ಯಾಕ್ಟೇರಿಯಾ ಅಥವಾ ಫಂಗಸ್ಗಳನ್ನು ಪತ್ತೆ ಮಾಡಬಹುದಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಹುವೆಲ್ ಲೈಫ್ಸೈನ್ಸ್ನ ಸಹ ಸಂಸ್ಥಾಪಕರಾದ ಡಾ ಶೇಶೀರ್, ನಾವು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದ್ದೇವೆ. ಕಾಳಜಿ ವಿಚಾರ ಹಿನ್ನಲೆ ಇದು ಮಹತ್ವಾಗಿದೆ. ಬಿ2ಬಿ ಮತ್ತು ಫೀಲ್ಡ್ ಟೆಸ್ಟ್ನಲ್ಲಿ ಹಲವು ಬಳಕೆ ಮಾಡಬಹುದಾಗಿದೆ. ಭವಿಷ್ಯದಲ್ಲಿ ಮನೆ ಬಳಕೆಗೂ ಈ ಉತ್ಪನ್ನ ಬಿಡುಗಡೆ ಮಾಡುವ ಆಲೋಚನೆ ಇದ್ದು, ಈ ಸಂಬಂಧ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: ನಿರ್ದಿಷ್ಟ ಆನುವಂಶಿಕ ಅಸಹಜತೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್ ಬಾಧೆ ಹೆಚ್ಚು