ETV Bharat / science-and-technology

ಮನುಷ್ಯರಂತೆ ಕೆಲಸ ಮಾಡುವ 'ಆಪ್ಟಿಮಸ್​'; ಇದು ಟೆಸ್ಲಾದ ಹ್ಯೂಮನಾಯ್ಡ್ ರೋಬೋಟ್ - ಟೆಸ್ಲಾದ ಕಾರುಗಳಲ್ಲಿನ ಸುಧಾರಿತ ಚಾಲಕ ಸಹಾಯ

ಮಾನವನಂತೆಯೇ ಕೆಲಸ ಮಾಡುವ ವಿಶಿಷ್ಟ ರೋಬೋಟ್​ ಅನ್ನು ಟೆಸ್ಲಾ ತಯಾರಿಸಿದೆ.

Musk showcases Tesla humanoid robot performing Yoga, Namaste

author img

By ETV Bharat Karnataka Team

Published : Sep 25, 2023, 12:45 PM IST

ನವದೆಹಲಿ: ಥೇಟ್ ಮಾನವನಂತೆಯೇ ವರ್ತಿಸುವ ಹಾಗೂ ಕೆಲಸ ಮಾಡುವ ವಿಶಿಷ್ಟ ರೋಬೋಟ್ ಒಂದನ್ನು ಟೆಸ್ಲಾ ತಯಾರಿಸಿದೆ. ಟೆಸ್ಲಾದ ಮಾನವನ ತದ್ರೂಪಿ ಹ್ಯೂಮನಾಯ್ಡ್ ರೋಬೋಟ್ 'ಆಪ್ಟಿಮಸ್' ಅನ್ನು ಎಲೋನ್ ಮಸ್ಕ್ ಸೋಮವಾರ ಪ್ರದರ್ಶಿಸಿದರು. ವಿಭಿನ್ನ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದ ಈ ರೋಬೋಟ್ ನೆರೆದ ಜನರನ್ನು ನಮಸ್ತೆ ಎಂದು ಸ್ವಾಗತಿಸಿತು.

ಅಕ್ಟೋಬರ್​ನಲ್ಲಿ ನಡೆದ 'ಟೆಸ್ಲಾ ಎಐ ಡೇ' 2022 ರ ಸಂದರ್ಭದಲ್ಲಿ ಮೊದಲ ಬಾರಿಗೆ ಆಪ್ಟಿಮಸ್​ ಅನ್ನು ಜಗತ್ತಿಗೆ ತೋರಿಸಲಾಗಿತ್ತು. ಆಗ ಇದರ ವೀಡಿಯೊ ಒಂದನ್ನು ಎಲೋನ್ ಮಸ್ಕ್ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದರು. ಆಪ್ಟಿಮಸ್​ ಸರಳವಾದ ಕೆಲಸಗಳನ್ನು ಮಾಡುವುದು ವೀಡಿಯೊದಲ್ಲಿ ಕಂಡು ಬಂದಿತ್ತು. ಆಪ್ಟಿಮಸ್ ಈಗ ತನ್ನ ತೋಳುಗಳು ಮತ್ತು ಕಾಲುಗಳನ್ನು ಸ್ವಯಂ ಆಗಿ ಚಲಿಸುವ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ದೃಷ್ಟಿ ಮತ್ತು ಜೋಡಣೆಯ ಸ್ಥಾನ ಎನ್ಕೋಡರ್​ಗಳನ್ನು (joint position encoders) ಮಾತ್ರ ಬಳಸಿಕೊಂಡು, ರೋಬೋಟ್ ಭೂಮಿಯ ಮೇಲೆ ತನ್ನ ಕಾಲುಗಳು ಎಲ್ಲಿವೆ ಎಂಬುದನ್ನು ನಿಖರವಾಗಿ ಕಂಡುಹಿಡಿಯುತ್ತದೆ. ಇದು ಬಣ್ಣದ-ಬ್ಲಾಕ್ ಗಳನ್ನು ವಿಂಗಡಿಸುವುದು ಮತ್ತು ಅವುಗಳನ್ನು ಬೆರೆಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಗಳನ್ನು ಸರಾಗವಾಗಿ ಕಲಿಯುತ್ತದೆ ಮತ್ತು ಅದರ ನರ ಜಾಲವು ಸಂಪೂರ್ಣವಾಗಿ ದೃಷ್ಟಿಯನ್ನು ಬಳಸಿಕೊಂಡು ಚಲಿಸುತ್ತದೆ.

'ಆಟೋಪೈಲಟ್' ಎಂದು ಕರೆಯಲ್ಪಡುವ ಟೆಸ್ಲಾದ ಕಾರುಗಳಲ್ಲಿನ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯಲ್ಲಿರುವ ಅದೇ ಕೃತಕ ಬುದ್ಧಿಮತ್ತೆ (ಎಐ) ಸಾಫ್ಟ್​ವೇರ್ ಮತ್ತು ಸಂವೇದಕಗಳನ್ನು ರೋಬೋಟ್ ಹೊಂದಿದೆ ಮತ್ತು ಇದಕ್ಕೆ ಸುಮಾರು $ 20,000 ವೆಚ್ಚವಾಗಬಹುದು. ಮಿಲಿಯನ್​ಗಟ್ಟಲೆ ಸಂಖ್ಯೆಯಲ್ಲಿ ತಯಾರಿಸಲು ಸಾಧ್ಯವಾಗುವಂತೆ ಹ್ಯೂಮನಾಯ್ಡ್ ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ರೋಬೋಟ್ 2.3 ಕಿಲೋವ್ಯಾಟ್ ಅವರ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಸುಮಾರು ಒಂದು ದಿನದ ಮೌಲ್ಯದ ಕೆಲಸಕ್ಕೆ ಸೂಕ್ತವಾಗಿದೆ. ಟೆಸ್ಲಾದ ಚಿಪ್​​ ಮೂಲಕ ಕೆಲಸ ಮಾಡುವ ಇದು ವೈ-ಫೈ ಮತ್ತು ಎಲ್​ಟಿಇ ಸಂಪರ್ಕವನ್ನು ಹೊಂದಿದೆ. ಇದರ ಮಾನವನಂತಹ ಕೈಗಳು ಜೈವಿಕವಾಗಿ ಪ್ರೇರಿತ ವಿನ್ಯಾಸವಾಗಿದ್ದು, ಕಾರ್ಖಾನೆಗಳು ಮತ್ತು ಇತರ ಸ್ಥಳಗಳಲ್ಲಿ ವಿವಿಧ ಆಕಾರಗಳು ಮತ್ತು ಗಾತ್ರಗಳ ವಸ್ತುಗಳನ್ನು ಎತ್ತಲು ಸೂಕ್ತವಾಗಿವೆ.

ಇದು 20 ಪೌಂಡ್ ತೂಕದ ಚೀಲವನ್ನು ಸಾಗಿಸಲು ಮತ್ತು ಉಪಕರಣಗಳನ್ನು ಬಳಸಲು ಶಕ್ತವಾಗಿದೆ. ವೈರ್ ಲೆಸ್ ಸಂಪರ್ಕ, ಆಡಿಯೊ ಸಪೋರ್ಟ್​ ಮತ್ತು ಹಾರ್ಡ್ ವೇರ್ ಮಟ್ಟದ ಭದ್ರತಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಇದನ್ನೂ ಓದಿ : 'Elon Musk' ಜೀವನಚರಿತ್ರೆ ಪುಸ್ತಕ ಬಿಡುಗಡೆ; ಮಸ್ಕ್​ ಜೀವನದ ರೋಚಕ ಸಂಗತಿಗಳು ಬಹಿರಂಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.