ಸ್ಯಾನ್ ಫ್ರಾನ್ಸಿಸ್ಕೋ: ಬಳಕೆದಾರರಿಗೆ ಮತ್ತಷ್ಟು ಸುಲಭ ಬಳಕೆಯ ಉದ್ದೇಶದಿಂದ ಮೆಟಾ Instagram ನಿಂದ Facebook ಗೆ ರೀಲ್ ಕ್ರಾಸ್ - ಪೋಸ್ಟಿಂಗ್ ಮಾಡುವ ಹೊಸ ಫೀಚರ್ಸ್ ನೀಡಿದೆ.
ಈ ಬಗ್ಗೆ ಮೆಟಾದ ಫೋಟೋ ಶೇರಿಂಗ್ ಪ್ಲಾಟ್ಫಾರ್ಮ್ನ ಆಡಮ್ ಮೊಸ್ಸೆರಿ ಟ್ವೀಟ್ ಮಾಡಿ ಹೊಸ ರೀಲ್ಸ್ ನವೀಕರಣಗಳನ್ನು ಘೋಷಿಸಿದ್ದಾರೆ. ಜನರಿಗೆ ಅನುಕೂಲವಾಗುವಂತೆ ರೀಲ್ಸ್ಗಳನ್ನು ಸುಲಭವಾಗಿ ಹುಡುಕಲು ಮತ್ತು ಹೆಚ್ಚು ಮನರಂಜನೆಯ ವಿಷಯವನ್ನು ಹಂಚಿಕೊಳ್ಳಲು ನೂತನ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ.
ಬಟನ್ ಟ್ಯಾಪ್ ಮೂಲಕ ಹೊಸ ಅಪ್‌ಡೇಟ್ ಮಾಡಿಕೊಳ್ಳಬಹುದು. ಈ ಮೂಲಕ Instagram ನಿಂದ Facebook ಗೆ ರೀಲ್‌ಗಳನ್ನು ಕ್ರಾಸ್-ಪೋಸ್ಟ್ ಮಾಡಿಕೊಳ್ಳಬಹುದು. ಸ್ಟೋರೀಸ್‌ನಲ್ಲಿ ಜನಪ್ರಿಯವಾದ ಆಡ್ ಯುವರ್ಸ್ ಸ್ಟಿಕ್ಕರ್ ಈಗ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ರೀಲ್ಸ್‌ಗೆ ಬರುತ್ತಿದೆ ಎಂದು ಟ್ವೀಟ್ ಮೂಲಕ ಮೊಸ್ಸೇರಿ ತಿಳಿಸಿದ್ದಾರೆ. ಎಲ್ಲ ಅರ್ಹ ಬಳಕೆದಾರರು ಶೀಘ್ರದಲ್ಲೇ ಫೇಸ್‌ಬುಕ್ ಸ್ಟಾರ್ಸ್ ಟಿಪ್ಪಿಂಗ್ ಫಂಕ್ಷನ್‌ಗೆ ಪ್ರವೇಶ ಹೊಂದಿರುತ್ತಾರೆ ಎಂದೂ ತಿಳಿಸಿದ್ದಾರೆ.
ಏತನ್ಮಧ್ಯೆ ಇತ್ತೀಚೆಗೆ ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಹೊಸ 'ಅಲ್ಟ್ರಾ-ಟಾಲ್ ಫೋಟೋಗಳ ಪರೀಕ್ಷೆಯನ್ನು ಪ್ರಾರಂಭಿಸುತ್ತದೆ ಎಂದು ಇದೇ ವೇಳೆ ದೃಢಪಡಿಸಿದೆ.
ಇದನ್ನು ಓದಿ: ಒಮ್ಮೆ ಚಾರ್ಜ್ ಮಾಡಿ 131 ಕಿಮೀ ಓಡಾಡಿ.. ಇದು ಹೊಸ ಎಲೆಕ್ಟ್ರಿಕ್ ಬೈಕ್ನ ವೈಶಿಷ್ಟ್ಯ.. ಬೆಲೆ ಎಷ್ಟು ಗೊತ್ತಾ..