ವೋಡಾಪೋನ್ ಸಿಇಒ ಸ್ಥಾನದಿಂದ ನಿಕ್ ರೀಡ್ ಕೆಳಗಿಳಿಯಲಿದ್ದು, ಅವರ ಸ್ಥಾನಕ್ಕೆ ಹಂಗಾಮಿಯಾಗಿ ಹಣಕಾಸು ಮುಖ್ಯಸ್ಥರಾದ ಮಾರ್ಗರಿಟಾ ಡೆಲ್ಲಾ ವಲ್ಲೆ ನೇಮಕವಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕದ ವೇಳೆಯೂ ರೀಡ್ ಮೊಬೈಲ್ ಗ್ರೂಪ್ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಯುರೋಪ್ ಮತ್ತು ಆಫ್ರಿಕಾದ ಮೇಲೆ ತನ್ನ ಗಮನವನ್ನು ಹೆಚ್ಚಿಸಲು ಸ್ವತ್ತುಗಳನ್ನು ಮಾರಾಟ ಮಾಡಿ, ಮೂಲಸೌಕರ್ಯ ವಿಭಾಗವನ್ನು ಪ್ರತ್ಯೇಕ ಘಟಕಕ್ಕೆ ತಿರುಗಿಸಿದರು. ಈ ಬದಲಾವಣೆಗಳ ಹೊರತಾಗಿ ಷೇರುಗಳು ಮಂದಗತಿಯಲ್ಲೇ ಉಳಿದುಕೊಂಡಿವೆ. ವೋಡಾಫೋನ್ ಬಲಗೊಳಿಸಿ, ಹೊಸ ಅವಕಾಶ ಬಳಸಿಕೊಂಡು ನಾಯಕನ ಬದಲಾವಣೆ ಮಾಡಲು ಬೋರ್ಡ್ಗೆ ಇದು ಸಕಾಲ ಎಂಬುದನ್ನು ನಾನು ನಂಬುತ್ತೇನೆ ಎಂದು ನಿಕ್ ತಿಳಿಸಿದ್ದಾರೆ. ಇನ್ನು ಬೋರ್ಡ್ನ ಸಲಹೆಗಾರರಾಗಿ ನಿಕ್ ರೀಡ್ 2023ರ ಮಾರ್ಚ್ 31ರವರೆಗೆ ಮುಂದುವರೆಯಲಿದ್ದಾರೆ.
ಮಾರ್ಗರೀಟಾ ಡೆಲ್ಲಾ ವಲ್ಲೆ ಹಂಗಾಮಿ ಗ್ರೂಪ್ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಷೇರು ಮೌಲ್ಯವನ್ನು ಹೆಚ್ಚಿಸಲು ಹಾಗೂ ಕಂಪನಿಯ ಅಭಿವೃದ್ಧಿ ವೇಗವನ್ನು ಹೆಚ್ಚಿಸಲು ಅವರು ನೆರವಾಗಲಿದ್ದಾರೆ ಎಂದು ವೋಡಾಫೋನ್ ತಿಳಿಸಿದೆ.
ಇದರ ಜೊತೆಗೆ ಮಾರ್ಗರೀಟಾ ಡೆಲ್ಲಾ ವಲ್ಲೆ, ಗ್ರೂಪ್ ಹಣಕಾಸಿನ ಮುಖ್ಯಸ್ಥೆಯಾಗಿ ಮುಂದುವರೆಯಲಿದ್ದಾರೆ. ಹೊಸ ಗ್ರೂಪ್ ಮುಖ್ಯ ಕಾರ್ಯದರ್ಶಿ ಹುಡಕಾಟಕ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಬೋರ್ಡ್ ತಿಳಿಸಿದೆ.
ಇದನ್ನೂ ಓದಿ: ಭಾರತದತ್ತ ಮೊಬೈಲ್ ಘಟಕ: ಚೀನಾಕ್ಕೆ ಕೋವಿಡ್ ಬಳಿಕ ಆ್ಯಪಲ್ ಕಂಪನಿ ಶಾಕ್