ETV Bharat / science-and-technology

ಮೊಟೊ g13 ಸ್ಮಾರ್ಟ್​​ಫೋನ್ ಲಾಂಚ್: 10 ಸಾವಿರಕ್ಕೂ ಕಡಿಮೆ ಬೆಲೆ - ಗ್ಲೋಬಲ್ ಸ್ಮಾರ್ಟ್‌ಫೋನ್ ಬ್ರಾಂಡ್ ಮೊಟೊರೊಲಾ

ವಿಶ್ವದ ಪ್ರಮುಖ ಸ್ಮಾರ್ಟ್​ಫೋನ್ ತಯಾರಕ ಕಂಪನಿ ಮೊಟೊರೊಲಾ ಭಾರತದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ ಒಂದನ್ನು ಲಾಂಚ್ ಮಾಡಿದೆ. ಇದರ ಬೆಲೆ 9,499 ರಿಂದ ಆರಂಭವಾಗಲಿದೆ.

Motorola announces new affordable phone with 6.5-inch display in India
ಮೊಟೊ g13 ಸ್ಮಾರ್ಟ್​​ಫೋನ್ ಲಾಂಚ್: 10 ಸಾವಿರಕ್ಕೂ ಕಡಿಮೆ ಬೆಲೆ
author img

By

Published : Mar 29, 2023, 4:39 PM IST

ನವದೆಹಲಿ : ಗ್ಲೋಬಲ್ ಸ್ಮಾರ್ಟ್‌ಫೋನ್ ಬ್ರಾಂಡ್ ಮೊಟೊರೊಲಾ ತನ್ನ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಮೊಟೊ ಜಿ13 ಅನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಬುಧವಾರ ಪ್ರಕಟಿಸಿದೆ. ಹೊಸ ಸ್ಮಾರ್ಟ್ ಫೋನ್ 90Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ IPS LCD ಡಿಸ್​ಪ್ಲೇ ಹೊಂದಿರಲಿದೆ. ಹೊಸ ಮೊಟೊ g13 4GB RAM + 128GB ಸ್ಟೋರೇಜ್ ಮಾದರಿಗೆ ರೂ 9,999 ಮತ್ತು 4GB RAM + 64GB ಸ್ಟೋರೇಜ್ ಮಾದರಿಗೆ ರೂ 9,499 ಬೆಲೆ ನಿಗದಿ ಮಾಡಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಸಾಧನವು ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಮ್ಯಾಟ್ ಚಾರ್ಕೋಲ್ ಮತ್ತು ಲ್ಯಾವೆಂಡರ್ ಬ್ಲೂ ಈ ಎರಡು ಆಕರ್ಷಕ ವರ್ಣಗಳಲ್ಲಿ ಹೊಸ ಮೋಟೊ ಸ್ಮಾರ್ಟ್​ಫೋನ್ ಸಿಗಲಿದೆ. ಏಪ್ರಿಲ್ 5 ರಿಂದ ಫ್ಲಿಪ್​​ಕಾರ್ಟ್​, ಮೊಟೊರೊಲಾ ಡಾಟ್​ ಇನ್ ಪೋರ್ಟಲ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗಲಿದೆ. ಸ್ಮಾರ್ಟ್‌ಫೋನ್ ಅಕ್ರಿಲಿಕ್ ಗ್ಲಾಸ್ (PMMA) ಬಾಡಿ ಹೊಂದಿದೆ ಮತ್ತು ಅಲ್ಟ್ರಾ ತೆಳುವಾದ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ.

ಹೊಸ ಫೋನ್ ಉತ್ತಮ ಕಾರ್ಯಕ್ಷಮತೆಗಾಗಿ MediaTek Helio G85 ಪ್ರೊಸೆಸರ್‌ ಹೊಂದಿದೆ. 50MP ಕ್ವಾಡ್ ಪಿಕ್ಸೆಲ್ ಕ್ಯಾಮೆರಾ ಸಿಸ್ಟಮ್‌ ಇದ್ದು, ಇದು ಬಳಕೆದಾರರಿಗೆ ಸುಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದಲ್ಲದೆ, ಫೋನ್‌ನಲ್ಲಿ ಡಾಲ್ಬಿ ಅಟ್ಮಾಸ್‌ನಿಂದ ಟ್ಯೂನ್ ಮಾಡಲಾದ ಎರಡು ದೊಡ್ಡ ಸ್ಟಿರಿಯೊ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇದು ಬಳಕೆದಾರರಿಗೆ ಸುಮಧುರವಾದ ಸಂಗೀತದ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಹೊಸ ಸಾಧನವು 5000mAh ಬ್ಯಾಟರಿ ಹೊಂದಿದೆ.

Redmi Note 12 Turbo ಬಿಡುಗಡೆ: ಶಿಯೋಮಿ ಈಗ ಚೀನಾದಲ್ಲಿ Redmi Note 12 Turbo ಅನ್ನು ಬಿಡುಗಡೆ ಮಾಡಿದೆ. ಇದು ಒಂದು ವರ್ಷದ ನಂತರ ಇತರ ದೇಶಗಳಲ್ಲಿ POCO F5 ಹೆಸರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೆಡ್ಮಿ ನೋಟ್ 12 ಟರ್ಬೊ ಇದು ರೆಡ್ಮಿ ನೋಟ್ 12 ಸರಣಿಯ ಮತ್ತೊಂದು ಫೋನ್ ಆಗಿದೆ. ಇದು Snapdragon 7 Plus Gen 2 ಪ್ರೊಸೆಸರ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಶಿಯೋಮಿ ಪ್ರಕಾರ, ರೆಡ್ಮಿ ನೋಟ್ 12 ಟರ್ಬೊ ಇದರ ಅಳತೆ 161.11 x 74.95 x 7.9 mm ಆಗಿದೆ. ತೂಕ 181 ಗ್ರಾಂ ಮತ್ತು 67 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000 mAh ಬ್ಯಾಟರಿಯನ್ನು ಹೊಂದಿದೆ. ಉಳಿದ ರೆಡ್ಮಿ ನೋಟ್ 12 ಸರಣಿಯಂತೆ ಹ್ಯಾಂಡ್‌ಸೆಟ್ ಯಾವುದೇ ರೀತಿಯ ವೈರ್‌ಲೆಸ್ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿಲ್ಲ. ಹೆಚ್ಚುವರಿಯಾಗಿ, ರೆಡ್ಮಿ ನೋಟ್ 12 ಟರ್ಬೊ 6.67-ಇಂಚಿನ AMOLED ಡಿಸ್ ಪ್ಲೇ ಹೊಂದಿದ್ದು ಅದು 1080p, 120 Hz ಮತ್ತು 1,000 nits ವರೆಗೆ ಕಾರ್ಯನಿರ್ವಹಿಸುತ್ತದೆ. ಇದರ ಡಿಸ್​ಪ್ಲೇ 30 Hz, 60 Hz, 90 Hz ಮತ್ತು 120 Hz ನಡುವೆ ಅದರ ರಿಫ್ರೆಶ್ ದರವನ್ನು ಬದಲಾಯಿಸಬಹುದು ಎಂದು ಶಿಯೋಮಿ ತಿಳಿಸಿದೆ.

ಇದನ್ನೂ ಓದಿ : ಶಿಯೋಮಿ ಕಂಪೆನಿಯ 3700 ಕೋಟಿ ರೂ. ವಶಕ್ಕೆ ಪಡೆಯುವ ಆದೇಶ ರದ್ದು ಪಡಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.