ವಾಷಿಂಗ್ಟನ್( ಅಮೆರಿಕ): ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ಮೇಲಿನ ಹೊಂಡಗಳೊಳಗೆ ಇರುವ ಮಬ್ಬಾದ ಸ್ಥಳಗಳನ್ನು ಕಂಡುಹಿಡಿದಿದ್ದಾರೆ. ಇಲ್ಲಿ ಸುಮಾರು 17 ಸೆಲ್ಸಿಯಸ್ ತಾಪಮಾನ ಇರುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಇದು ಮಾನವ ಜೀವಿಸಲು ಸೂಕ್ತವಾದ ಪರಿಸರವೂ ಹೌದು ಎಂಬುದನ್ನು ನಾಸಾದ ಲೂನಾರ್ ರೆಕನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಬಾಹ್ಯಾಕಾಶ ನೌಕೆ ಮತ್ತು ಕಂಪ್ಯೂಟರ್ ಮಾಡೆಲಿಂಗ್‌ನಿಂದ ಸಂಗ್ರಹಿಸಲಾದ ದತ್ತಾಂಶವನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
ಚಂದ್ರನ ಮೇಲ್ಮೈ ಮೇಲಿನ ಪ್ರದೇಶಗಳಿಗೆ ಹೋಲಿಸಿದರೆ ಅಲ್ಲಿನ ಕುಳಿಗಳು ಮತ್ತು ಗುಹೆಗಳು ಚಂದ್ರನ ಪರಿಶೋಧನೆಗೆ ಸೂಕ್ತವಾದ ಸ್ಥಳಗಳಾಗಿವೆ. ಇನ್ನೂ ವಿಶೇಷ ಎಂದರೆ ಇಲ್ಲಿ ಹಗಲಿನಲ್ಲಿ ಸುಮಾರು 127 ಸೆಲ್ಸಿಯಸ್‌ಗೆ ತಾಪಮಾನ ಇದ್ದರೆ ರಾತ್ರಿಯಲ್ಲಿ ಮೈನಸ್ -173 ಸೆಲ್ಸಿಯಸ್‌ಗೆ ಇಳಿಕೆ ಕಾಣುತ್ತದೆ. ಚಂದ್ರನ ಅಧ್ಯಯನವು ಮುಂದಿನ ಬಾಹ್ಯಾಕಾಶ ಸಂಶೋಧನೆಗೆ ಹಾಗೂ ಅಲ್ಲಿ ಮಾನವ ಜೀವಿಗಳ ಬದುಕಿಗೆ ಏನಾದರೂ ನೆಲೆ ಸಿಗಬಹುದಾ ಎಂಬ ಬಗ್ಗೆ ಅಧ್ಯಯನಕ್ಕೆ ಇದು ದಾರಿ ಮಾಡಿಕೊಡುವ ಉದ್ದೇಶವನ್ನು ನಾಸಾ ಹೊಂದಿದೆ.
2009 ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಇರುವ ಹೊಂಡದಂತ ಆಕೃತಿಗಳನ್ನ ಪತ್ತೆ ಹಚ್ಚಲಾಯಿತು. ಮತ್ತು ಅಂದಿನಿಂದ ನಾಸಾ ವಿಜ್ಞಾನಿಗಳು ಅಲ್ಲಿನ ಕುಳಿಗಳ ಬಗ್ಗೆ ಅನ್ವೇಷಿಸಲು ಶುರು ಮಾಡಿದ್ದರು. ಹಾಗೂ ಇವುಗಳಲ್ಲಿ ಜೀವಿಗಳ ಇರುವ ಬಗ್ಗೆ ಅಧ್ಯಯನ ಮಾಡಲು ಯೋಗ್ಯ ಎಂದು ಯೋಚಿಸಿದ್ದರು. ಚಂದ್ರನ ಮೇಲಿರುವ ಈ ಹೊಂಡಗಳು ಅಥವಾ ಗುಹೆಗಳು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣ ಮತ್ತು ಸೂಕ್ಷ್ಮ ಉಲ್ಕೆಗಳಿಂದ ಸ್ವಲ್ಪ ರಕ್ಷಣೆ ನೀಡುತ್ತವೆ ಎಂಬುದನ್ನು ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಚಂದ್ರನಲ್ಲಿ 200ಕ್ಕೂ ಹೆಚ್ಚು ಹೊಂಡಗಳು ಪತ್ತೆಯಾಗಿದ್ದು, ಇದರಲ್ಲಿ ಬಹುಶಃ 16 ಹೊಂಡಗಳು ಲಾವಾ ಟ್ಯೂಬ್‌ಗಳಾಗಿವೆ ಎಂದು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ವಿದ್ಯಾರ್ಥಿ ಟೈಲರ್ ಹೊರ್ವಾತ್ ಹೇಳಿದ್ದಾರೆ. ಇತ್ತೀಚೆಗೆ ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ನೇತೃತ್ವ ವಹಿಸಿದ್ದ ಅವರು ಈ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ಹೊಂಡಗಳು ಚಂದ್ರನ ಆಕರ್ಷಕ ಲಕ್ಷಣ: ಮೇರಿಲ್ಯಾಂಡ್‌ನ ಗ್ರೀನ್‌ಬೆಲ್ಟ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಎಲ್‌ಆರ್‌ಒ ಪ್ರಾಜೆಕ್ಟ್ ವಿಜ್ಞಾನಿ ನೋಹ್ ಪೆಟ್ರೋ, ಚಂದ್ರನ ಮೇಲಿರುವ ಹೊಂಡಗಳು ಚಂದ್ರನ ಮೇಲ್ಮೈಯನ ಆಕರ್ಷಕ ಲಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಥಿರವಾದ ಉಷ್ಣ ಪರಿಸರ ಸೃಷ್ಟಿಸು ಸಾಧ್ಯತೆ ಇರುವುದು ಹಾಗೂ ಆ ಬಗ್ಗೆ ತಿಳಿದುಕೊಳ್ಳುವುದರಿಂದ ಇದು ಅಲ್ಲಿ ಜೀವ ಸಂಕುಲ ಇದೆಯಾ ಎಂಬ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಹೊರ್ವಾತ್ ಡಿವೈನರ್ ಎಂಬ ಥರ್ಮಲ್ ಕ್ಯಾಮೆರಾದಿಂದ ದತ್ತಾಂಶವನ್ನು ಸಂಸ್ಕರಿಸಿ, ಹೊಂಡಗಳೊಳಗಿನ ತಾಪಮಾನವು ಮೇಲ್ಮೈಯಲ್ಲಿರುವ ತಾಪಮಾನಕ್ಕಿಂತ ಭಿನ್ನವಾಗಿದೆಯೇ ಎಂದು ಕಂಡುಹಿಡಿಯಲಾಗುತ್ತಿದೆ. ಇಲ್ಲಿನ ಕುಳಿಗಳ ಮೇಲೆ ಬೀಳುವ ಶಾಶ್ವತ ನೆರಳಿನ ವ್ಯಾಪ್ತಿಯೊಳಗಿನ ತಾಪಮಾನವು ಚಂದ್ರನ ದಿನದಾದ್ಯಂತ ಸ್ವಲ್ಪಮಟ್ಟಿಗೆ ಏರಿಳಿತಗೊಳ್ಳುತ್ತದೆ.
ಸುಮಾರು 17 ಸೆಲ್ಸಿಯಸ್ ತಾಪಮಾನ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ. LRO ನ ಚಂದ್ರನ ವಿಚಕ್ಷಣ ಆರ್ಬಿಟರ್ ಕ್ಯಾಮೆರಾದಿಂದ ತೆಗೆದ ಚಿತ್ರಗಳು ಸೂಚಿಸುವಂತೆ ಒಂದು ಗುಹೆಯು ಪಿಟ್‌ನ ಕೆಳಗಿನಿಂದ ವಿಸ್ತರಿಸಿದರೆ ಇದು ತುಲನಾತ್ಮಕವಾಗಿ ಜೀವಿಗಳು ವಾಸಿಸಲು ಆರಾಮದಾಯಕವಾದ ತಾಪಮಾನವನ್ನು ಹೊಂದಿರುತ್ತದೆ ಎಂಬುದನ್ನು ಕಂಡು ಕೊಳ್ಳಲಾಗಿದೆ.
ಚಂದ್ರನ ಮೇಲೆ ಒಂದು ದಿನವು ಅಂದರೆ ಸುಮಾರು 15 ಭೂಮಿಯ ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಮೇಲ್ಮೈ ನಿರಂತರವಾಗಿ ಸೂರ್ಯನ ಬೆಳಕಿನಿಂದ ತೀವ್ರ ಬಿಸಿ ಸ್ಫೋಟಗೊಳ್ಳುತ್ತದೆ ಮತ್ತು ಆಗಾಗ್ಗೆ ನೀರನ್ನು ಕುದಿಸುವಷ್ಟು ಬಿಸಿಯಾಗಿರುತ್ತದೆ. ಕ್ರೂರವಾದ ಶೀತ ರಾತ್ರಿಗಳು ಸಹ ಸುಮಾರು 15 ಭೂಮಿಯ ದಿನಗಳ ಕಾಲ ಇರುತ್ತದೆ.
ಇದನ್ನು ಓದಿ:INTERESTING FACTS: 'ನೆನಪು' ಉಳಿಯುವುದು ಹೇಗೆ? ನೆನಪಿಗೂ ನಿದ್ರೆಗೂ ಸಂಬಂಧವಿದೆಯಾ?