ETV Bharat / science-and-technology

ಟ್ವಿಟರ್ ಬ್ಲೂ ಚೆಕ್​ ಚಂದಾದಾರಿಕೆ ತ್ಯಜಿಸಿದ ಅರ್ಧದಷ್ಟು ಬಳಕೆದಾರರು! - ಪ್ರತಿಯೊಬ್ಬ ಬಳಕೆದಾರರು ಶುಲ್ಕ

ತಿಂಗಳಿಗೆ 8 ಡಾಲರ್​ ಪಾವತಿಸಿದ ಟ್ವಿಟರ್ ಬ್ಲೂ ಚೆಕ್​ ಆರಂಭಿಕ ಚಂದಾದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚಂದಾದಾರಿಕೆ ಮತ್ತು ಬ್ಲೂ ಚೆಕ್ ಮಾರ್ಕ್‌ಗಳನ್ನು ತ್ಯಜಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Over half of Twitter Blue's earliest subscribers not paying anymore
ಟ್ವಿಟರ್ ಬ್ಲೂನ ಚಂದಾದಾರಿಕೆ ತ್ಯಜಿಸಿದ ಅರ್ಧದಷ್ಟು ಚಂದಾದಾರರು!
author img

By

Published : May 6, 2023, 10:42 PM IST

ನವದೆಹಲಿ: ತಿಂಗಳಿಗೆ 8 ಡಾಲರ್ ಪಾವತಿಸಿದ ಟ್ವಿಟರ್ ಬ್ಲೂ ಚೆಕ್​ ಆರಂಭಿಕ ಚಂದಾದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚಂದಾದಾರಿಕೆಯನ್ನು ಮತ್ತು ಬ್ಲೂ ಚೆಕ್ ಮಾರ್ಕ್​ಗಳನ್ನು ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಮ್ಯಾಶಬಲ್ ವರದಿಯ ಪ್ರಕಾರ, ಸುಮಾರು 150,000 ಆರಂಭಿಕ ಟ್ವಿಟರ್ ಬ್ಲೂ ಚಂದಾದಾರರಲ್ಲಿ, ಕೇವಲ 68,157 ಜನರು ಏಪ್ರಿಲ್ 30 ರವರೆಗೆ ಪಾವತಿಸಿದ ಚಂದಾದಾರಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

ಸ್ವತಂತ್ರ ಸಂಶೋಧಕ ಟ್ರಾವಿಸ್ ಬ್ರೌನ್ ಸ್ಕ್ರ್ಯಾಪ್ ಅವರು ಕಲೆಹಾಕಿದ ಮಾಹಿತಿಯನ್ನು ಆಧರಿಸಿ, ಹೆಚ್ಚಿನ ಟ್ವಿಟರ್ ಬ್ಲೂ ಚಂದಾದಾರರು ಬ್ಲೂ ಚೆಕ್ ಟಿಕ್​ ಮಾರ್ಕ್​ಗಳನ್ನು ತ್ಯಜಿಸಿದ್ದಾರೆ ಎಂದು ವರದಿ ಹೇಳಿದೆ. ವರದಿಯಲ್ಲಿ ಉಲ್ಲೇಖಿಸಲಾದ ಸಂಖ್ಯೆಗಳ ಬಗ್ಗೆ ಎಲಾನ್ ಮಸ್ಕ್ ಅಥವಾ ಟ್ವಿಟರ್ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ವರ್ಷದ ವರದಿಗಳ ಪ್ರಕಾರ, ನವೆಂಬರ್​ನಲ್ಲಿ ಟ್ವಿಟರ್ ಬ್ಲೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಟ್ಟು 150,000 ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ತಿಳಿಸಿದೆ.

ವರದಿಯ ಪ್ರಕಾರ, ಆರಂಭದಲ್ಲಿ ಟ್ವಿಟರ್ ಬ್ಲೂಗೆ ಚಂದಾದಾರರಾಗಿದ್ದ ಸುಮಾರು 81,843 ಬಳಕೆದಾರರು ಅಥವಾ ಶೇಕಡಾ 54.5 ರಷ್ಟು ಟ್ವಿಟರ್ ಬಳಕೆದಾರರು ಚಂದಾದಾರಿಕೆಯನ್ನು ರದ್ದುಗೊಳಿಸಿದ್ದಾರೆ. ಇದು ಆನ್ಲೈನ್ ಚಂದಾದಾರಿಕೆ ಸೇವೆಯಲ್ಲಿಯೇ ಹೆಚ್ಚಿನ ದರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 20 ರಿಂದ ಟ್ವಿಟರ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರು ಶುಲ್ಕ ಪಾವತಿಸಬೇಕೇಂದು ಮಸ್ಕ್ ಹೇಳಿದ್ದರು. ಹಿಂದಿನ ವರದಿಯೊಂದು ಬ್ಲೂ ಸೇವೆಯ ಅರ್ಧದಷ್ಟು ಚಂದಾದಾರರು ಪ್ಲಾಟ್‌ಫಾರ್ಮ್‌ನಲ್ಲಿ 1,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿತ್ತು.

ಇದಲ್ಲದೆ, ಶೂನ್ಯ ಅನುಯಾಯಿಗಳನ್ನು ಹೊಂದಿರುವ 2,270 ಪಾವತಿಸುವ ಟ್ವಿಟರ್ ಬ್ಲೂ ಚೆಕ್​ ಚಂದಾದಾರರಿದ್ದರು. ಬ್ರೌನ್ ಪ್ರಕಾರ, ಟ್ವಿಟರ್ ಬ್ಲೂ ಪ್ರಸ್ತುತ ಒಟ್ಟು 444,435 ಪಾವತಿಸುವ ಚಂದಾದಾರರನ್ನು ಹೊಂದಿದೆ. ಎಲ್ಲಾ ಪಾವತಿಸಿದ ಟ್ವಿಟರ್ ಚಂದಾದಾರರಲ್ಲಿ ಸುಮಾರು ಅರ್ಧದಷ್ಟು (ಸುಮಾರು 220,132 ಬಳಕೆದಾರರು) 1,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದಾರೆ. ಏಪ್ರಿಲ್ 20 ರಂದು, ಮಸ್ಕ್ ಅಂತಿಮವಾಗಿ ಬ್ಲೂ ಚೆಕ್ ಮಾರ್ಕ್ ಹೊಂದಿರುವ ಪಾವತಿಸದ ಖಾತೆಗಳನ್ನು ತೆಗೆದುಹಾಕಿ ಕೆಲವು ಸೆಲೆಬ್ರಿಟಿಗಳಿಗೆ ಅದನ್ನು ಉಳಿಸಿಕೊಳ್ಳಲು ಅವಕಾಶ ನೀಡಿತು. ಭಾರತದಲ್ಲಿ, ಬ್ಲೂ ವೆರಿಫೈಡ್ ಸ್ಟೇಟಸ್ ಪಡೆಯಲು ಟ್ವಿಟರ್ ಬಳಕೆದಾರರು ತಿಂಗಳಿಗೆ 900 ರೂ.ಗಳನ್ನು (ಅಥವಾ ವರ್ಷಕ್ಕೆ 9,400 ರೂ.) ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:ವಿವೋ X90 ಸರಣಿ ಬಿಡುಗಡೆ: ಉತ್ಕೃಷ್ಟ ಮಟ್ಟದ ಕ್ಯಾಮೆರಾವೇ ಇದರ ಪ್ಲಸ್​ ಪಾಯಿಂಟ್​​

ನ್ಯೂಸ್ ನೋಡಲು ಅತಿ ಜನಪ್ರಿಯ ಪ್ಲಾಟ್​ಫಾರ್ಮ್ ಯೂಟ್ಯೂಬ್: ಭಾರತೀಯ ಭಾಷೆಗಳಲ್ಲಿ ಸುದ್ದಿ ನೋಡಲು ಯೂಟ್ಯೂಬ್ ಅತ್ಯಂತ ಜನಪ್ರಿಯ ಪ್ಲಾಟ್​ಫಾರ್ಮ್ ಆಗಿ ಹೊರಹೊಮ್ಮಿದೆ ಎಂದು ಗುರುವಾರ ಅಧ್ಯಯನ ವರದಿಯೊಂದು ಹೇಳಿದೆ. ಸುದ್ದಿ ನೋಡಲು ಬಯಸುವವರ ಪೈಕಿ ಶೇಕಡಾ 93 ರಷ್ಟು ಜನ ಯೂಟ್ಯೂಬ್​​ ವೀಕ್ಷಿಸುತ್ತಾರೆ ಎಂದು ವರದಿ ತಿಳಿಸಿದೆ. ದೇಶದಲ್ಲಿನ ಆನ್‌ಲೈನ್ ಭಾರತೀಯ ಭಾಷಾ ಸುದ್ದಿ ಗ್ರಾಹಕರ ವಿಭಿನ್ನ ಸುದ್ದಿ ವಿಷಯ ಬಳಕೆಯ ಆದ್ಯತೆಗಳು ಮತ್ತು ನಡವಳಿಕೆಗಳ ಬಗ್ಗೆ, ಮಾರ್ಕೆಟಿಂಗ್ ಡೇಟಾ ಮತ್ತು ಅನಲಿಟಿಕ್ಸ್​ ಸಂಸ್ಥೆಯಾಗಿರುವ ಕಾಂಟಾರ್​ ಇದು ಗೂಗಲ್ ನ್ಯೂಸ್​ ಇನಿಶಿಯೇಟಿವ್ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.