ETV Bharat / science-and-technology

ಕಣ್ಮನ ಸೆಳೆಯುತ್ತಿರುವ ಆ್ಯಪಲ್​ ಹೊಸ ಪೆನ್ಸಿಲ್​; ಬರಹ, ಚಿತ್ರಗಾರರಿಗೆ ಹೊಸ ಅನುಭೂತಿ - ಕಲ್ಪನೆ ಅಥವಾ ಗುರುತಿನ ದಾಖಲಾತಿ

ಈ ಆ್ಯಪಲ್​ ಪೆನ್ಸಿಲ್​ ಡಿಜಿಟಲ್​ ಬರವಣಿಗೆ ಸೇರಿದಂತೆ ಇನ್ನಿತರ ಕೆಲಸಕ್ಕೆ ಹೊಸ ಅನುಭವದ ಅವಕಾಶ ನೀಡಲಿದೆ.

new Apple Pencil unlocks another great option to experience

author img

By ETV Bharat Karnataka Team

Published : Nov 11, 2023, 4:21 PM IST

ನವದೆಹಲಿ: ಕ್ರಿಯಾತ್ಮಕತೆ ಮತ್ತು ವೃತ್ತಿಪರ ಕೆಲಸ ಯಾವುದೇ ಇರಲಿ ಅಲ್ಲಿ ಒಂದು ಬರಹ, ಸ್ಕೇಚ್​, ಕಲ್ಪನೆ ಅಥವಾ ಗುರುತಿನ ದಾಖಲಾತಿ ಬೇಕಾಗುತ್ತದೆ. ಈ ಕೆಲಸವನ್ನು ಇದೀಗ ಆ್ಯಪಲ್​ ಪೆನ್ಸಿಲ್​​ ಮತ್ತಷ್ಟು ಸುಲಭಗೊಳಿಸಲಿದೆ. ಹಲವು ವರ್ಷಗಳಿಂದ ನಂಬಿಕೆ ಅರ್ಹವಾಗಿರುವ ಈ ಆ್ಯಪಲ್​ ಪೆನ್ಸಿಲ್​ ಐಪಾಡ್​​ ಜೊತೆ ಹೊಸ ಅನುಭವ ನೀಡುವುದು ಸುಳ್ಳಲ್ಲ. ಇದೀಗ ಹೊಸ ಆ್ಯಪಲ್​ ಪೆನ್ಸಿಲ್​ ಡಿಜಿಟಲ್​ ಬರವಣಿಗೆ ಸೇರಿದಂತೆ ಹೊಸ ಅನುಭವದ ಅವಕಾಶ ನೀಡಲಿದೆ.

ಹೊಸ ಆ್ಯಪಲ್​ ಪೆನ್ಸಿಲ್​ ಪಿಕ್ಸೆಲ್​ ಪರಿಪೂರ್ಣತೆಯ ನಿಖರತೆ, ಕಡಿಮೆ ಲೆಟೆನ್ಸಿ ಮತ್ತು ಟಿಲ್ಟ್​ ಸೆನ್ಸಿಟಿವಿಟಿ ಹೊಂದಿದ್ದು, ಮ್ಯಾಟ್​ ಫಿನಿಶ್​ ಜೊತೆಗೆ ಪ್ಲಾಟ್​ ಸೈಡ್​ ಜೊತೆಗೆ ಮ್ಯಾಗ್ನೆಟಿಕ್​ ಆಗಿ ಜೋಡಣೆ ಹೊಂದಿದೆ. ಯುಎಸ್​ಬಿ ಸಿ ಪೋರ್ಟ್​ ಅನ್ನು ಕವರ್​ ಮಾಡಲು ವಿಶೇಷವಾಗಿ ವಿನ್ಯಾಸ ಮಾಡಲಿದೆ. ಜೊತೆಗೆ ಸುಲಭದಾಯಕ ಸಂಪರ್ಕ ಮತ್ತು ಚಾರ್ಜಿಂಗ್​ ಅವಕಾಶ ಹೊಂದಿದೆ. ಇದು ಐಪ್ಯಾಡ್​ನ ತುದಿಯಲ್ಲಿ ಮ್ಯಾಗ್ನೆಟಿಕ್​ ಅಟ್ಯಾಚ್​ ಕೂಡಾ ಹೊಂದಿದೆ. ಇದು ಐಪಾಡ್​ಒಎಸ್​​ ಲಕ್ಷಣಗಳಾದ ಸ್ಕ್ರಿಬಲ್​, ಕ್ವಿಕ್​ ನೋಟ್​​ ಇತರಗಳೊಂದಿಗೆ ಅದ್ಬುತವಾಗಿ ಕಾರ್ಯ ನಿರ್ವಹಿಸಲಿದೆ

ಎಂ2 ಮಾದರಿಯ ಐಪಾಡ್​ ಪ್ರೊ ಬಳಕೆ ಮಾಡಿದಾಗ ಹೊಸ ಆಪಲ್ ಪೆನ್ಸಿಲ್ ಹೋವರ್ ಅನ್ನು ಬೆಂಬಲಿಸುತ್ತದೆ. ಬಳಕೆದಾರರಿಗೆ ಸ್ಕೆಚ್ ಮಾಡಲು ಮತ್ತು ಇನ್ನೂ ಹೆಚ್ಚಿನ ನಿಖರತೆಯೊಂದಿಗೆ ವಿವರಿಸಲು ಅನುವು ಮಾಡಿಕೊಡುತ್ತದೆ.

ಸ್ಲೈಡಿಂಗ್ ಕ್ಯಾಪ್ ಯುಎಸ್‌ಬಿ-ಸಿ ಪೋರ್ಟ್ ಅನ್ನು ಬಹಿರಂಗಪಡಿಸುತ್ತದೆ, ಜೋಡಿಸಲು ಮತ್ತು ಚಾರ್ಜ್ ಮಾಡಲು ಹೊಸ ಆಪಲ್ ಪೆನ್ಸಿಲ್‌ಗೆ ಸಂಪರ್ಕಿಸಲು ಯುಎಸ್‌ಬಿ - ಸಿ ಕೇಬಲ್ ಅನ್ನು ಬಳಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಐಪ್ಯಾಡ್​​ ಸ್ಟೋರೇಜ್​ ಜೋಡಿಸಿದಾಕ್ಷಣ ಹೊಸ ಆ್ಯಪಲ್​ ಪೆನ್ಸುಲ್​ ಬ್ಯಾಟರಿ ಉಳಿಸಲು ಸ್ಲಿಪ್​ ಸ್ಟೇಟ್​​ಗೆ ಹೋಗಲಿದೆ. ಇದು ಐಪಾಡ್​ ಪ್ರೊ, ಐಪಾಡ್​ ಏರ್​ ಮತ್ತು ಐ ಪಾಡ್​ ಮಿನಿ ಮಾಡೆಲ್ಸ್​​ಗೆ ಹೊಂದಿಕೊಳ್ಳಲಿದೆ. ಆ್ಯಪಲ್​ ಪೆನ್ಸುಲ್​ ಮ್ಯಾಗ್ನಿಟಿಕ್​ ಹೊಂದಾಣಿಕೆ ಮತ್ತು ಚಾರ್ಜಿಂಗ್​ ಹೊಂದಿದೆ.

ಐಪಾಡ್​​ ಡಿಸ್‌ಪ್ಲೇಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡಿದೆ. ಮರುವಿನ್ಯಾಸಗೊಳಿಸಲಾದ ಲಾಕ್ ಸ್ಕ್ರೀನ್ ಕಸ್ಟಮೈಸ್ ಮಾಡಲು ಸಂಪೂರ್ಣವಾಗಿ ಹೊಸ ಮಾರ್ಗಗಳನ್ನು ನೀಡುತ್ತದೆ. ಬೆರಗುಗೊಳಿಸುವ ವಾಲ್‌ಪೇಪರ್‌ಗಳು, ನೆಚ್ಚಿನ ಫೋಟೋಗಳನ್ನು ಪ್ರದರ್ಶಿಸುವ ಹೊಸ ವಿಧಾನಗಳು ಮತ್ತು ದಿನಾಂಕ ಮತ್ತು ಸಮಯದ ನೋಟ್​ ಮಾಡಲು ಹೊಸ ವಿನ್ಯಾಸ ಮತ್ತು ಬಣ್ಣ, ಫಾಂಟ್​ ಅನ್ನು ಒಳಗೊಂಡಿದೆ. ಈ ಹೊಸ ಆ್ಯಪಲ್​ ಪೆನ್ಸುಲ್​ ಬೆಲೆ 7,900 ರೂ ಆಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಡಿಲೀಟ್ ಆಗಲಿವೆ ಲಕ್ಷಾಂತರ ಜಿಮೇಲ್ ಖಾತೆ; ನಿಮ್ಮ ಖಾತೆಗೂ ಕಾದಿದೆಯಾ ಅಪಾಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.