ETV Bharat / science-and-technology

ಖ್ಯಾತ ಕ್ಯಾನ್ಸರ್ ತಜ್ಞ ಡಾ.ರವಿ ಕಣ್ಣನ್​ರಿಗೆ ಪ್ರತಿಷ್ಠಿತ 'ರಾಮನ್ ಮ್ಯಾಗ್ಸೆಸೆ' ಪ್ರಶಸ್ತಿ

author img

By ETV Bharat Karnataka Team

Published : Aug 31, 2023, 7:44 PM IST

ಕ್ಯಾನ್ಸರ್​​ ಚಿಕಿತ್ಸೆ ವಲಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಅಸ್ಸಾಂನ ವೈದ್ಯ ಡಾ.ರವಿ ಕಣ್ಣನ್ ಅವರಿಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

Dr. Ravi Kannan
Dr. Ravi Kannan

ನವದೆಹಲಿ : ಖ್ಯಾತ ಕ್ಯಾನ್ಸರ್ ತಜ್ಞ ಡಾ. ರವಿ ಕಣ್ಣನ್ ಅವರಿಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನದ 65 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ 'ಹೀರೋ ಫಾರ್ ಹೋಲಿಸ್ಟಿಕ್ ಹೆಲ್ತ್​​ಕೇರ್' (Hero for Holistic Healthcare) ಪ್ರಶಸ್ತಿಗೆ ಇವರ ಹೆಸರನ್ನು ಘೋಷಿಸಲಾಗಿದೆ.

ಪ್ರಶಸ್ತಿಯ ಸುದ್ದಿ ಪ್ರಕಟವಾದಾಗಿನಿಂದ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಸಂತೋಷದ ಹೊನಲು ಹರಿದಿದೆ. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯ ಈ ಆವೃತ್ತಿಯಲ್ಲಿ ಗೌರವಿಸಲ್ಪಟ್ಟ ಏಕೈಕ ಭಾರತೀಯ ಡಾ. ರವಿ ಕಣ್ಣನ್. ಫಿಲಿಪ್ಪೀನ್ಸ್‌ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಪ್ರತಿವರ್ಷ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಏಪ್ರಿಲ್ 1957 ರಲ್ಲಿ ನೀಡಲಾಯಿತು. ಅಂದಿನಿಂದ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.

ಏಷ್ಯಾದ ಅತ್ಯುನ್ನತ ಗೌರವವೆಂದು ಪರಿಗಣಿಸಲಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಮಾನವ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಗಮನಾರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ. ಡಾ. ರವಿ ಕಣ್ಣನ್ ಅವರಿಗೆ ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಪ್ರಾಮಾಣಿಕತೆ, ಸಮರ್ಪಣೆ ಮತ್ತು ಪರಿಶ್ರಮಕ್ಕಾಗಿ ಮತ್ತು ವಿಶೇಷವಾಗಿ ಕ್ಯಾನ್ಸರ್ ಗುಣಪಡಿಸುವ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.

ಭಾರತದ ಈಶಾನ್ಯ ಪ್ರದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರುವಲ್ಲಿ ಡಾ. ಕಣ್ಣನ್ ಅವರ ಪ್ರವರ್ತಕ ಕೊಡುಗೆ ಗಮನಾರ್ಹವಾಗಿದೆ. ಈಶಾನ್ಯ ಪ್ರದೇಶದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಡಾ. ಕಣ್ಣನ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈಶಾನ್ಯ ಭಾರತವು ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಮತ್ತು ಮರಣ ಪ್ರಮಾಣ ಹೊಂದಿದೆ ಎಂಬುದು ಗಮನಾರ್ಹ.

ಕಚಾರ್ ಜಿಲ್ಲೆಯಲ್ಲಿ ಮೊದಲ ಕ್ಯಾನ್ಸರ್ ಆಸ್ಪತ್ರೆಯನ್ನು 1981 ರಲ್ಲಿ ಆರಂಭಿಸಲಾಗಿತ್ತು. ಆದರೆ 1996 ರಲ್ಲಿ ಎನ್​ಜಿಓ ಒಂದು ಕಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತು. ಈ ಸಂದರ್ಭದಲ್ಲಿ ಡಾ. ರವಿ ಕಣ್ಣನ್ ಅವರ ನುರಿತ ನಾಯಕತ್ವದ ಕಾರಣದಿಂದ ಸಿಸಿಎಚ್ಆರ್​ಸಿಯು ಸಮಗ್ರ ಕ್ಯಾನ್ಸರ್ ಆರೈಕೆ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿತು. ಡಾ. ರವಿ ಕಣ್ಣನ್ 2007 ರಲ್ಲಿ ಆಸ್ಪತ್ರೆಯ ನಿರ್ದೇಶಕರಾದ ನಂತರ ತಮ್ಮ ದೂರದೃಷ್ಟಿ ಮತ್ತು ಸೃಜನಶೀಲ ಕೌಶಲ್ಯಗಳಿಂದ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸಿದರು.

ಈಗ ಕಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಡಾ. ಕಣ್ಣನ್ ನೇತೃತ್ವದಲ್ಲಿ ಕ್ಯಾನ್ಸರ್, ರೋಗಶಾಸ್ತ್ರ, ರೇಡಿಯಾಲಜಿ ಮತ್ತು ಉಪಶಾಮಕ ಆರೈಕೆಯಂತಹ ಅಗತ್ಯ ಕ್ಷೇತ್ರಗಳನ್ನು ಒಳಗೊಂಡ ಒಟ್ಟು 28 ವಿಭಾಗಗಳನ್ನು ಹೊಂದಿದೆ. ವೈದ್ಯರು ಮತ್ತು ಸಿಬ್ಬಂದಿಯಿಂದ ಆಸ್ಪತ್ರೆಯಲ್ಲಿನ ವೈದ್ಯರ ಸಂಖ್ಯೆಯು 23 ರಿಂದ 451ಕ್ಕೆ ಏರಿಕೆಯಾಗಿದೆ. ಇದೆಲ್ಲವೂ ಡಾ. ಕಣ್ಣನ್ ಅವರ ಸ್ಫೂರ್ತಿದಾಯಕ ಮತ್ತು ದೃಢವಾದ ನಾಯಕತ್ವಕ್ಕೆ ಸಾಕ್ಷಿ.

ಇದನ್ನೂ ಓದಿ : ಇನ್​ಸ್ಟಾಗ್ರಾಮ್​ನಲ್ಲಿ 10 ನಿಮಿಷದ ರೀಲ್ಸ್​: ಶೀಘ್ರದಲ್ಲೇ ಬರಲಿದೆ ಹೊಸ ವೈಶಿಷ್ಟ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.