ನವದೆಹಲಿ : ಜಾಗತಿಕ ಮೊಬೈಲ್ ತಂತ್ರಜ್ಞಾನ ಬ್ರ್ಯಾಂಡ್ ರಿಯಲ್ಮಿ ತನ್ನ ಈವರೆಗಿನ ಅತಿ ತೆಳ್ಳಗಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಹೊಸ ಸ್ಮಾರ್ಟ್‌ಫೋನ್ ರಿಯಲ್ಮಿ ನಾರ್ಜೊ N53 (Realme Narzo N series) ಅತ್ಯಂತ ಶ್ರೇಷ್ಠ ಗುಣಮಟ್ಟದ ಫೋನ್ ಆಗಿದ್ದು, ಹಲವಾರು ಮನಮೆಚ್ಚುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಆಧುನಿಕ ರೀತಿಯಲ್ಲಿ ಟ್ರೆಂಡಿ ಹಾಗೂ ಸ್ಟೈಲಿಷ್ ಆಗಿದ್ದು, ಯುವ ಪೀಳಿಗೆಗೆ ಇಷ್ಟವಾಗುವಂತಿದೆ. ಈ ಫೋನ್ ಮೇ 18 ರಂದು ಲಾಂಚ್ ಆಗಲಿದ್ದು, ಅಮೆಜಾನ್ನಲ್ಲಿ ಖರೀದಿಗೆ ಲಭ್ಯವಾಗಲಿದೆ.
ರಿಯಲ್ಮಿ ಅತ್ಯಂತ ತೆಳುವಾದ ನಾರ್ಜೊ ಸ್ಮಾರ್ಟ್‌ಫೋನ್ ತಯಾರಿಸಿರುವುದು ಬಹಳ ಮುಖ್ಯವಾಗಿದೆ. ಇಷ್ಟೊಂದು ತೆಳ್ಳಗಿನ ಫೋನ್ನಲ್ಲಿ ಎಲ್ಲ ಅತ್ಯುತ್ತಮ ವೈಶಿಷ್ಟ್ಯಗಳನ್ನು ತುಂಬಿಸುವುದು ಒಂದು ಸವಾಲೇ ಸರಿ. ಆದರೂ ರಿಯಲ್ಮಿ ಇಂಥ ಅದ್ಭುತವನ್ನು ಸಾಧ್ಯವಾಗಿಸಿದ್ದು ಆಶ್ಚರ್ಯಕರ. ಹೊಸ ಸ್ಮಾರ್ಟ್‌ಫೋನ್ ರಿಯಲ್ಮಿ ನಾರ್ಜೊ ಎನ್ ಸಿರೀಸ್ ಬ್ಯಾಟರಿಯ ದಪ್ಪ 4.44mm ಆಗಿದೆ. ಇದು ಪ್ರಸ್ತುತ 33W ಬ್ಯಾಟರಿಯ 4.69mm ಗಿಂತ 0.25mm ತೆಳುವಾಗಿದೆ. 6.745 ಇಂಚುಗಳ ಪರದೆಯ ಗಾತ್ರವು ಬ್ಯಾಟರಿಯ ಉದ್ದ ಮತ್ತು ಅಗಲವನ್ನು ದೊಡ್ಡದಾಗಿಸಲು ಅವಕಾಶ ಮಾಡಿಕೊಟ್ಟಿದೆ. ಮುಖ್ಯ ಬೋರ್ಡ್‌ನ ಹೆಚ್ಚಿನ ಸಾಂದ್ರತೆ ಮತ್ತು ವಿಪರೀತ ವಿನ್ಯಾಸವು ಅದರ ಉದ್ದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಬ್ಯಾಟರಿಯ ಉದ್ದ ಹೆಚ್ಚಾಗಿಸಿ ಅದರ ದಪ್ಪವನ್ನು ಕಡಿಮೆ ಮಾಡಲಾಗಿದೆ.
ಹೆಚ್ಚುವರಿಯಾಗಿ, ಸ್ಕ್ರೀನ್ನ ಕವರ್ನ ದಪ್ಪವು ಕೇವಲ 0.68mm ಆಗಿದೆ. ಇದು ಸಾಂಪ್ರದಾಯಿಕವಾಗಿ ಇರುವ 0.78mm ಕವರ್‌ಗಿಂತ 0.1mm ತೆಳುವಾಗಿದೆ. ಶಾಖ ಪ್ರಸರಣ ಗ್ರ್ಯಾಫೈಟ್ ಶೀಟ್ ಅನ್ನು ಮುಂಭಾಗದ ಶೆಲ್‌ನಿಂದ ತೆಗೆದುಹಾಕಲಾಗಿದೆ ಮತ್ತು ಹೆಚ್ಚಿನ ವಾಹಕತೆಯ ಅಲ್ಯೂಮಿನಿಯಂ ಮಿಶ್ರಲೋಹದೊಂದಿಗೆ ಬದಲಾಯಿಸಲಾಗಿದೆ. ಈ ಬದಲಾವಣೆಯು ಗ್ರ್ಯಾಫೈಟ್ ಶೀಟ್‌ನ ದಪ್ಪವನ್ನು 0.07 ಮಿಮೀಗೆ ಕಡಿಮೆ ಮಾಡುತ್ತದೆ ಮತ್ತು ಶಾಖದ ಹರಡುವಿಕೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಕೊನೆಯದಾಗಿ, ಹೆಚ್ಚಿನ ಸಾಮರ್ಥ್ಯದ ಅಲ್ಯೂಮಿನಿಯಂ ಮಿಶ್ರಲೋಹದ ಬಳಕೆಯು ಪರದೆಯ ಮತ್ತು ಬ್ಯಾಟರಿಯ ನಡುವಿನ ಅಂತರವನ್ನು 0.05mm ಯಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ಮಾರ್ಟ್‌ಫೋನ್ ಬಳಕೆದಾರರು ಇಂದು ನಯವಾದ ಮತ್ತು ಸ್ಲಿಮ್ ಸಾಧನಗಳನ್ನು ಬಯಸುತ್ತಾರೆ. ಕೇವಲ ಹಗುರವಾಗಿರುವುದು ಮಾತ್ರವಲ್ಲದೇ ಜೇಬಿನಲ್ಲಿ ಆರಾಮವಾಗಿ ಫಿಟ್ ಆಗುವ ಫೋನ್ಗಳನ್ನು ಯುವ ಸಮುದಾಯದವರು ಇಷ್ಟಪಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಂತಹ ಸಾಧನಗಳ ತಯಾರಿಕೆ ಎಷ್ಟೋ ಪಟ್ಟು ಹೆಚ್ಚಾಗಿದೆ. ಇವು ಇಟ್ಟುಕೊಂಡು ತಿರುಗಾಡಲು ಸುಲಭವಾಗಿದ್ದು, ಸೊಗಸಾದ ಮತ್ತು ಟ್ರೆಂಡಿ ನೋಟವನ್ನು ನೀಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ದೃಢವಾದ ಮತ್ತು ಹೊಸ ಮಾದರಿಯ ಮೊಬೈಲ್ಗಳನ್ನು ಇಷ್ಟಪಡುವ ನೆಕ್ಸ್ಟ್ ಜೆನ್ ಬಳಕೆದಾರರಿಗೆ Realme Narzo ಸರಣಿಯು ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಸದ್ಯ ರಿಯಲ್ಮಿ ಭಾರತದಲ್ಲಿ 1 ಕೋಟಿ 23 ಲಕ್ಷ ಬಳಕೆದಾರರನ್ನು ಹೊಂದಿದೆ. Realme Narzo N ಸರಣಿಯು ಚಾರ್ಜಿಂಗ್, ಮೆಮೊರಿ ಸ್ಟೋರೇಜ್, ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಸಾಟಿಯಿಲ್ಲದ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಆರಂಭಿಕ ಮಟ್ಟದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಮಾಡಿದೆ.
ಇದನ್ನೂ ಓದಿ : Google Bard ಭಾರತದಲ್ಲಿ ಕಾರ್ಯಾರಂಭ: ChatGPT ಗೆ ಗೂಗಲ್ ಪೈಪೋಟಿ