ETV Bharat / science-and-technology

ನಾಸಾದ 'ಮೂನ್ ಮಿಷನ್' ಒಂದು ವರ್ಷ ಮುಂದೂಡಿಕೆ - ನಾಸಾ ಲೇಟೆಸ್ಟ್ ನ್ಯೂಸ್

NASA delays human moon landing until 2025, blames seven months lost in Litigation
2025ಕ್ಕೆ ನಾಸಾದ 'ಮೂನ್ ಮಿಷನ್' ಒಂದು ವರ್ಷ ಮುಂದೂಡಿಕೆ
author img

By

Published : Nov 10, 2021, 2:35 PM IST

ವಾಷಿಂಗ್ಟನ್(ಅಮೆರಿಕ): 1969ರ ಜುಲೈ 16ರಂದು ಚಂದ್ರನಲ್ಲಿಗೆ ನೀಲ್ ಆರ್ಮ್‌ಸ್ಟ್ರಾಂಗ್ ಹಾಗೂ ಅವರ ಜೊತೆಗೆ ಮತ್ತಿಬ್ಬರನ್ನು ಕಳುಹಿಸಿ ಅಭೂತಪೂರ್ವ ದಾಖಲೆ ಮಾಡಿದ್ದ ಅಮೆರಿಕ ಮತ್ತೊಮ್ಮೆ ಚಂದ್ರನಲ್ಲಿಗೆ ತನ್ನ ಗಗನಯಾತ್ರಿಗಳನ್ನು ಕಳುಹಿಸಲು 2024ನೇ ವರ್ಷವನ್ನು ನಿಗದಿ ಮಾಡಿತ್ತು. ಆದರೆ ಈಗ 'ಮೂನ್ ಮಿಷನ್' ಅನ್ನು ಒಂದು ವರ್ಷ ಮುಂದೂಡಿದೆ.

ಚಂದ್ರನ ಮೇಲೆ ಲ್ಯಾಂಡರ್ ನಿರ್ಮಿಸಲು ಸ್ಪೇಸ್‌ಎಕ್ಸ್‌ಗೆ ನೀಡಲಾದ ಒಪ್ಪಂದದ ಭಾಗವಾಗಿ ವಿವಾದ ಏರ್ಪಟ್ಟಿದ್ದು, ಇದೇ ವಿಚಾರವಾಗಿ ಏಳು ತಿಂಗಳುಗಳು ನಷ್ಟವಾಗಿದ್ದು, ಇದೇ ಕಾರಣವಾಗಿ 2024ನೇ ವರ್ಷಕ್ಕೆ ಬದಲಾಗಿ, 2025ನೇ ವರ್ಷಕ್ಕೆ ಮಾನವನನ್ನು ಚಂದ್ರನ ಮೇಲೆ ಇಳಿಸುವ ಮಿಷನ್​ ಮುಂದೂಡಲಾಗಿದೆ ಎಂದು ನಾಸಾದ ಅಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.

ಇದರ ಜೊತೆಗೆ ನಾಸಾದ ಈ ಮಿಷನ್ ವಿಫಲವಾಗಲು ಮತ್ತೊಂದು ಕಾರಣವೂ ಇದೆ. ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ 2024ಕ್ಕೆ ಗಡವು ನೀಡಲಾಯಿತಾದರೂ, ಮಿಷನ್​ನ ಕಾರ್ಯಸಾಧ್ಯತೆ ಬಗ್ಗೆ ಆಗ ಆಲೋಚನೆ ಮಾಡಿರಲಿಲ್ಲ. ಅಷ್ಟೇ ಅಲ್ಲದೇ, ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ ಅಭಿವೃದ್ಧಿಪಡಿಸಲು ಸಾಕಷ್ಟು ಹಣವನ್ನು ಸರ್ಕಾರ ನೀಡಲಿಲ್ಲ ಎಂದು ಬಿಲ್ ನೆಲ್ಸನ್ ಹೇಳಿದ್ದಾರೆ.

ಓರಿಯನ್ ಬಾಹ್ಯಾಕಾಶ ನೌಕೆಯ ಮೂಲಕ 2024ರ ವೇಳೆಗೆ ಮೊದಲ ಮಹಿಳೆಯನ್ನು ಚಂದ್ರನ ಮೇಲೆ ಇಳಿಸಲು ನಾಸಾ ಗುರಿ ಹೊಂದಿತ್ತು. ಆದರೆ ಕೆಲವು ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣದಿಂದ ಮಿಷನ್ ಮುಂದೂಡಿಕೆಯಾಗಿದೆ.

ಇದನ್ನೂ ಓದಿ: 2024ರ ವೇಳೆಗೆ ಚಂದ್ರನಲ್ಲಿಗೆ ಮೊದಲ ಮಹಿಳೆ.. ಭರ್ಜರಿಯಾಗೇ ಸನ್ನದ್ಧವಾಗ್ತಿದೆ ನಾಸಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.