ETV Bharat / science-and-technology

Walking Fish: 22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು!

ಆಸ್ಟ್ರೇಲಿಯಾದ ರಾಜ್ಯವಾದ ತಾಸ್ಮೇನಿಯಾದ ನೈರುತ್ಯಕ್ಕಿರುವ ಕರಾವಳಿಯಲ್ಲಿ, ಅತ್ಯಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪಿಂಕ್ ಹ್ಯಾಂಡ್​ಫಿಶ್ ಸುಮಾರು 22 ವರ್ಷಗಳ ನಂತರ ಪತ್ತೆಯಾಗಿದೆ.

Rare walking fish has been spotted after 22 year in Australia
Walking Fish: 22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು!
author img

By

Published : Dec 25, 2021, 6:44 PM IST

ಮೀನಿನ ಹೆಜ್ಜೆ ಹುಡುಕೋಕೆ ಆಗಲ್ಲ ಎಂಬ ಗಾದೆ ಮಾತಿದೆ. ಮೀನಿನ ಹೆಜ್ಜೆ ಹುಡುಕೋಕೆ ಸಾಧ್ಯವಿಲ್ಲ. ಏಕೆಂದರೆ ಮೀನುಗಳು ನಡೆದಾಡೋದೇ ಇಲ್ಲ ಎಂಬ ಉತ್ತರ ಬಂದರೂ ಬರಬಹುದು. ಆದರೆ, ಇಲ್ಲೊಂದು ಮೀನು ನಡೆದಾಡುತ್ತಿದೆ. ಸುಮಾರು 22 ವರ್ಷಗಳ ನಂತರ ಇಂತಹ ಅಪರೂಪದ ಮೀನು ಪತ್ತೆಯಾಗಿದ್ದು, ಅಳಿವಿನಂಚಿನಲ್ಲಿದೆ.

ಹೌದು, ಆಸ್ಟ್ರೇಲಿಯಾದ ರಾಜ್ಯವಾದ ತಾಸ್ಮೇನಿಯಾದ ನೈರುತ್ಯಕ್ಕಿರುವ ಕರಾವಳಿಯಲ್ಲಿ ಈ ಮೀನು ಪತ್ತೆಯಾಗಿದೆ. ಇದನ್ನು ಪಿಂಕ್ ಹ್ಯಾಂಡ್​ಫಿಶ್ ಎಂದು ಕರೆಯಲಾಗುತ್ತದೆ. ಸುಮಾರು 22 ವರ್ಷದ ಹಿಂದೆ ಕಾಣಿಸಿಕೊಂಡು, ನಂತರ ಮಾಯವಾಗಿದ್ದ ಈ ಮೀನು ಅಳಿವಿನಂಚಲ್ಲಿದೆ ಎಂದು ಘೋಷಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಈ ಮೀನು ಪತ್ತೆಯಾಗಿದ್ದು, ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ.

  • A very rare walking fish has been spotted for the first time in 22 years! Was that on your 2021 bingo card? 🐟

    We’ve confirmed that the endangered pink handfish has been seen in a marine park off Tasmania’s south-west coast. https://t.co/nYFRsxk7Lf

    — CSIRO (@CSIRO) December 23, 2021 " class="align-text-top noRightClick twitterSection" data=" ">

ಆ್ಯಂಗ್ಲರ್​​ಫಿಶ್ ಕುಟುಂಬಕ್ಕೆ ಸೇರಿದ ಈ ಪಿಂಕ್ ಹ್ಯಾಂಡ್​ ಫಿಶ್​ ಇದುವರೆಗೆ ಕೇವಲ ಐದು ಬಾರಿ ಕಾಣಿಕೊಂಡಿತ್ತು. ಇದು ಕೊನೆಯದಾಗಿ ಕಾಣಿಸಿಕೊಂಡಿದ್ದು, ತಾಸ್ಮೇನಿಯಾದ ರಾಜಧಾನಿ ಹೊಬಾರ್ಟ್​ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ. ಅದು 1999ರಲ್ಲಿ. ಇದನ್ನು ಪತ್ತೆ ಹಚ್ಚಿದ್ದು, ತಾಸ್ಮೇನಿಯಾ ವಿಶ್ವವಿದ್ಯಾಲಯದ ತಜ್ಞರು.

ಇತ್ತೀಚೆಗೆ ಟಾಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್​​ನಲ್ಲಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಸಮುದ್ರದಲ್ಲಿನ ಹವಳ, ವಿಭಿನ್ನವಾದ ಕಲ್ಲುಗಳು ಮತ್ತು ಮೀನುಗಳ ಬಗ್ಗೆ ಅಧ್ಯಯನಕ್ಕಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪಿಂಕ್ ಹ್ಯಾಂಡ್​ಫಿಶ್ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ.

ಇನ್ನು ತಾಸ್ಮೇನಿಯಾ ಕರಾವಳಿಯಲ್ಲಿ ಕಂಡು ಬರುವ ಈ ಪಿಂಕ್​ ಹ್ಯಾಂಡ್​ ಫಿಶ್ 15 ಮೀಟರ್ ಆಳದಿಂದ ಸುಮಾರು 40 ಮೀಟರ್ ಆಳದ ವರೆಗೆ ವಾಸ ಮಾಡುತ್ತದೆ. ಈಗ 120 ಮೀಟರ್ ಆಳದಲ್ಲಿ ಈ ಮೀನು ಪತ್ತೆಯಾಗಿದ್ದು, ಇದಕ್ಕೂ ಮೊದಲು ಇಷ್ಟು ಆಳದಲ್ಲಿ ಪತ್ತೆಯಾಗಿರಲಿಲ್ಲ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಈ ಮೊದಲು 1999ರಲ್ಲಿ 20ರಿಂದ 30 ಮೀಟರ್ ಆಳದಲ್ಲಿ ಕಂಡುಬಂದಿದ್ದ ಮೀನು, ಅದಕ್ಕೂ ಮುನ್ನ ಕೇವಲ ಸಮುದ್ರದ 10 ಮೀಟರ್ ಆಳದಲ್ಲಿ ಕಂಡುಬಂದಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೃಹತ್ ಗಾತ್ರದ ಜೇಮ್ಸ್​ ವೆಬ್ ಟೆಲಿಸ್ಕೋಪ್ ಉಡಾವಣೆ : ಗರಿಗೆದರಿದ ಮಹತ್ವಾಕಾಂಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.