ETV Bharat / science-and-technology

ಕ್ವಾಂಟಮ್ ಡಾಟ್ಸ್‌ ಆವಿಷ್ಕಾರ: ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್‌ ಗೌರವ

author img

By ETV Bharat Karnataka Team

Published : Oct 4, 2023, 4:05 PM IST

Updated : Oct 4, 2023, 5:27 PM IST

Nobel Prize in Chemistry: ರಸಾಯನಶಾಸ್ತ್ರ ವಿಭಾಗದಲ್ಲಿ ವಿಜ್ಞಾನಿಗಳಾದ ಮೌಂಗಿ ಜಿ.ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಎಂಬವರಿಗೆ ನೊಬೆಲ್​ ಪ್ರಶಸ್ತಿ ಪ್ರಕಟಿಸಲಾಗಿದೆ.

2023 Nobel Prize in Chemistry awarded to Moungi Bawendi, Louis Brus and Alexei Ekimov for discovery of quantum dots
ರಸಾಯನಶಾಸ್ತ್ರದಲ್ಲಿ ಮೌಂಗಿ, ಲೂಯಿಸ್, ಅಲೆಕ್ಸಿಗೆ ನೊಬಲ್​ ಪ್ರಶಸ್ತಿ ಪ್ರಕಟ

ಸ್ಟಾಕ್​ಹೋಮ್​ (ಸ್ವೀಡನ್​): ರಸಾಯನಶಾಸ್ತ್ರ ವಿಭಾಗದ 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಇಂದು ಘೋಷಿಸಲಾಯಿತು. ಮೌಂಗಿ ಜಿ. ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಅವರಿಗೆ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ ಪ್ರಶಸ್ತಿ ಪ್ರಕಟಿಸಿತು.

ಸ್ಟಾಕ್‌ಹೋಮ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಘೋಷಿಸಲಾಯಿತು. ಕ್ವಾಂಟಮ್ ಕಣಗಳ ಆವಿಷ್ಕಾರ ಮತ್ತು ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗಿದೆ. ಈ ಕ್ವಾಂಟಮ್ ನ್ಯಾನೊಪರ್ಟಿಕಲ್ಸ್​ ಎಷ್ಟು ಚಿಕ್ಕವೆಂದರೆ ಅವುಗಳ ಗಾತ್ರವೇ ಅವುಗಳ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಇಂಥ ಸಂಕೀರ್ಣ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ ಪ್ರತಿಷ್ಟಿತ ನೊಬೆಲ್ ಬಂದಿದೆ.

  • BREAKING NEWS
    The Royal Swedish Academy of Sciences has decided to award the 2023 #NobelPrize in Chemistry to Moungi G. Bawendi, Louis E. Brus and Alexei I. Ekimov “for the discovery and synthesis of quantum dots.” pic.twitter.com/qJCXc72Dj8

    — The Nobel Prize (@NobelPrize) October 4, 2023 " class="align-text-top noRightClick twitterSection" data=" ">

ಕ್ವಾಂಟಮ್ ಕಣಗಳ ಬಳಕೆ ಹೇಗೆ?: ಈ ಕಣಗಳು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ದೂರದರ್ಶನ ಪರದೆಗಳು ಮತ್ತು ಎಲ್ಇಡಿ ದೀಪಗಳಲ್ಲೂ ತಮ್ಮ ಬೆಳಕನ್ನು ಹರಿಸುವ ಸಾಮರ್ಥ್ಯ ಹೊಂದಿವೆ. ಕ್ವಾಂಟಮ್ ಡಾಟ್‌ಗಳನ್ನು ಬಣ್ಣದ ಲೈಟ್​ಗಳಿಗೆ ಸಂಶೋಧಕರು ಈ ಮೊದಲು ಬಳಸಿದ್ದರು. ಭವಿಷ್ಯದಲ್ಲಿ ಈ ಕಣಗಳು ಎಲೆಕ್ಟ್ರಾನಿಕ್ಸ್​, ಸಣ್ಣ ಸಂವೇದಕಗಳು, ಸ್ಲಿಮ್ಮರ್ ಸೌರ ಕೋಶಗಳು ಮತ್ತು ಬಹುಶಃ ಎನ್‌ಕ್ರಿಪ್ಟ್ ಮಾಡಿದ ಕ್ವಾಂಟಮ್ ಸಂವಹನಕ್ಕೂ ಕೊಡುಗೆ ನೀಡಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ, ಗೆಡ್ಡೆಯ ಶಸ್ತ್ರಚಿಕಿತ್ಸೆಯ ವೇಳೆ ಕ್ವಾಂಟಮ್ ಕಣಗಳಿಂದ ಹೊರಹೊಮ್ಮುವ ರಾಸಾಯನಿಕ ಪ್ರತಿಕ್ರಿಯೆ ಮತ್ತು ಬೆಳಕು ಶಸ್ತ್ರಚಿಕಿತ್ಸಕರ ನೆರವಿಗೂ ಬರಲಿದೆ.

2023ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು, ಕ್ವಾಂಟಮ್ ಕಣಗಳನ್ನು ಅತ್ಯಂತ ಚಿಕ್ಕ ಗಾತ್ರದಲ್ಲಿ ಆವಿಷ್ಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವುಗಳ ಗುಣಲಕ್ಷಣಗಳನ್ನು ಕ್ವಾಂಟಮ್ ವಿದ್ಯಮಾನಗಳಿಂದ ನಿರ್ಧರಿಸಲಾಗುತ್ತದೆ. ಕ್ವಾಂಟಮ್ ಕಣಗಳೆಂದು ಕರೆಯಲ್ಪಡುವ ಈ ಕಣಗಳು ಈಗ ನ್ಯಾನೊ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿ ವಿಜೇತರ ಬಗ್ಗೆ...: ಮೌಂಗಿ ಜಿ.ಬವೆಂಡಿ ಅವರು 1961ರಲ್ಲಿ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ಜನಿಸಿದ್ದಾರೆ. 1988ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪಿಎಚ್​​ಡಿ ಪೂರೈಸಿರುವ ಇವರು ಕೇಂಬ್ರಿಡ್ಜ್‌ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರೊಫೆಸರ್​ ಆಗಿದ್ದಾರೆ.

ಲೂಯಿಸ್ ಇ. ಬ್ರಸ್ ಅವರು ಅಮೆರಿಕದ ಕ್ಲೀವ್ಲ್ಯಾಂಡ್​ 1943ರಲ್ಲಿ ಜನಿಸಿದ್ದಾರೆ. 1969ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪಡೆದಿದ್ದು, ಇದೇ ವಿವಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲೆಕ್ಸಿ ಐ ಎಕಿಮೊವ್ ಅವರು ಈ ಹಿಂದಿನ ಸೋವಿಯತ್​ ರಾಷ್ಟ್ರದಲ್ಲಿ ಜನಿಸಿದ್ದಾರೆ. ರಷ್ಯಾದ ಐಓಫೀ ಫಿಸಿಕಲ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್​ನಲ್ಲಿ ಪಿಎಚ್​ಡಿ ಮುಗಿಸಿದ್ದು, ಅಮೆರಿಕದ ನ್ಯಾನೊಕ್ರಿಸ್ಟಲ್ಸ್ ಟೆಕ್ನಾಲಜಿ ಇಂಕ್‌ನ ಮಾಜಿ ಮುಖ್ಯ ವಿಜ್ಞಾನಿಯಾಗಿದ್ದಾರೆ.

ಇದನ್ನೂ ಓದಿ: ಕೋವಿಡ್‌ಗೆ ಲಸಿಕೆಗಳ ಆವಿಷ್ಕಾರ: ಕ್ಯಾಟಲಿನ್ ಕರಿಕೊ, ಡ್ರೂ ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Last Updated : Oct 4, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.