ETV Bharat / science-and-technology

Eating Disorders : ನಿಮ್ಮಲ್ಲಿ ತಿನ್ನುವ ಅಭ್ಯಾಸ ಗೀಳಾಗಿದೆಯೇ?.. ಈ ಚಾಟ್​ಬೋಟ್ ನಿಮ್ಮ ನೆರವಿಗೆ ಬರಲಿದೆ!

author img

By

Published : Jan 8, 2022, 4:18 PM IST

ಇಂಟರ್​ನ್ಯಾಷನಲ್ ಜರ್ನಲ್ ಆಫ್ ಈಟಿಂಗ್ ಡಿಸಾರ್ಡರ್ಸ್ ಸಂಶೋಧನಾ ಲೇಖನವೊಂದನ್ನು ಪ್ರಕಟಿಸಿದೆ. ಈ ಲೇಖನದಲ್ಲಿ ಹೆಚ್ಚಾಗಿ ಆಹಾರ ಸೇವಿಸುವ ಗೀಳನ್ನು ಕಡಿಮೆ ಮಾಡಲು ಚಾಟ್​ಬೋಟ್​ ಸಂಶೋಧನೆಯ ಕುರಿತು ಉಲ್ಲೇಖಿಸಲಾಗಿದೆ..

Now a chatbot to help reduce eating disorders
Eating Disorders: ನಿಮ್ಮಲ್ಲಿ ತಿನ್ನುವ ಅಭ್ಯಾಸ ಗೀಳಾಗಿದೆಯೇ?.. ಈ ಚಾಟ್​ಬೋಟ್ ನಿಮ್ಮ ನೆರವಿಗೆ ಬರಲಿದೆ!

ನ್ಯೂಯಾರ್ಕ್​, ಅಮೆರಿಕ : ಮನುಷ್ಯರ ದೇಹದಲ್ಲಿ ಅಥವಾ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ರೋಗಗಳು ಅಥವಾ ಸಮಸ್ಯೆಗಳು ಒಂದೆರೆಡಲ್ಲ. ಇತ್ತೀಚೆಗಂತೂ ಹೊಸ ಹೊಸ ರೀತಿಯ ರೋಗಗಳು, ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಕೆಲ ಅಸ್ವಸ್ಥತೆಗಳನ್ನು ಹೋಗಲಾಡಿಸಲು ತಂತ್ರಜ್ಞಾನವೂ ನೆರವಾಗುತ್ತಿದೆ.

ಕೆಲವರಲ್ಲಿ ಹೆಚ್ಚಾಗಿ ಊಟ ಮಾಡುವ ಅಭ್ಯಾಸವಿರುತ್ತದೆ. ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚಿಗೆ ತಿಂದರೆ ಅದನ್ನು ಅಸ್ವಸ್ಥತೆ ಅಥವಾ ಡಿಸಾರ್ಡರ್ (Eating disorder) ಎಂದು ಕರೆಯಲಾಗುತ್ತದೆ. ಈ ಡಿಸಾರ್ಡರ್ ಅನ್ನು ಕಡಿಮೆ ಮಾಡಲು ಚಾಟ್​ಬೋಟ್​​ (Chatbot) ಅನ್ನು ನ್ಯೂಯಾರ್ಕ್​ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅಂದಹಾಗೆ ಚಾಟ್​ಬೋಟ್​ ಎಂದರೆ ಒಂದು ರೀತಿಯ ಸಾಫ್ಟ್​ವೇರ್ ಆಗಿದೆ.

ಹೆಚ್ಚಾಗಿ ತಿನ್ನುವ ಅಸ್ವಸ್ಥತೆಯನ್ನು ವೈದ್ಯಕೀಯ ಭಾಷೆಯಲ್ಲಿ ಬಿಂಜ್ ಡಿಸಾರ್ಡರ್ (Binge Disorder) ಎಂದು ಕರೆಯಾಗುತ್ತದೆ. ಈ ವಿಚಾರದಲ್ಲಿ ದೇಹದ ಗಾತ್ರ ಮತ್ತು ಆಕಾರದಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಸಲುವಾಗಿ ಈ ಚಾಟ್​​ಬೋಟ್​ ಅನ್ನು ಅಬಿವೃದ್ಧಿಪಡಿಸಲಾಗಿದೆ ಎಂದು ಅಮೆರಿಕದ ತಂತ್ರಜ್ಞಾನ ವಿಚಾರಗಳಿಗೆ ಸಂಬಂಧಿಸಿದ 'ದ ವರ್ಜ್' ವೆಬ್​ಸೈಟ್ ಉಲ್ಲೇಖಿಸಿದೆ.

ಡಿಜಿಟಲ್ ಮೂಲಕದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲ ಅಸ್ವಸ್ಥತೆಗಳನ್ನು ಸಂಪೂರ್ಣವಾಗಿ ದೂರಮಾಡಬಹುದಾಗಿದೆ. ಈಗ ರೂಪಿಸಿರುವ ಚಾಟ್​ಬೋಟ್ ಸ್ವಯಂಚಾಲಿತವಾಗಿದೆ ಎಂದು ಅಮೆರಿಕದ ಸೇಂಟ್ ಲೂಯಿಸ್​ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ವಿಭಾಗದ​​ ಮನಃಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಎಲ್ಲೆನ್ ಫಿಟ್ಜ್​​ಸಿಮ್ಮೋನ್ಸ್​- ಕ್ರಾಫ್ಟ್​ ಹೇಳಿದ್ದಾರೆ.

ಚಾಟ್​ಬೋಟ್ ಕುರಿತ ಪ್ರಯೋಗ

ಈ ಚಾಟ್​​ಬೋಟ್​ ಅನ್ನು ಅಭಿವೃದ್ಧಿ ಪಡಿಸುವಾಗ ಹಲವು ಮಹಿಳೆಯರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಸಾಮಾನ್ಯ ಸಂದೇಶದ ಮೂಲಕ ಅಥವಾ ಫೇಸ್​ಬುಕ್ ಮೆಸೆಂಜರ್ ಮೂಲಕ ಚಾಟ್​ಬೋಟ್​ಗೆ ಸಂಪರ್ಕ ಪಡೆಯಬಹುದಾಗಿತ್ತು.

ಬಿಂಜ್ ಡಿಸಾರ್ಡರ್ ಇಲ್ಲದವರಾದರೂ ಹೆಚ್ಚು ತಿನ್ನುವ ಅಭ್ಯಾಸವುಳ್ಳವರು, ತಮ್ಮ ದೇಹದ ಆಕಾರ ಮತ್ತು ತೂಕದ ಬಗ್ಗೆ ಕಾಳಜಿ ಉಳ್ಳವರು ಈ ಚಾಟ್​ಬೋಟ್​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಭಾಗವಹಿಸಿದ್ದ ಮಹಿಳೆಯರಿಗೆ ದೇಹದ ತೂಕ ಮತ್ತು ಆರೋಗ್ಯಕರ ಭೋಜನ ಮುಂತಾದ ವಿಚಾರಗಳ ಕುರಿತಾಗಿ ಈ ಚಾಟ್​ಬೋಟ್ ಸಲಹೆ ನೀಡಲಾಗುತ್ತಿತ್ತು.

ಕೆಲವು ತಿಂಗಳ ನಂತರ ಫಲಿತಾಂಶಗಳನ್ನು ಗಮನಿಸಿದಾಗ ಚಾಟ್​ಬೋಟ್​ನಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಹೆಚ್ಚಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಿತ್ತು. ಈ ಸಂಶೋಧನಾ ವರದಿಯನ್ನು ಇಂಟರ್​ನ್ಯಾಷನಲ್ ಜರ್ನಲ್ ಆಫ್ ಈಟಿಂಗ್ ಡಿಸಾರ್ಡರ್ಸ್​​ (International Journal of Eating Disorders)​ ಪ್ರಕಟಿಸಿದೆ.

ಇದನ್ನೂ ಓದಿ: Covid Research: ಪರಸ್ಪರ ನಂಬಿಕೆಯುಳ್ಳ ಸಮುದಾಯಗಳಲ್ಲಿ ಕೊರೊನಾ ಸೋಂಕು, ಸಾವು ಕಡಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.