ಎಲೋನ್ ಮಸ್ಕ್ ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಾಡುತ್ತಿರುವ ಹೊಸ ಹೊಸ ಮಾರ್ಪಡುಗಳಿಗೆ ಕೊನೆಯಿಲ್ಲ. ಇದೀಗ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಮತ್ತೊಂದು ಹೊಸ ಬದಲಾವಣೆಯೊಂದನ್ನು ಮಾಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ಸುದ್ದಿ ಅಥವಾ ಲೇಖನ (News and Article) ಓದುಗರು ತಮ್ಮ ಆಸಕ್ತಿ ವಿಷಯಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಲಾದ ಸುದ್ದಿ ಲಿಂಕ್ಗಳ ಮೂಲಕವೇ ಓದುವ ಅವಕಾಶವನ್ನು ನೀಡಲಾಗಿತ್ತು. ಆದರೆ, ಈ ಪದ್ದತಿಗೆ ಇದೀಗ ಮಸ್ಕ್ ಬ್ರೇಕ್ ಹಾಕಿದ್ದಾರೆ.
ಇನ್ಮುಂದೆ ಸುದ್ದಿ ಆರ್ಟಿಕಲ್ ಲಿಂಕ್ ಅನ್ನು ಹಂಚಿಕೊಂಡರೂ ಹೆಡ್ಲೈನ್ ಮತ್ತು ಸಂಪೂರ್ಣ ಸುದ್ದಿ ಓದಲು ಇರುವ ಲಿಂಕ್ ಇಲ್ಲದೇ, ಕೇವಲ ಫೋಟೋವನ್ನು ಮಾತ್ರ ಬಿಂಬಿಸುತ್ತದೆ. ಇದರಿಂದ ಬಳಕೆದಾರರು ಇದು ನ್ಯೂಸ್ ಅರ್ಟಿಕಲ್ ಎಂದು ಅರಿಯಲು ಕಷ್ಟವಾಗುವುದರ ಜೊತೆಗೆ ಸುದ್ದಿಯನ್ನು ಓದಲು ಸಾಧ್ಯವಿಲ್ಲ.
ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಐಒಎಸ್ ಬಳಕೆದಾರರು ತಮ್ಮ ಸುದ್ದಿ ಲಿಂಕ್ ಅನ್ನು ಪೋಸ್ಟ್ ಮಾಡಲು ಹೋದಾಗ ಅವರಿಗೆ ಈ ಸಮಸ್ಯೆ ಎದುರಾಗಿದೆ. ಅಲ್ಲದೇ, ಪೋಸ್ಟ್ ಮಾಡಿದಾಗ ಕೇವಲ ಇಮೇಜ್ ಮತ್ತು ಡೊಮೈನ್ ಹೆಸರು ಮಾತ್ರ ಕಾಣಿಸಿಕೊಂಡಿದೆ. ಸುದ್ದಿಯ ಹೆಡ್ಲೈನ್ ಹಾಗೂ ಲಿಂಕ್ ನಾಪತ್ತೆಯಾಗಿದೆ ಎಂದು ವರ್ಜ್ ವರದಿ ಮಾಡಿದೆ.
ಕಂಗಾಲಾದ ಬಳಕೆದಾರರು: ಈ ಬದಲಾವಣೆಯಿಂದಾಗಿ ಎಕ್ಸ್ ಬಳಕೆದಾರರು ಸುದ್ದಿಯ ತಲೆ ಬರಹ ಇಲ್ಲದೇ, ಕೇವಲ ಇಮೇಜ್ ಮತ್ತು ಡೊಮೈನ್ ಹೆಸರನ್ನು ನೋಡಿ ಏನಿದು ಎಂದು ತಿಳಿಯದೇ ಕೆಲವು ನಿಮಿಷ ಅಚ್ಚರಿಗೆ ಒಳಗಾದರು.
ಇತ್ತೀಚೆಗಷ್ಟೇ ಮಸ್ಕ್ ತಮ್ಮ ಎಕ್ಸ್ ಫ್ಲಾಟ್ಫಾರ್ಮ್ನಲ್ಲಿ ನೇರವಾಗಿ ಹೆಚ್ಚೆಚ್ಚು ವಿಷಯಗಳನ್ನು ಪೋಸ್ಟ್ ಮಾಡಲು ಬಳಕೆದಾರರಿಗೆ ಪ್ರೋತ್ಸಾಹಿಸಿದ್ದರು. ಅಲ್ಲದೇ, ಕಳೆದ ತಿಂಗಳು ಆಗಸ್ಟ್ನಲ್ಲಿ ಪತ್ರಕರ್ತರಿಗೆ ನೇರವಾಗಿ ತಮ್ಮ ಸುದ್ದಿಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕ ಆದಾಯ ಪಡೆಯಬಹುದು ಎಂದು ಕೂಡ ತಿಳಿಸಿದ್ದರು.
ನಿಮ್ಮ ನ್ಯೂಸ್ ಅರ್ಟಿಕಲ್ ಅನ್ನು ಅನ್ನು ಕೇವಲ ಮುಖ್ಯ ಇಮೇಜ್ ಮತ್ತು ಯುಆರ್ಎಲ್ ಅನ್ನು ಪೋಸ್ಟ್ ಮಾಡಿದಾಗ ಎಕ್ಸ್ ಅದರ ತಲೆಬರಹ (ಹೆಡ್ಲೈನ್) ಮತ್ತು ಟೆಕ್ಸ್ಟ್ ಮತ್ತು ಲಿಂಕ್ ಅನ್ನು ಕಣ್ಮರೆಯಾಗಿಸಿ, ಕೇವಲ ಇಮೇಜ್ ಮಾತ್ರ ಪ್ರಕಟಿಸುತ್ತದೆ. ಇದು ನೇರವಾಗಿ ನನ್ನ ಬಳಿ ಬರುತ್ತಿದೆ. ಇದರ ಅಂದವನ್ನು ನಾವು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ಮಸ್ಕ್ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು.
ಇನ್ನು ಈ ಹೊಸ ಬದಲಾವಣೆಗೆ ಬಳಕೆದಾರರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ಅದ್ಬುತ ಎಂದಿದ್ದಾರೆ. ನಾನು ನಿಮ್ಮ ಫ್ಲಾಟ್ಫಾರ್ಮ್ನಲ್ಲಿ ಹಲವು ಬದಲಾವಣೆಗಳನ್ನು ನೋಡುತ್ತಿದ್ದೇವೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಇದು ಒಳ್ಳೆ ಐಡಿಯಾ ಎಂದು ನಾನು ಪರಿಗಣಿಸುವುದಿಲ್ಲ ಎಂದಿದ್ದಾರೆ ಬಳಕೆದಾರರೊಬ್ಬರು.
ಇದನ್ನೂ ಓದಿ: ಪ್ರತಿ ನಿಮಿಷಕ್ಕೆ ಲಕ್ಷಾಂತರ ಡಾಲರ್ ಗಳಿಕೆ! ಅಸಲಿಯತ್ತೇನು? ಎಲೋನ್ ಮಸ್ಕ್ ಸ್ಪಷ್ಟನೆ ಹೀಗಿದೆ..