ETV Bharat / science-and-technology

ರಿಲಯನ್ಸ್​ JioBook ಲ್ಯಾಪ್​ಟಾಪ್ ಬಿಡುಗಡೆ; ಬೆಲೆ ಎಷ್ಟು ಗೊತ್ತಾ? - JioOS ಆಪರೇಟಿಂಗ್ ಸಿಸ್ಟಂ

ರಿಲಯನ್ಸ್​ನ ಜಿಯೋ ಬುಕ್ ಲ್ಯಾಪ್​ಟಾಪ್ ಭಾರತದಲ್ಲಿ ಬಿಡುಗಡೆಯಾಗಿದೆ. ಸದ್ಯ ಇದರ ಆರಂಭಿಕ ಮಾದರಿಯ ಬೆಲೆ 16,499 ರೂ. ಆಗಿದೆ.

Reliance launches Rs 16,499-worth JioBook laptop

author img

By

Published : Aug 2, 2023, 1:31 PM IST

ಬೆಂಗಳೂರು: ರಿಲಯನ್ಸ್‌ನ ಬಹು ನಿರೀಕ್ಷಿತ ರಿಲಯನ್ಸ್ ಜಿಯೋಬುಕ್ ಲ್ಯಾಪ್‌ಟಾಪ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಕಳೆದ ವರ್ಷ ಬಿಡುಗಡೆಯಾಗಿದ್ದ ಮೂಲ ರಿಲಯನ್ಸ್ ಜಿಯೋಬುಕ್‌ನ ಹೊಸ ಪುನರಾವರ್ತನೆಯಾಗಿದೆ. ಹೊಸ ಜಿಯೋ ನೋಟ್‌ಬುಕ್ ಅನ್ನು ಜನಸಾಮಾನ್ಯರಿಗಾಗಿ ಇಷ್ಟವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಲ್ಯಾಪ್‌ಟಾಪ್ ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು JioOS ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್ 4G LTE ಸೌಲಭ್ಯ ಹೊಂದಿದ್ದು, ಬಳಕೆದಾರರು ಪ್ರಯಾಣದಲ್ಲಿರುವಾಗಲೂ ಇಂಟರ್ನೆಟ್‌ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಹೊಸ JioBook 16,499 ರೂ. ಸ್ಟಿಕ್ಕರ್ ಬೆಲೆಯನ್ನು ಹೊಂದಿದೆ. ಈ ಬೆಲೆಯಲ್ಲಿ ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ದರದ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಲಭ್ಯವಿರುವ ಎಚ್​ಪಿ ಮತ್ತು ಇತರ ಕಂಪನಿಗಳ ಕೈಗೆಟುಕುವ ದರದ ಲ್ಯಾಪ್​ಟಾಪ್​ಗಳ ಬೆಲೆಗಳು ಸುಮಾರು 20,000 ರೂ. ಗಳಿಂದ ಆರಂಭವಾಗುತ್ತವೆ. ಅದಕ್ಕೆ ಹೋಲಿಸಿದರೆ ಜಿಯೋ ಬುಕ್ ಅತ್ಯಂತ ಕಡಿಮೆ ದರದ ಲ್ಯಾಪ್​ಟಾಪ್ ಆಗಿದೆ. ಅಮೆಜಾನ್ ಮತ್ತು ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಜಿಯೋ ಬುಕ್ ಮಾರಾಟವು ಆಗಸ್ಟ್ 5 ರಿಂದ ಪ್ರಾರಂಭವಾಗಲಿದೆ.

ರಿಲಯನ್ಸ್‌ನ ಕೈಗೆಟುಕುವ ದರದ ಲ್ಯಾಪ್‌ಟಾಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಇಲ್ಲಿವೆ:

ಜಿಯೋ ಬುಕ್​​ ರಿಲಯನ್ಸ್​​ ರಿಟೇಲ್​ನಲ್ಲಿ ಇಲ್ಲ ಲಭ್ಯ: ರಿಲಯನ್ಸ್ ಜಿಯೋಬುಕ್ ರಿಲಯನ್ಸ್ ರಿಟೇಲ್ ಉತ್ಪನ್ನವಾಗಿದೆ ಮತ್ತು ರಿಲಯನ್ಸ್ ಜಿಯೋನಿಂದ ತಯಾರಿಸಲಾದ ಉತ್ಪನ್ನವಲ್ಲ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ. ಹೆಸರಿನಲ್ಲಿ Jio ಟ್ಯಾಗ್ ಇದ್ದರೂ, ಲ್ಯಾಪ್‌ಟಾಪ್ ಆನ್‌ಲೈನ್‌ನಲ್ಲಿ Jio ಸ್ಟೋರ್‌ನಲ್ಲಿ ಲಭ್ಯವಿರುವುದಿಲ್ಲ ಎಂದರ್ಥ. ಲ್ಯಾಪ್‌ಟಾಪ್ ನೀಲಿ ಶೇಡ್ ಹೊಂದಿದ್ದು, ಜಿಯೋ ಬ್ರ್ಯಾಂಡಿಂಗ್‌ ಇರುತ್ತದೆ.

ಜಸ್ಟ್​ 990 ಗ್ರಾಂ ತೂಕದ ಲ್ಯಾಪ್​​ ಟಾಪ್​: ಲ್ಯಾಪ್​​ಟಾಪ್​ ಅನ್ನು ಅತ್ಯಂತ ಹಗುರವಾಗಿ ವಿನ್ಯಾಸಗೊಳಿಸಿರುವುದು ಇದರ ವಿಶೇಷ ಎಂದು ಕಂಪನಿ ಹೇಳಿಕೊಂಡಿದೆ. ಇದು ಕೇವಲ 990 ಗ್ರಾಂ ತೂಕ ಹೊಂದಿದೆ. ಇದು 11.6-ಇಂಚಿನ ಕಾಂಪ್ಯಾಕ್ಟ್ ಆಂಟಿ-ಗ್ಲೇರ್ HD ಡಿಸ್ ಪ್ಲೇಯನ್ನು ಹೊಂದಿದೆ. ಪರದೆಯು ದಪ್ಪವಾದ ಬೆಜೆಲ್‌ಗಳನ್ನು ಹೊಂದಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಈ ವಿನ್ಯಾಸ ನಿರೀಕ್ಷಿತವಾಗಿಯೇ ಇದೆ.

ಲ್ಯಾಪ್‌ಟಾಪ್ 4G ಕನೆಕ್ಟಿವಿಟಿ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಗಳನ್ನು ಸಪೋರ್ಟ್​ ಮಾಡುತ್ತದೆ. ಕಸ್ಟಮ್ ಸಾಫ್ಟ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಹೊರತಾಗಿಯೂ, ಜಿಯೋ ಬುಕ್ ಪ್ರಮಾಣಿತ ಟ್ರ್ಯಾಕ್‌ಪ್ಯಾಡ್ ಗೆಸ್ಚರ್‌ಗಳನ್ನು ಬೆಂಬಲಿಸುತ್ತದೆ. ಇದರಲ್ಲಿ 75 ಕ್ಕೂ ಹೆಚ್ಚು ಕೀಬೋರ್ಡ್ ಗೆಸ್ಚರ್‌ಗಳಿವೆ.

ಕೀಬೋರ್ಡ್ ಬಗ್ಗೆ ನೋಡುವುದಾದರೆ, ಜಿಯೋ ಬುಕ್ ಇನ್ಫಿನಿಟಿ ಕೀಬೋರ್ಡ್ ಹೊಂದಿದೆ. ಅಂದರೆ ಕೀಗಳು ಲ್ಯಾಪ್ ಟಾಪ್​ನ ಮೂಲೆಗಳಿಗೆ ವಿಸ್ತರಿಸುತ್ತವೆ. ಕೀಗಳ ಗಾತ್ರದಲ್ಲಿ ರಾಜೀ ಮಾಡಿಕೊಳ್ಳದೆ ಲಭ್ಯವಿರುವ ಸ್ಥಳವನ್ನು ಸೂಕ್ತವಾಗಿ ಉಪಯೋಗಿಸಲು ಈ ವಿನ್ಯಾಸವನ್ನು ಅಳವಡಿಸಲಾಗಿದೆ.

ಏನೆಲ್ಲ ಫೀಚರ್ಸ್​​ ಇದೆ ಎಂದರೆ: ಹೊಸ ಜಿಯೋ ಲ್ಯಾಪ್‌ಟಾಪ್ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ಅನ್ನು ಹೊಂದಿದೆ. ಇದರ ಮೂಲಕ ಬಳಕೆದಾರರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ರಿಲಯನ್ಸ್ ಹೇಳಿಕೊಂಡಿದೆ. ಇದು 64GB ಸ್ಟೋರೇಜ್ ಮೆಮೊರಿ ಹೊಂದಿದೆ. ಇದನ್ನು SD ಕಾರ್ಡ್‌ನೊಂದಿಗೆ 256GB ವರೆಗೆ ವಿಸ್ತರಿಸಬಹುದಾಗಿದೆ.

ಜಿಯೋ ಉತ್ಪನ್ನವಾಗಿರುವುದರಿಂದ ಜಿಯೋ ಬುಕ್​ನಲ್ಲಿ ಜಿಯೋ ಟಿವಿ, ಜಿಯೋ ಕ್ಲೌಡ್​ ಗೇಮ್ಸ್​​ಗಳು ಪ್ರಿ ಇನ್​ಸ್ಟಾಲ್​ ಆಗಿರುತ್ತವೆ. ಲಿನಕ್ಸ್ ಆಧಾರಿತ ಕೋಡಿಂಗ್ ಸಾಫ್ಟ್‌ವೇರ್ JioBIAN ಬಳಸಿ ಬಳಕೆದಾರರು ಕೋಡಿಂಗ್ ಭಾಷೆಗಳನ್ನು (ಜಾವಾ, ಪೈಥಾನ್ ಮತ್ತು ಪರ್ಲ್) ಸಹ ಕಲಿಯಬಹುದು. ಆಫೀಸ್ ಮತ್ತು ಪವರ್‌ಪಾಯಿಂಟ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳನ್ನು ಲ್ಯಾಪ್‌ಟಾಪ್ ಬೆಂಬಲಿಸುತ್ತದೆಯೇ ಅಥವಾ ಇಲ್ಲ ಎಂಬುದು ಇನ್ನೂ ಅಸ್ಪಷ್ಟವಾಗಿದೆ. USB-A, HDMI ಮತ್ತು ಆಡಿಯೋ ಜ್ಯಾಕ್ ಪೋರ್ಟ್​​ಗಳನ್ನು ಹೊಂದಿದೆ.

ರಿಲಯನ್ಸ್ ಜಿಯೋಬುಕ್ ಲ್ಯಾಪ್‌ಟಾಪ್‌ ಜೊತೆಗೆ ಡಿಜಿಬಾಕ್ಸ್‌ 100GB ವರೆಗಿನ ಉಚಿತ ಕ್ಲೌಡ್ ಸಂಗ್ರಹಣೆಯನ್ನು ಸಹ ನೀಡುತ್ತದೆ.

ಇದನ್ನೂ ಓದಿ : ಕೈಗೆಟುಕುವ ದರದ Lava 'Yuva-2' ಬಿಡುಗಡೆ; ಬೆಲೆ 6,999ರಿಂದ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.