ಮೆಲ್ಬೋರ್ನ್, ಆಸ್ಟ್ರೇಲಿಯಾ : ಬಾಹ್ಯಾಕಾಶದ ಕೆಲವು ರಹಸ್ಯಗಳನ್ನು ಬಿಚ್ಚಿಡಲು ಹಿಂದಿನ ಕ್ರಿಸ್‌ಮಸ್ ದಿನದಂದು ಉಡಾವಣೆಯಾದ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಖಗೋಳ ವಿಜ್ಞಾನಿಗಳು ಕುತೂಹಲದಿಂದ ಗಮನಿಸುತ್ತಿದ್ದಾರೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎರಡನೇ ಲ್ಯಾಂಗ್ರೆಜ್ ಪಾಯಿಂಟ್ ಅನ್ನು ಇದು ತಲುಪಿದ್ದು, ಹೊಸ ಅವಿಷ್ಕಾರಗಳನ್ನು ಮಾಡಲಿದೆ.
ಏನಿದು ಲ್ಯಾಂಗ್ರೇಜ್ ಪಾಯಿಂಟ್?: ಸೂರ್ಯನಿಗೂ ಒಂದು ರೀತಿಯ ಗುರುತ್ವಾಕರ್ಷಣ ಬಲವಿದೆ. ಭೂಮಿಗೂ ಒಂದು ರೀತಿಯ ಗುರುತ್ವಾಕರ್ಷಣ ಬಲವಿದೆ. ಭೂಮಿಯಿಂದ ಯಾವುದಾದರೂ ಒಂದು ವಸ್ತು ಮೇಲಕ್ಕೆ ಹೊರಟಂತೆ ಒಂದು ಹಂತದ ನಂತರ ಗುರುತ್ವಾಕರ್ಷಣ ಶಕ್ತಿ ಕ್ಷೀಣಿಸುತ್ತದೆ.
ನಂತರ ಅಲ್ಲಿಂದ ಸೂರ್ಯನ ಗುರುತ್ವಾಕರ್ಷಣ ಶಕ್ತಿಗೆ ಅದು ಸಿಲುಕಿಕೊಳ್ಳುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಗುರುತ್ವಾಕರ್ಷಣ ಶಕ್ತಿ ಸಮನಾಗಿರುವ ಅಥವಾ ಸೂರ್ಯ ಅಥವಾ ಭೂಮಿಯ ನಡುವೆ ಗುರುತ್ವಾಕರ್ಷಣ ಶಕ್ತಿ ಶೂನ್ಯವಾಗಿರುವ ಪ್ರದೇಶವೊಂದು ಭೂಮಿ ಮತ್ತು ಸೂರ್ಯನ ನಡುವೆ ಇರುತ್ತದೆ.
ಅಂತಹ ಸ್ಥಳವನ್ನೇ ಲ್ಯಾಂಗ್ರೇಜ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈಗ ತಜ್ಞರು ಹೇಳುವಂತೆ ಈ ಲ್ಯಾಂಗ್ರೇನ್ ಪಾಯಿಂಟ್ ಇರುವುದು ಸುಮಾರು 1.5 ಮಿಲಿಯನ್ ಕಿಲೋಮೀಟರ್ ಅಥವಾ 15 ಲಕ್ಷ ಕಿಲೋಮೀಟರ್ ದೂರದಲ್ಲಿ.
-
🏠 Home, home on Lagrange! We successfully completed our burn to start #NASAWebb on its orbit of the 2nd Lagrange point (L2), about a million miles (1.5 million km) from Earth. It will orbit the Sun, in line with Earth, as it orbits L2. https://t.co/bsIU3vccAj #UnfoldTheUniverse pic.twitter.com/WDhuANEP5h
— NASA Webb Telescope (@NASAWebb) January 24, 2022 " class="align-text-top noRightClick twitterSection" data="
">🏠 Home, home on Lagrange! We successfully completed our burn to start #NASAWebb on its orbit of the 2nd Lagrange point (L2), about a million miles (1.5 million km) from Earth. It will orbit the Sun, in line with Earth, as it orbits L2. https://t.co/bsIU3vccAj #UnfoldTheUniverse pic.twitter.com/WDhuANEP5h
— NASA Webb Telescope (@NASAWebb) January 24, 2022🏠 Home, home on Lagrange! We successfully completed our burn to start #NASAWebb on its orbit of the 2nd Lagrange point (L2), about a million miles (1.5 million km) from Earth. It will orbit the Sun, in line with Earth, as it orbits L2. https://t.co/bsIU3vccAj #UnfoldTheUniverse pic.twitter.com/WDhuANEP5h
— NASA Webb Telescope (@NASAWebb) January 24, 2022
ಇಲ್ಲಿ ಒಂದೇ ಲ್ಯಾಂಗ್ರೇಜ್ ಪಾಯಿಂಟ್ ಇರುವುದಿಲ್ಲ. ಸೂರ್ಯ ಮತ್ತು ಭೂಮಿಗೆ ಮಧ್ಯದಲ್ಲಿ ಲ್ಯಾಂಗ್ರೇಜ್ ಪಾಯಿಂಟ್ ಇರುತ್ತದೆ. ಇದನ್ನು ಮೊದಲನೇ ಲ್ಯಾಂಗ್ರೇಜ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿ ಇದ್ದು, ಭೂಮಿಯ ಹಿಂದೆ ಇರುವ ಲ್ಯಾಂಗ್ರೇಜ್ ಪಾಯಿಂಟ್ ಅನ್ನು ಎರಡನೇ ಲ್ಯಾಂಗ್ರೇಜ್ ಪಾಯಿಂಟ್ ಇರುತ್ತದೆ.
ಇಲ್ಲಿಯೇ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಕಾರ್ಯ ನಿರ್ವಹಿಸುತ್ತದೆ. ಇನ್ನೂ ಅರ್ಥವಾಗದಿದ್ದರೆ.. ನೀವು ಸೂರ್ಯ ಎಂದಿಟ್ಟುಕೊಳ್ಳಿ.. ನಿಮ್ಮ ಎದುರಿಗೆ ಭೂಮಿ ಇದೆ. ಅದರ ಹಿಂದೆ ಸುಮಾರು 15 ಲಕ್ಷ ಕಿಲೋಮೀಟರ್ಗಳ ದೂರದಲ್ಲಿರುವುದೇ ಎರಡನೇ ಲ್ಯಾಂಗ್ರೇಜ್ ಪಾಯಿಂಟ್.. ಇಲ್ಲಿಯೇ ಜೇಮ್ ವೆಬ್ ಟೆಲಿಸ್ಕೋಪ್ ಅನ್ನು ನಿಯೋಜನೆ ಮಾಡಲಾಗಿದೆ. ಒಟ್ಟು ಐದು ಲ್ಯಾಂಗ್ರೇಜ್ ಪಾಯಿಂಟ್ಗಳನ್ನು ಗುರ್ತಿಸಲಾಗಿದ್ದು, ಒಂದು, ಎರಡು ಮತ್ತು ಮೂರನೇ ಲ್ಯಾಂಗ್ರೇಜ್ ಪಾಯಿಂಟ್ಗಳು ಎಲ್ಲವೂ ಸರಳರೇಖೆಯಲ್ಲಿ ಇರುತ್ತವೆ ಎಂದು ತಿಳಿದುಕೊಂಡಿರಬೇಕಾದ ವಿಚಾರ.
ಇನ್ನೇನು ಕಾರ್ಯನಿರ್ವಹಣೆಗೆ ಬಾಹ್ಯಾಕಾಶದಲ್ಲಿ ಜೇಮ್ ವೆಬ್ ಟೆಲಿಸ್ಕೋಪ್ ಸಿದ್ಧವಾಗಿದ್ದು, ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರ ತಂಡವನ್ನೂ ಸೇರಿದಂತೆ ವಿಶ್ವದ ಖಗೋಳದ ವಿಜ್ಞಾನಿಗಳ ಸಮುದಾಯಗಳು ಪ್ರಮುಖ ಆವಿಷ್ಕಾರಗಳಿಗೆ ಸಿದ್ಧತೆ ನಡೆಸುತ್ತಿವೆ.
1990ರಲ್ಲೇ ಜೇಮ್ಸ್ ಕಲ್ಪನೆ : ಜೇಮ್ಸ್ ವೆಬ್ ಟೆಲಿಸ್ಕೋಪ್ ಬಗ್ಗೆ ಸ್ವಿನ್‌ಬರ್ನ್ ತಾಂತ್ರಿಕ ವಿಶ್ವವಿದ್ಯಾಲಯ ಕಾರ್ಲ್ ಗ್ಲೇಜ್‌ಬ್ರೂಕ್ ಈ ರೀತಿಯಾಗಿ ಹೇಳುತ್ತಾರೆ. 2012ರಲ್ಲಿ, ನಾನು ದ ಕನ್ಸರ್ವೇಷನ್ ಪತ್ರಿಕೆಗಾಗಿ ಲೇಖನವೊಂದನ್ನು ಬರೆದಿದ್ದೆನು. ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2018ರಲ್ಲಿ ಉಡಾವಣೆ ಮಾಡಲು ದಿನಾಂಕ ನಿಗದಿ ಮಾಡಲಾಗಿತ್ತು.
ಈ ಯೋಜನೆ ಮೂಲತಃ ಕಲ್ಪನೆ 1990ರ ದಶಕದಲ್ಲಿಯೇ ಬಂದಿದ್ದು, 2010ಕ್ಕೆ ಮೊದಲು ಇದನ್ನು ಉಡಾವಣೆ ಮಾಡುವುದು ನಮ್ಮ ಗುರಿಯಾಗಿತ್ತು. ಈಗ ಸುಮಾರು 30 ವರ್ಷಗಳ ನಂತರ ಅದನ್ನು 10 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯಿಸಿ, ಇದನ್ನು ಉಡಾವಣೆ ಮಾಡಲಾಗಿದೆ ಎಂದಿದ್ದಾರೆ.
ಮೊದಲನೆಯದಾಗಿ, ಇದು ಬಾಹ್ಯಾಕಾಶದಲ್ಲಿ ನಿಯೋಜನೆಯಾದ ಅತ್ಯಂತ ದೊಡ್ಡ ಟೆಲಿಸ್ಕೋಪ್ ಆಗಿದೆ. 6.5 ಮೀಟರ್ ವ್ಯಾಸ ಇರುವ ಚಿನ್ನದ ಲೇಪಿತ ಕನ್ನಡಿಯಿರುವ ಈ ಟೆಲಿಸ್ಕೋಪ್ ಅತ್ಯಂತ ಸಂಕೀರ್ಣವಾಗಿದ್ದು, ಈ ಕನ್ನಡಿಯನ್ನು ಮಡಚಲೂಬಹುದಾಗಿದೆ. ಇದನ್ನು ಮಡಚಿಯೇ ಏರಿಯನ್ ರಾಕೆಟ್ನಲ್ಲಿ ಇಡಲಾಗಿತ್ತು ಎಂಬುದು ವಿಶೇಷ..
ಎರಡನೆಯದಾಗಿ, ಜೇಮ್ಸ್ ವೆಬ್ ಅನ್ನು ಅತ್ಯದ್ಭುತ ಎಂಜಿನಿಯರ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿತ್ತು. ಈ ದೂರದರ್ಶಕ ಅತ್ಯಂತ ತೀಕ್ಷ್ಣವಾದ ಚಿತ್ರಗಳನ್ನು ಸೆರೆ ಹಿಡಿದು ರವಾನಿಸುವ ಸಾಮರ್ಥ್ಯ ಹೊಂದಿದೆ. ಕನ್ನಡಿಯಲ್ಲಿ 18 ಭಾಗಗಳಿವೆ. ಅತ್ಯಂತ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲದು.
ಅಲ್ಲದೆ, ಜೇಮ್ಸ್ ವೆಬ್ ಅತಿಗೆಂಪು ಕಿರಣಗಳನ್ನು ಹೀರಿಕೊಳ್ಳುತ್ತದೆ. ಜೇಮ್ಸ್ ವೆಬ್ ತಣ್ಣಗಿದ್ದರೆ ಮಾತ್ರ ಅದು ಹೆಚ್ಚು ಸಾಮರ್ಥ್ಯದಿಂದ ಕಾರ್ಯ ನಿರ್ವಹಣೆ ಮಾಡುತ್ತದೆ. ಅದ್ದರಿಂದಾಗಿ 20 ಮೀಟರ್ ಸನ್ ಶೀಲ್ಡ್ ಅನ್ನು ಕೂಡ ಹಾಕಲಾಗಿದ್ದು, ಸೂರ್ಯನಿಂದ ಸಂಪೂರ್ಣವಾಗಿ ರಕ್ಷಣೆ ಮಾಡಲಾಗಿದೆ.
ಜೇಮ್ಸ್ ವೆಬ್ನ ಪ್ರಮುಖ ಉದ್ದೇಶ : ಜಗತ್ತಿನ ಆರಂಭದಲ್ಲಿ ಮೊದಲ ನಕ್ಷತ್ರಗಳು ಮತ್ತು ಗೆಲಾಕ್ಸಿಗಳ ಜನನ ಹೇಗಾಯ್ತು ಎಂಬುದನ್ನು ಕಂಡುಕೊಳ್ಳುವುದೇ ಜೇಮ್ಸ್ ವೆಬ್ ಟೆಲಿಸ್ಕೋಪ್ನ ಪ್ರಮುಖ ಉದ್ದೇಶ. ಜಗತ್ತಿನ ಸೃಷ್ಟಿ ಹೇಗಾಯ್ತು ಎಂಬ ಮೂಲಕ ಸುಳಿವು ಸಿಗುವ ಸಾಧ್ಯತೆ ಇರುತ್ತದೆ.
ಈ ಹಿಂದಿನ ಕೆಲವು ತಾಂತ್ರಿಕ ಮಿತಿಗಳಿಂದಾಗಿ, ಶತಕೋಟಿ ವರ್ಷಗಳ ಹಿಂದೆ ಬಾಹ್ಯಾಕಾಶ ಹೇಗಿತ್ತು ಎಂಬುದನ್ನು ನಮಗೆ ಅನ್ವೇಷಣೆ ಮಾಡಲು ಸಾಧ್ಯವಾಗಲಿಲ್ಲ. ನಕ್ಷತ್ರಗಳು ಯಾವಾಗ ಮತ್ತು ಹೇಗೆ ರೂಪುಗೊಂಡವು ಎಂಬುದೂ ನಮಗೆ ತಿಳಿದಿಲ್ಲ. ನಕ್ಷತ್ರಗಳು ಸಾಯುವಾಗ ಏನಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ. ಈ ಎಲ್ಲಾ ಅಂಶಗಳ ಮೇಲೆ ಈ ಟೆಲಿಸ್ಕೋಪ್ ಬೆಳಕು ಚೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮಿಲ್ಕೀ ವೇನಲ್ಲಿರುವ ನಕ್ಷತ್ರಗಳು : ಈಗ ಸದ್ಯಕ್ಕೆ ನಮಗೆ ತಿಳಿದಿರುವುದು ಇಷ್ಟೇ.. ನಮ್ಮ ಗೆಲಾಕ್ಸಿಯಾದ ಕ್ಷೀರಪಥ ಅಥವಾ ಮಿಲ್ಕೀ ವೇನಲ್ಲಿ ನಮಗೆ ಕಾಣಿಸುವ ಎಲ್ಲಾ ನಕ್ಷತ್ರಗಳು ಒಂದು ರೀತಿಯ ಅನಿಲದಿಂದ ಆಗಿವೆ. ಆ ಅನಿಲವೇ ನಕ್ಷತ್ರಗಳ ಜೀವನ ಮತ್ತು ಸಾವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.
ನಕ್ಷತ್ರಗಳು ಮಾತ್ರವಲ್ಲದೇ ಮುಂದಿನ ವಿವಿಧ ಯೋಜನೆಗಳಿಗೂ ಜೇಮ್ಸ್ ವೆಬ್ ಸಹಕಾರಿಯಾಗಿದೆ. ನಿಗೂಢವಾಗಿರುವ ಕಪ್ಪು ಕುಳಿಗಳು (ಬ್ಲ್ಯಾಕ್ ಹೋಲ್ಸ್) ಮತ್ತು ಗೆಲಾಕ್ಸಿಗಳ ಕೇಂದ್ರ ಸ್ಥಾನಗಳು ಮತ್ತು ನಕ್ಷತ್ರಪುಂಜಗಳಲ್ಲಿನ ರಚನೆಗಳು ಮುಂತಾದವುಗಳನ್ನು ಜೇಮ್ಸ್ ವೆಬ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಖಗೋಳಶಾಸ್ತ್ರಜ್ಞರು ಮುಂದಿನ ಕೆಲವು ತಿಂಗಳುಗಳಲ್ಲಿ ಜೇಮ್ಸ್ ವೆಬ್ನಿಂದ ಮೊದಲ ಮಾಹಿತಿಯನ್ನು ಪಡೆಯಲಿದ್ದಾರೆ. ಖಗೋಳಶಾಸ್ತ್ರದ ಇತಿಹಾಸವು ನಾವು ಮಾದರಿಯನ್ನು ಬದಲಾಯಿಸುವ ಸಂಶೋಧನೆಗಳನ್ನು ನಿರೀಕ್ಷಿಸಬಹುದು ಎಂದು ನನಗೆ ಅನಿಸುತ್ತದೆ ಎಂದು ಕಾರ್ಲ್ ಗ್ಲೇಜ್‌ಬ್ರೂಕ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಿಮ್ಮ ಕಾರು ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲವೇ?.. ಪಾರ್ಕಿಂಗ್ ಜಾಗವನ್ನು ಹೀಗೆ ಹುಡುಕಿ..