ETV Bharat / science-and-technology

ಎಸ್​ಐಐ ಸಿಇಒ ಅದಾರ್ ಪೂನಾವಾಲಾಗೆ ‘ದಿ ಏಷಿಯನ್ ಆಫ್ ದಿ ಇಯರ್’ ಪ್ರಶಸ್ತಿ - ಚೀನಾದ ಸಂಶೋಧಕ ಜಾಂಗ್ ಯಾಂಗ್ ಜೆನ್

‘ನಿಮ್ಮ ಧೈರ್ಯ, ಕಾಳಜಿ, ಬದ್ಧತೆ ಮತ್ತು ಸೃಜನಶೀಲತೆಯನ್ನು ನಾವು ಗೌರವಿಸುತ್ತೇವೆ. ನೀವು ಏಷ್ಯಾ ಮತ್ತು ಪ್ರಪಂಚಕ್ಕೆ ಭರವಸೆಯ ಸಂಕೇತ’ ಎಂದು ಪ್ರಶಸ್ತಿ ಪುರಸ್ಕೃತರನ್ನು ದಿ ಸ್ಟ್ರೈಟ್ ಟೈಮ್ಸ್ ಪತ್ರಿಕೆ ಶ್ಲಾಘಿಸಿದೆ..

Singapore daily
ಅದಾರ್ ಪೂನಾವಾಲಾ
author img

By

Published : Dec 5, 2020, 12:58 PM IST

Updated : Feb 16, 2021, 7:53 PM IST

ಸಿಂಗಪುರ್ : ಪುಣೆ ಮೂಲದ ಸೀರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ದಿ ಏಷಿಯನ್ ಆಫ್ ದಿ ಇಯರ್​ಗೆ ಭಾಜನರಾಗಿದ್ದಾರೆ. ವಿವಿಧ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ತಯಾರಿಸುತ್ತಿರುವ ಏಷ್ಯನ್​ನ ಆರು ಜನರಲ್ಲಿ ಇವರೂ ಒಬ್ಬರು ಎಂದು ಸಿಂಗಪುರ್​ನ ದಿ ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ.

ಆಕ್ಸ್​​ಫರ್ಡ್​​ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವೀಡಿಷ್ ಔಷಧೀಯ ಕಂಪನಿ ಆಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆಯನ್ನು ಸೀರಮ್ ಇನ್ಸ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ಸಾರ್ಸ್​ ಕೋವ್-2 ವೈರಸ್ ರಚನೆಯನ್ನು ತಳಿವಿಜ್ಞಾನ ಆಧಾರದಲ್ಲಿ ವಿಶ್ಲೇಷಿಸಿ, ಆನ್​ಲೈನ್​ನಲ್ಲಿ ಪ್ರಕಟಿಸಿದ ಚೀನಾದ ಸಂಶೋಧಕ ಜಾಂಗ್ ಯಾಂಗ್ ಜೆನ್, ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ತಜ್ಞರಾದ ಚೆನ್​ವಿ, ಜಪಾನಿನ ಡಾ.ರಿಯಿಚಿ ಮೋರಿಶಿಟ, ಸಿಂಗಾಪುರದ ಪ್ರೊ.ಊಯಿ ಎಂಗ್ ಇಯಾಂಗ್, ದಕ್ಷಿಣ ಕೊರಿಯಾದ ಉದ್ಯಮಿ ಸಿಯೊ ಜಂಗ್-ಜಿನ್ ಕೂಡ ಏಷಿಯನ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ನಿಮ್ಮ ಧೈರ್ಯ, ಕಾಳಜಿ, ಬದ್ಧತೆ ಮತ್ತು ಸೃಜನಶೀಲತೆಯನ್ನು ನಾವು ಗೌರವಿಸುತ್ತೇವೆ. ನೀವು ಏಷ್ಯಾ ಮತ್ತು ಪ್ರಪಂಚಕ್ಕೆ ಭರವಸೆಯ ಸಂಕೇತ’ ಎಂದು ಪ್ರಶಸ್ತಿ ಪುರಸ್ಕೃತರನ್ನು ದಿ ಸ್ಟ್ರೈಟ್ ಟೈಮ್ಸ್ ಪತ್ರಿಕೆ ಶ್ಲಾಘಿಸಿದೆ.

ಇದನ್ನೂ ಓದಿ: ಸುಧಾರಣೆ, ನಿರ್ವಹಣೆ, ರೂಪಾಂತರ ತತ್ವಕ್ಕೆ ಸರ್ಕಾರ ಬದ್ಧವಾಗಿದೆ: ಮೋದಿ

1966ರಲ್ಲಿ ಅದಾರ್ ಅವರ ತಂದೆ ಸೈರಸ್ ಪೂನಾವಲ್ಲಾ ಸೀರಮ್ ಇನ್ಸ್​ಟಿಟ್ಯೂಟ್ ಅನ್ನು ಸ್ಥಾಪಿಸಿದ್ದರು. 2001ರಲ್ಲಿ ಪೂನಾವಲ್ಲಾ ಅಧಿಕೃತವಾಗಿ ಎಸ್​ಐಐಗೆ ಸಿಇಒ ಆಗಿ ಸೇರಿದರು. ಸೀರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾಗೆ ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಲಸಿಕೆ ತಯಾರಿಕೆ ಬಗ್ಗೆ ಪರಿಶೀಲನೆ ನಡೆಸಿದ್ದರು.

Last Updated : Feb 16, 2021, 7:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.