ವಾಷಿಂಗ್ಟನ್(ಅಮೆರಿಕ): ನ್ಯಾಷನಲ್ ಏರೋನ್ಯಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ದ ಪರ್ಸಿವರೆನ್ಸ್ ರೋವರ್ ತನ್ನ ಮೊದಲ ಕೆಲಸ ಮುಗಿಸಿದೆ. ಮಂಗಳ ಗ್ರಹದ ಮೇಲಿನ ಮಾದರಿಗಳನ್ನು ಸಂಗ್ರಹಿಸುವ ಮೊದಲ ಪ್ರಕ್ರಿಯೆ ಮುಗಿಸಿದೆ.
ಪೆನ್ಸಿಲ್ಗಿಂತ ತುಂಬಾ ಚಿಕ್ಕದಾದ ಜೆಝೆರೋ ಕ್ರೇಟರ್ನ ಕೋರ್ನಲ್ಲಿ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ (ಜೆಪಿಎಲ್) ಮಿಷನ್ ಕಂಟ್ರೋಲರ್‌ಗಳು ಈ ಮಾಹಿತಿ ದೃಢಪಡಿಸಿವೆ.
ಟೈಟಾನಿಯಂ ಮೂಲಕ ಸ್ಯಾಂಪಲ್ ಟ್ಯೂಬ್ ನಿರ್ಮಿಸಲಾಗಿದೆ. ಈ ಮೂಲಕ ಗಾಳಿಯಾಡದಂತೆ ನಿರ್ಬಂಧಿಸಲಾಗಿದೆ. ಇದು ತುಂಬಾ ದಿನಗಳ ನಂತರ ಭೂಮಿಗೆ ವಾಪಸ್ ಬರಲು ಅನುವಾಗಲು ಸಹಕಾರಿಯಾಗುತ್ತದೆ. ಮಾರ್ಸ್ ಸ್ಯಾಂಪಲ್ಸ್ ರಿಟರ್ನ್ ಪ್ರಾಜೆಕ್ಟ್ ಮೂಲಕ ನಾಸಾ ಮತ್ತು ಇಎಸ್ಎ (ಯುರೋಪಿಯನ್ ಸ್ಪೇಸ್ ಏಜೆನ್ಸಿ) ಇದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿವೆ.
'ನಾನು ಭೂಮಿಗೆ ಮಾದರಿಗಳನ್ನು ಕಳುಹಿಸುವ ಅನ್ವೇಷಣೆಯಲ್ಲಿ ಬಂಡೆ ಕೊರೆದು ಮಂಗಳನಲ್ಲಿ ಮಾದರಿ ಸಂಗ್ರಹಿಸಿದ್ದೇನೆ' ಎಂದು ಮಾದರಿ ಸಂಗ್ರಹ ಕಾರ್ಯ ಮುಂದುವರೆಯುತ್ತಿದೆ' ಎಂದು ಪರ್ಸಿವರೆನ್ಸ್ ರೋವರ್ ಪರವಾಗಿ ನಾಸಾ ಟ್ವೀಟ್ ಮಾಡಿದೆ.
-
It’s official: I’ve now captured, sealed, and stored the first core sample ever drilled on another planet, in a quest to return samples to Earth. It’s the first in a one-of-a-kind Martian rock collection. #SamplingMars
— NASA's Perseverance Mars Rover (@NASAPersevere) September 6, 2021 " class="align-text-top noRightClick twitterSection" data="
Read more: https://t.co/bs4Hd4Fzyw pic.twitter.com/2jwF7cOcMZ
">It’s official: I’ve now captured, sealed, and stored the first core sample ever drilled on another planet, in a quest to return samples to Earth. It’s the first in a one-of-a-kind Martian rock collection. #SamplingMars
— NASA's Perseverance Mars Rover (@NASAPersevere) September 6, 2021
Read more: https://t.co/bs4Hd4Fzyw pic.twitter.com/2jwF7cOcMZIt’s official: I’ve now captured, sealed, and stored the first core sample ever drilled on another planet, in a quest to return samples to Earth. It’s the first in a one-of-a-kind Martian rock collection. #SamplingMars
— NASA's Perseverance Mars Rover (@NASAPersevere) September 6, 2021
Read more: https://t.co/bs4Hd4Fzyw pic.twitter.com/2jwF7cOcMZ
ಸೆ.1ರಂದೇ ಪರ್ಸಿವರೆನ್ಸ್ ರೋವರ್ ಕಲ್ಲಿನ ಮಾದರಿಯನ್ನು ಸಂಗ್ರಹಿಸಿದೆ. ಆದರೆ, ಬೆಳಕಿನ ಕೊರತೆ ಇದ್ದ ಕಾರಣದಿಂದ ಈ ಕುರಿತು ನಾಸಾ ಸ್ಪಷ್ಟನೆ ನೀಡಿರಲಿಲ್ಲ. ಈಗ ರೋವರ್ ಹೊಸ ಚಿತ್ರಗಳನ್ನು ಕಳುಹಿಸಿದ್ದು, ಕಲ್ಲಿನ ಮಾದರಿಗಳು ಪರ್ಸಿವರೆನ್ಸ್ನ ಕೊಳವೆಯಲ್ಲಿ ಕಾಣಸಿಗುತ್ತವೆ.
ನಾಸಾದ ಈ ಐತಿಹಾಸಿಕ ಸಾಧನೆಗೆ ನಾಸಾದ ಆಡಳಿತಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಇದು ಅದ್ಭುತ ಸಾಧನೆಯಾಗಿದೆ ಹಾಗೂ ಪರ್ಸಿವಿರೆನ್ಸ್ ಮತ್ತು ನಮ್ಮ ತಂಡ ನಡೆಸಿರುವ ಶೋಧನೆಗಳನ್ನು ನೋಡಬೇಕು. ಇನ್ನು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ರೋವರ್ ಈ ಮಾದರಿ ಸಂಗ್ರಹಿಸುವಲ್ಲಿ ವಿಫಲವಾಗಿತ್ತು. ಆದರೆ, ಉತ್ತಮ ಮಾದರಿ ಸಂಗ್ರಹಿಸಲು ಅರ್ಧ ಮೈಲಿ ಮುಂದಕ್ಕೆ ಚಲಿಸಿತ್ತು. ನಾಸಾದ ವಿಜ್ಞಾನಿಗಳ ತಂಡ ಡೇಟಾ ಮತ್ತು ಚಿತ್ರಗಳನ್ನು ವಿಶ್ಲೇಷಿಸಿದ ಬಳಿಕ ರೋವರ್ನ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಚಂದ್ರನ ಸುತ್ತ 9,000ಕ್ಕಿಂತ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದ ಭಾರತದ ಚಂದ್ರಯಾನ-2 ಬಾಹ್ಯಾಕಾಶ ನೌಕೆ : ISRO