ETV Bharat / science-and-technology

ಶಾರ್ಕ್​ ಪ್ರತಿಕಾಯಗಳಲ್ಲಿನ ಪ್ರೋಟೀನ್​​​​ನಿಂದ ಕೊರೊನಾಕ್ಕೆ ತಡೆ: ಸಂಶೋಧನೆ

ಶಾರ್ಕ್‌ಗಳ ದೇಹದಲ್ಲಿರುವ ಪ್ರತಿಕಾಯಗಳಲ್ಲಿರುವ ಪ್ರೋಟೀನ್ ಕೊರೊನಾ ಮತ್ತು ಕೊರೊನಾ ರೂಪಾಂತರ ವೈರಸ್​ಗಳು ಮಾನವ ಜೀವಕೋಶಕ್ಕೆ ಸೋಂಕು ತಗುಲದಂತೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

Proteins from Shark antibodies may help prevent COVID-19
ಶಾರ್ಕ್​ ಪ್ರತಿಕಾಯಗಳಲ್ಲಿನ ಪ್ರೋಟೀನ್ ಕೊರೊನಾ ತಡೆಯಲು ಯಶಸ್ವಿ: ಸಂಶೋಧನೆ
author img

By

Published : Dec 17, 2021, 3:27 PM IST

ಕೊರೊನಾ ತಡೆಯಲು ಅನೇಕ ದೇಶಗಳು ವಿಧ ವಿಧವಾದ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿವೆ. ಇನ್ನು ಮಕ್ಕಳಿಗೆ ಲಸಿಕೆ ಕಂಡುಹಿಡಿಯಲು ಅನೇಕ ಪ್ರಯೋಗಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಕುತೂಹಲಕಾರಿ ವಿಚಾರವೊಂದು ಹೊರ ಬಿದ್ದಿದೆ. ಸಮುದ್ರ, ಸಾಗರಗಳಲ್ಲಿ ವಾಸ ಮಾಡುವ ಜೀವಿಗಳ ದೇಹದಲ್ಲಿರುವ ಪ್ರತಿಕಾಯಗಳು (Antibodies) ಕೊರೊನಾ ತಡೆಯಲು ಸಹಕಾರಿಯಾಗಿವೆ ಎಂಬ ವಿಷಯ ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಹೌದು, ಶಾರ್ಕ್‌ಗಳ ದೇಹದಲ್ಲಿರುವ ಪ್ರತಿಕಾಯಗಳಲ್ಲಿರುವ ಪ್ರೋಟೀನ್ ಕೊರೊನಾ ಮತ್ತು ಕೊರೊನಾ ರೂಪಾಂತರ ವೈರಸ್​ಗಳು ಮಾನವ ಜೀವಕೋಶಕ್ಕೆ ಸೋಂಕು ತಗುಲದಂತೆ ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದ್ದು, ಅಚ್ಚರಿ ಮೂಡಿಸುಂತಿದೆ.

ಶಾರ್ಕ್​ಗಳಲ್ಲಿರುವ ಪ್ರತಿಕಾಯಗಳಲ್ಲಿರುವ ಪ್ರೋಟೀನ್ ಅನ್ನು ವಿಎನ್​ಎಆರ್ (VNAR) ಎಂದು ಕರೆಯಲಾಗುತ್ತದೆ. ಈ ಪ್ರೋಟೀನ್ ಗಾತ್ರದಲ್ಲಿ ಮಾನವ ಪ್ರತಿಕಾಯಗಳ ಹತ್ತನೇ ಒಂದು ಭಾಗದಷ್ಟಿದ್ದು, ಸೋಂಕು ತಡೆಯುವ ಸಾಮರ್ಥ್ಯ ಹೊಂದಿರುತ್ತವೆ.

ಈ ಪ್ರತಿಕಾಯಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಿ, ಮಾನವನಿಗೆ ನೀಡಬಹುದಾಗಿದೆ. ಅಷ್ಟೇ ಅಲ್ಲದೆ ಈಗ ಸೋಂಕು ತಡೆಯಲು ನೀಡುತ್ತಿರುವ ಔಷಧಗಳಿಗಿಂತ ಇದು ಅಗ್ಗವಾಗಿದ್ದು, ಚುಚ್ಚುಮದ್ದು, ಲಸಿಕೆ ಅಥವಾ ಬೇರೆ ಬೇರೆ ಮಾದರಿಗಳಲ್ಲಿ ಮಾನವನ ದೇಹಕ್ಕೆ ತಲುಪಿಸಬಹುದಾಗಿದೆ. ಆದರೆ, ಇನ್ನೂ ಮಾನವನ ದೇಹಕ್ಕೆ ನೀಡಿ ಪರೀಕ್ಷೆ ನಡೆಸುವುದು ಬಾಕಿಯಿದೆ.

ವಿಸ್ಕಾನ್ಸಿನ್ - ಮ್ಯಾಡಿಸನ್ ವಿಶ್ವವಿದ್ಯಾನಿಲಯದ (University of Wisconsin-Madison) ಸಂಶೋಧಕರು ಶಾರ್ಕ್​ ಪ್ರೋಟೀನ್​ಗಳು WIV1-CoV ಎಂಬ ಕೋವಿಡ್​ ಸೋಂಕನ್ನು ನಿಷ್ಕ್ರಿಯಗೊಳಿಸಲು ಸಹಕಾರಿ ಎಂದು ಸಂಶೋಧಿಸಿದ್ದಾರೆ.. ಈ WIV1-CoV ಕೋವಿಡ್ ಸೋಂಕು ಮಾನವ ಜೀವಕೋಶಗಳಿಗೆ ತಗಲುವ ಸೋಂಕು ಆಗಿದ್ದು, ಸದ್ಯಕ್ಕೆ ಬಾವಲಿಗಳಿಂದ ಮಾತ್ರ ಹರಡುತ್ತದೆ..

ಕೊರೊನಾ ರೂಪಾಂತರಗಳದ್ದೇ ಸಮಸ್ಯೆ: ಈಗ ಶಾರ್ಕ್​ನ ಪ್ರತಿಕಾಯದ ಪ್ರೋಟೀನ್​ನಿಂದ WIV1-CoV ಕೋವಿಡ್ ಸೋಂಕನ್ನು ತಡೆಯಬಹುದು ಎಂಬ ಸಂಶೋಧನೆ ನಡೆದಿದೆಯಾದರೂ, ಈಗಿರುವ SARS-CoV-2 ಕೋವಿಡ್​​ಗೆ ಲಸಿಕೆ ತಯಾರಿಸಬಹುದು ಎಂಬ ಹುಮ್ಮಸ್ಸಿನಲ್ಲಿ ವಿಜ್ಞಾನಿಗಳಿದ್ದಾರೆ. ಈಗ ಕೋವಿಡ್ ರೂಪಾಂತರ ವೈರಸ್​ಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ವಿರುದ್ಧವೂ ಈ ಪ್ರೋಟೀನ್ ಕೆಲಸ ಮಾಡುತ್ತದೆ ಎಂಬ ಅನುಮಾನ ಸಂಶೋಧಕರನ್ನು ಕಾಡುತ್ತಿದೆ.

ಮುಂದೊಂದು ದಿನ ಎಲ್ಲ ಕೋವಿಡ್ ರೂಪಾಂತರಗಳಿಗೂ ಈ ಔಷಧ ಬಳಸುವ ಸಾಧ್ಯತೆ ಇದೆ ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯ ರೋಗಶಾಸ್ತ್ರದ ಪ್ರಾಧ್ಯಾಪಕ ಆ್ಯರನ್ ಲೆಬ್ಯೂ ಅಭಿಪ್ರಾಯಪಟ್ಟಿದ್ದು, ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಈ ಸಂಶೋಧನೆಯನ್ನು ಪ್ರಕಟ ಮಾಡಲಾಗಿದೆ.

ಏನಿದು WIV1-CoV ?

WIV1-CoV, ಇದು ಕೂಡಾ ಕೊರೊನಾ ವೈರಸ್ ಆಗಿದ್ದು, Bat SL-CoV-WIV1 ಎಂದೂ ಕರೆಯಲಾಗುತ್ತದೆ. ಚೀನಾದಲ್ಲಿ 2013ರಲ್ಲಿ ಈ ವೈರಸ್ ಪತ್ತೆಯಾಗಿದ್ದು, ಬಾವಲಿಯಿಂದ ಈ ಕೊರೊನಾ ವೈರಸ್ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್ ಹರಡುವುದಿಲ್ಲವಾದರೂ, ಈಗಿನ SARS-CoV-2 ಲಕ್ಷಣಗಳೇ ಸೋಂಕಿತ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.