ಕಾತರದಿಂದ ಕಾಯುತ್ತಿದ್ದ ರೆಡ್ಮಿ ನೋಟ್ 11SE ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆ ಸೇರಲಿದೆ. ಭಾರತದಲ್ಲಿ ಶುಕ್ರವಾರ ಇದು ಬಿಡುಗಡೆಯಾಗಲಿದೆ. ಹಾಗೆ ಪ್ಲಿಪ್ಕಾರ್ಟ್ ಮೂಲಕ ಇದನ್ನು ಮಾರಾಟ ಮಾಡಲಾಗುತ್ತದೆ.
ಈ ಮೊಬೈಲ್ ಬಗ್ಗೆ ಕ್ಸಿವೋಮಿ ಅಂಗಸಂಸ್ಥೆಯು ಸಂಪೂರ್ಣ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಇದು ಈ ವರ್ಷದ ಮೇ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆಯಾದ ಡೈಮೆನ್ಸಿಟಿ 700 SoC-ಚಾಲಿತ ನೋಟ್ 11SE ಗೆ ಯಾವುದೇ ಹೋಲಿಕೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಬದಲಾಗಿ ಭಾರತಕ್ಕೆ ಕಾಲಿಡುತ್ತಿರುವ ಈ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G95 SoC ಅನ್ನು ಹೊಂದಿದೆ.
ಬಿಡುಗಡೆ ದಿನಾಂಕ ನಿಗದಿ: ಭಾರತದಲ್ಲಿ Redmi Note 11SE ನ್ನು ಆಗಸ್ಟ್ 26 ಕ್ಕೆ ಅನಾವರಣ ಮಾಡುವ ದಿನಾಂಕವನ್ನು ಇಂದು ಖಚಿತಪಡಿಸಲಾಗಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಲಾಗಿದೆ. ನಂತರ ಈ ಸ್ಮಾರ್ಟ್‌ಫೋನ್ ಆಗಸ್ಟ್ 31 ರಂದು ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮಾರಾಟವಾಗಲಿದೆ. ಇದು ಮೂರು ಕಾನ್ಫಿಗರೇಶನ್‌ಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಅವೆಂದರೆ 6GB RAM + 64GB ಸ್ಟೋರೇಜ್, 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್.
ಇನ್ನು, ಈ ಮೊಬೈಲ್ನ ಬಣ್ಣದ ವಿಷಯಕ್ಕೆ ಬಂದರೆ ಆಕಾಶ ನೀಲಿ, ಕಾಸ್ಮಿಕ್ ವೈಟ್, ಶ್ಯಾಡೋ ಬ್ಲ್ಯಾಕ್ ಮತ್ತು ಥಂಡರ್ ಪರ್ಪಲ್ ಬಣ್ಣಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಮೊಬೈಲ್ನ ಬೆಲೆಯನ್ನು ಸಂಸ್ಥೆ ಇನ್ನೂ ತಿಳಿಸಿಲ್ಲವಾದರೂ 15,000 ಆರಂಭಿಕ ಕೊಡುಗೆ ದರವಾಗಿದೆ ಎನ್ನಲಾಗ್ತಿದೆ.
ವೈಶಿಷ್ಟ್ಯಗಳೇನು?: ಈಗ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿರುವ Redmi Note 11SE ಮಾದರಿಯು ಮರುಬ್ಯಾಡ್ಜ್ ಮಾಡಲಾದ Redmi Note 10S ನಂತೆ ಹೋಲಿಕೆ ಇದೆ. ಇದು 6.43-ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಜೊತೆಗೆ ಪೂರ್ಣ ಹೆಚ್ಡಿ+ (1,080x2,400 ಪಿಕ್ಸೆಲ್‌ಗಳು) ರೆಸಲ್ಯೂಶನ್, 1,100 nits ಗರಿಷ್ಠ ಬ್ರೈಟ್‌ನೆಸ್ (ಬಿರು ಬಿಸಿಲಲ್ಲೂ ಸ್ಪಷ್ಟವಾಗಿ ಕಾಣಲಿದೆ) ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಒಳಗೊಂಡಿದೆ. ಹಾಗೆ Mali-G76 ಜಿಪಿಯು ನೊಂದಿಗೆ Helio G95 SoC ಮೂಲಕ ಇದು ಕಾರ್ಯನಿರ್ವಹಿಸುತ್ತದೆ.
ಕ್ಯಾಮರಾ ವಿಶಿಷ್ಟ್ಯತೆ: ಕ್ವಾಡ್ ರಿಯರ್ ಕ್ಯಾಮರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 64-ಮೆಗಾಪಿಕ್ಸೆಲ್ ಇದೆ. ಹಾಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಕ್ಯಾಮರಾ ಮತ್ತು ಎರಡು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸಾರ್ ಇವೆ. ಹಿಂಬದಿ ಕ್ಯಾಮರಾದಲ್ಲಿ 30fps ನಲ್ಲಿ 4K ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಒದಗಿಸಲಾಗಿದೆ. ಹಾಗೆ 13 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ ಇದರಲ್ಲಿದೆ.
ಬ್ಯಾಟರಿ ಸಾಮರ್ಥ್ಯ: ಇದು ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಹಾಗೆ ಎಲ್ಲಾ ಮೊಬೈಲ್ನಲ್ಲಿ ಸಾಮಾನ್ಯವಾಗಿ ಇರುವಂತೆ 5,000mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಭದ್ರತೆ: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರುವ ಈ ಸಾಧನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ ಗೇಮಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು Z- ಆಕ್ಸಿಸ್ ಕಂಪನಿ ಮೋಟಾರ್ ಅನ್ನು ಸಹ ಅಳವಡಿಸಲಾಗಿದೆ.
ಇದನ್ನೂ ಓದಿ: ಸ್ಮಾರ್ಟ್ ಪೋನ್ನಂತೆ ಟಿವಿಯಲ್ಲಿ ಶೀಘ್ರವೇ ಯೂಟ್ಯೂಬ್ ಶಾರ್ಟ್