ನವದೆಹಲಿ : ಚಾಟ್ ಜಿಪಿಟಿಯ ಯಶಸ್ಸಿನ ನಂತರ, ಗೂಗಲ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಎಐ ಚಾಟ್‌ಬಾಟ್ (AI Chatbot) ಅಥವಾ ಎಐ ಚಾಟ್ (AI Chat) ಎಂಬ ಹೆಸರಿನ ಅಥವಾ ಆ ಶಬ್ದಗಳನ್ನು ತಮ್ಮ ಹೆಸರಿನಲ್ಲಿ ಅಥವಾ ವಿವರಣೆಯಲ್ಲಿ ಒಳಗೊಂಡಿರುವ ಆ್ಯಪ್ಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಸಕ್ತ ತ್ರೈಮಾಸಿಕದಲ್ಲಿ ಶೇಕಡಾ 1480 ರಷ್ಟು ಏರಿಕೆಯಾಗಿದೆ. ಈ ವರ್ಷದ ಮಾರ್ಚ್ವರೆಗೆ ಇಂಥ ಹೊಸ 158 ಆ್ಯಪ್ಗಳು ಆ್ಯಪ್ ಸ್ಟೋರ್ನಲ್ಲಿ ಲಿಸ್ಟ್ ಆಗಿವೆ ಎಂದು ವರದಿ ತಿಳಿಸಿದೆ. ಮೊದಲ ತ್ರೈಮಾಸಿಕದಲ್ಲಿ AI ಚಾಟ್‌ಬಾಟ್ ಅಪ್ಲಿಕೇಶನ್‌ಗಳ ಡೌನ್‌ಲೋಡ್‌ಗಳು ಶೇಕಡಾ 1,506 ರಷ್ಟು ಹೆಚ್ಚಾಗಿವೆ ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿ (ಐಎಪಿ) ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 4,184 ರಷ್ಟು ಏರಿಕೆಯಾಗಿದೆ.
ಓಪನ್ ಎಐ ನ ಚಾಟ್ ಜಿಪಿಟಿಯು ಸಾರ್ವಜನಿಕವಾಗಿ ಬಿಡುಗಡೆಯಾದ ನಂತರ ಜನರ ಮುಂದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯದಲ್ಲಿ ಮೊಬೈಲ್ ಆ್ಯಪ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಗಣಿತ ಅವಕಾಶಗಳು ತೆರೆದುಕೊಂಡಿವೆ. ಆ್ಯಪ್ಟೋಪಿಯಾ ಕಂಪನಿಯ ವೈಸ್ ಪ್ರೆಸಿಡೆಂಟ್ ಆ್ಯಡಮ್ ಬ್ಲ್ಯಾಕರ್ ಹೇಳಿದರು. ಟಾಪ್ 10 AI ಚಾಟ್‌ಬಾಟ್ ಅಪ್ಲಿಕೇಶನ್‌ಗಳು ಎಲ್ಲ AI ಚಾಟ್‌ಬಾಟ್ ಅಪ್ಲಿಕೇಶನ್ ಡೌನ್‌ಲೋಡ್‌ಗಳಲ್ಲಿ 52 ಪ್ರತಿಶತ ಮತ್ತು Q1 2023 ರಲ್ಲಿ ಅವುಗಳ IAP ಆದಾಯದ 72 ಪ್ರತಿಶತಕ್ಕೆ ಕಾರಣವಾಗಿವೆ. ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಸ್ವತಂತ್ರ ಡೆವಲಪರ್‌ಗಳಿಂದ ತಯಾರಿಸಲ್ಪಟ್ಟಿವೆ. ಆದರೆ, ಅಂತಿಮವಾಗಿ ಇವು ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ದೊಡ್ಡ ಬ್ರ್ಯಾಂಡ್‌ಗಳು ಈ ಚಿಕ್ಕ ಕಂಪನಿಗಳನ್ನು ಮೀರಿಸಿ ಬೆಳೆಯುವ ಸಾಧ್ಯತೆಗಳಿವೆ.
ಮೈಕ್ರೊಸಾಫ್ಟ್ನ ಸರ್ಚ್ ಎಂಜಿನ್ ಅಪ್ಲಿಕೇಶನ್ ಅನ್ನು ಈಗಾಗಲೇ Bing -ನಿಮ್ಮ AI ಕಾಪಿಲಟ್ ಎಂದು ಮರುಬ್ರಾಂಡ್ ಮಾಡಲಾಗಿದೆ. ಓಪನ್ ಎಐನ ಚಾಟ್‌ಜಿಪಿಟಿಯೊಂದಿಗೆ ಬಿಂಗ್‌ನ ಸಂಯೋಜನೆಯ ನಂತರ ಬಿಂಗ್‌ನ ಸರಾಸರಿ ದೈನಂದಿನ ಡೌನ್‌ಲೋಡ್‌ಗಳು ಶೇಕಡಾ 1,000 ರಷ್ಟು ಹೆಚ್ಚಾಗಿವೆ ಎಂದು ವರದಿ ಉಲ್ಲೇಖಿಸಿದೆ. ಕೃತಕ ಬುದ್ಧಿಮತ್ತೆ ಎಂಬ ಪದವನ್ನು 1956 ರಲ್ಲಿ ಪ್ರಥಮ ಬಾರಿಗೆ ಪರಿಚಯಿಸಲಾಯಿತು. ಆದರೆ, ಹೆಚ್ಚಿದ ಡೇಟಾ ಪರಿಮಾಣಗಳು, ಸುಧಾರಿತ ಅಲ್ಗಾರಿದಮ್ ಮತ್ತು ಕಂಪ್ಯೂಟಿಂಗ್ ಶಕ್ತಿ ಮತ್ತು ಸಂಗ್ರಹಣೆಯಲ್ಲಿನ ಸುಧಾರಣೆಗಳಿಂದಾಗಿ AI ಇಂದು ಹೆಚ್ಚು ಜನಪ್ರಿಯವಾಗಿದೆ.
1950 ರ ದಶಕದ ಆರಂಭಿಕ AI ಸಂಶೋಧನೆಯು ಸಮಸ್ಯೆ ಪರಿಹಾರ ಮತ್ತು ಸಾಂಕೇತಿಕ ವಿಧಾನಗಳಂತಹ ವಿಷಯಗಳನ್ನು ಪರಿಶೋಧಿಸಿತು. 1960ರ ದಶಕದಲ್ಲಿ, ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿತು ಮತ್ತು ಮೂಲ ಮಾನವ ತಾರ್ಕಿಕತೆಯನ್ನು ಅನುಕರಿಸಲು ಕಂಪ್ಯೂಟರುಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು. ಉದಾಹರಣೆಗೆ, ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (DARPA) 1970 ರ ದಶಕದಲ್ಲಿ ಸ್ಟ್ರೀಟ್ ಮ್ಯಾಪಿಂಗ್ ಯೋಜನೆಗಳನ್ನು ಪೂರ್ಣಗೊಳಿಸಿತು ಮತ್ತು DARPA 2003 ರಲ್ಲಿ ಇಂಟೆಲಿಜೆಂಟ್ ಹ್ಯೂಮನ್ ಅಸಿಸ್ಟಂಟ್ಗಳನ್ನು ತಯಾರಿಸಿತು. ಸಿರಿ, ಅಲೆಕ್ಸಾ ಅಥವಾ ಕೊರ್ಟಾನಾ ಮುಂತಾದ ಎಐ ಅಸಿಸ್ಟಂಟ್ಗಳು ಪ್ರತಿಯೊಬ್ಬರಿಗೂ ಚಿರಪರಿಚಿತವಾದವು.
ಇದನ್ನೂ ಓದಿ : ಮೇಘಾಲಯದ ಗುಹೆಗಳಲ್ಲಿ ಹೊಸ ಪ್ರಭೇದದ ಕಪ್ಪೆ ಪತ್ತೆ.. ಏನಿದರ ವಿಶೇಷತೆ?